Skip to main content

Posts

ಟೀಚರ್ ಕಿವಿ ಯಾತಕ್ಕೆ ಹಿಂಡುತ್ತಿದ್ದರೆಂದು ತಿಳಿದರೆ ಅಚ್ಛರಿ ಪಡುವಿರಿ!

     ನೀವು ಚಿಕ್ಕವರಾಗಿದ್ದಾಗ ಚಿಕ್ಕಪುಟ್ಟ ತಪ್ಪನ್ನು ಮಾಡಿರುತ್ತೀರಿ. ಹೆದರುತ್ತಲೇ ಚೇಷ್ಠೆ ನಡೆದೇಬಿಟ್ಟುರುತ್ತದೆ. ಇನ್ನೂ ಹಲವು ಬಾರಿ ಮಾಸ್ಟರ್ ಹೇಳಿದ ಮನೆಕೆಲಸ( Home work) ಮಾಡದೇ ತರಗತಿಗೆ ಹಾಜರಾಗಿರುತ್ತೀರಿ. ಎಲ್ಲಾ ಸಂಧರ್ಭಗಳಲ್ಲೂ Common ಅಂದ್ರೆ, ಶಿಕ್ಷೆಗೆ ಒಳಪಡುವುದು. ಅದರಲ್ಲೂ ಟೀಚರ್ ಬಂದು ಕಿವಿ ಹಿಂಡುವುದು!!! ಕಿವಿ ಹಿಂಡುವಿಕೆಯಲ್ಲಿ ವೈಜ್ಞಾನಿಕ ಕಾರಣವೊಂದು ಅಡಗಿದೆ.....           Vagus nerve ಎಂಬ ನರವು ಕಿವಿಯ ಚರ್ಮದ ಒಳಭಾದಲ್ಲಿ ಹರಿಯುತ್ತದೆ(Auricular branch of vagus nerve ಚಿತ್ತದಲ್ಲಿ ಕಾಣುತ್ತಿದೆ). ಈ ನರ ಹೃದಯ ಹಾಗೂ ಜೀರ್ಣಾಂಗ ವ್ಯವಸ್ಥೆ(Digestive system)ಗೂ ವ್ಯಾಪಿಸಿದೆ. ಇದರ ಕೆಲಸ ಏನು ಗೊತ್ತೇ? ಹೃದಯ ಬಡಿತವನ್ನು ಕಡಿಮೆ ಮಾಡಿ Stress ನ್ನು ಕ್ಷಮನ ಮಾಡುವುದು. ಜೀರ್ಣಾಂಗ ವ್ಯವಸ್ಥೆಯನ್ನು ಹುರಿದುಂಬಿಸಿ, ಆದಷ್ಟು ಬೇಗ ಆಹಾರ ಪಚ್ಛನವಾಗುವಂತೆ ನೋಡಿಕೊಳ್ಳುತ್ತದೆ. ಅಂದರೆ ಅನ್ನನಾಳ(Oesophagus), ಜಠರ(Stomach), ಸಣ್ಣ ಮತ್ತು ದೊಡ್ಡ ಕರುಳು( small and large intestine) ಇತ್ಯಾದಿ ನಾಳಗಳ propulsive movement(miximg movement)ನ್ನು ಹೆಚ್ಚು ಮಾಡುತ್ತದೆ. ಮತ್ತು ರಸಗಳು( enzyme secretions) ಹೆಚ್ಚಾಗುವುದು.     ಕಿವಿ ಹಿಂಡಿದಾಗ ಈ ನರ ಸಿಕ್ಕಾಪಟ್ಟೆ Active ಆಗುತ್ತದೆ. ಹೃದಯ ಬಡಿತ ಕಡಿಮೆಯಾಗಿ ಮನ ಶಾಂತಿ ಸಿಗುತ್ತದೆ. ಜೀರ್ಣಕ್ರಿಯೆ ವರ್ಧಿಸುತ್ತದೆ. ನೆ
Recent posts

ನ್ಯೂಟನಿನ ನಿಯಮವನ್ನು Apply ಮಾಡಿ ನೋಡಿ....ಸತ್ಯಕ್ಕೂ ಮಜಾ ಸಿಗುತ್ತದೆ!

  ನ್ಯೂಟನ್ ಎಂದಾಕ್ಷಣ ಹೊಳೆಯುವುದದೋ Apple tree! ಮೇಲಿಂದ ಒಂದು Apple ಬಿತ್ತು, ಅದರಿಂದಲೇ ನ್ಯೂಟನ್ Gravity ಕಂಡುಹಿಡಿದನೆಂದು ಓದಿರುತ್ತೀರಿ. ಕೆಲವರು ಕೇಳುವುದುಂಟು, "Apple tree ಬದಲು ಹಲಸಿನ ಮರದ ಕೆಳಗೆ ಕೂತಿದ್ದರೆ!" ಹೌದು, ಹೀಗೆ ಚಿತ್ರ ವಿಚಿತ್ರವಾಗಿ ಯೋಚಿಸಿ ನೋಡಬೇಕು. ಅವಾಗಲೇ ನೋಡಿ, ಮಜಾ ಸಿಗುವುದು. ನನಗೆ ಗೊತ್ತು Newton's lawವನ್ನು ಬಾಯಿಪಾಠ ಮಾಡಿ ಬರೆದವರೇ ಹೆಚ್ಚು. ಅದರ ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕಾಗಿತ್ತು ಅನಿಸುತ್ತಿದೆಯೇ? ಪಕ್ಕಾ ಹೇಳ್ತಿದ್ದೇನೆ. ಇದು ಬೋರಿಂಗ್ ಅಲ್ಲ.     "Rate of change of momentum is the external force applied on body and momentum is in the direction of the force applied"       2nd law ಅಂತ ಗೊತ್ತಾಗಿದೆ. ಇದರ Equation ,                     F= ma ಏನಿದು ಸ್ವಾಮಿ?  F ಅಂದರೆ Force, m= mass ಮತ್ತು a= ಅಂದರೆ acceleration. ಯಾರನ್ನು ಕೇಳಿದರೂ ಹೇಳ್ಳ್ತಾರೆ. Special ಆಗಿರಬೇಕೆಂದರೆ Different ಆಗಿ ಯೋಚಿಸಬೇಕು. ಈಗ ನಿಜವಾದ ಅರ್ಥ ಕೊಟ್ಟಂತಾಗುತ್ತದೆ. ನಾನು ಸಿಂಪಲ್ ಆಗಿ Define ಮಾಡ್ತೆನೆ ನೋಡಿ......           ಒಂದು ವಸ್ತುವನ್ನು ತೆಗೆದುಕೊಳ್ಳಿ. ಆ ವಸ್ತುವಿನ ಮೇಲೆ ಬಲ(Force) ಪ್ರಯೋಗ ಮಾಡುತ್ತೇನೆ. ಅದಲ ರಾಶಿ(mass) m ಎಂದಿರಲಿ. ಆ forceಗೆ acceleration(a) ಪಡೆಯುತ್

ಆಕೆ ಆತ್ಮಹತ್ಯೆ ಮಾಡಿಕೊಂಡಳು, ತಪ್ಪು ಯಾರದ್ದು ಹಾಗಾದರೆ!

"ಹೊಟ್ಟೆಗೆ ಹಿಟ್ಟಿಲ್ಲ, ಆದರೂ ಜುಟ್ಟಿಗೆ ಮಲ್ಲಿಗೆ ಹೂ" ಯಾಕೋ ತಮಿಳುನಾಡಿನವರಿಗೆ ಬಹಳಷ್ಟು ಹೊಂದಿಕೆಯಾಗುತ್ತದೆ. ಅಲ್ಲಿನ ಸರ್ಕಾರ ಕೊಡುವ 'ಭಾಗ್ಯ'ಗಳಿಗೇನು ಕಡಿಮೆ ಇಲ್ಲ ಬಿಡಿ! ಅಮ್ಮ ಕ್ಯಾಂಟೀನ್, ಅಮ್ಮ ಸೀರೆ, ಅಮ್ಮ ಉಪ್ಪು, ಅಮ್ಮ ಲ್ಯಾಪ್ ಟಾಪ್, ಅಮ್ಮ ಮೊಬೈಲ್, ಅಮ್ಮ....ಅಮ್ಮ....ಅಮ್ಮ......! ರಾಜಕಾರಣಿಗಳು ಜನರ ದುಡ್ಡನ್ನು ಕೊಳ್ಳೆ ಹೊಡೆದು, ಎಲೆಕ್ಷನ್ ಟೈಮಲ್ಲಿ ಇಂತಹ Short term ಆಮಿಷಗಳನ್ನು ತೋರಿಸಿ, ಜನತೆಯ ತುಟಿಗೆ ತುಪ್ಪ ಸವರುತ್ತಾರೆ. ಪಾಪ ಜನರ ಪಾಲಿಸಿ ಏನಂದ್ರೆ 'ಓಟಿಗಾಗಿ ನೋಟು'!! ರೋಡು , ಶಿಕ್ಷಣ, ವಸತಿ ಅಂತ ಬೀದಿಗಿಳಿದದ್ದೇ ಇಲ್ಲ. ಸಿನೆಮಾವನ್ನು ಹಚ್ಚಿಕೊಂಡಷ್ಟು ತಮ್ಮ ಜೀವನವನ್ನೇ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ.     ಶೈಕ್ಷಣಿಕವಾಗಿ ಮುಂದುವರೆಲು ಯೋಚಿಸಲೇ ಇಲ್ಲ ತಮಿಳು ನಾಡು. ದ್ವಿತೀಯ ಪಿಯು ಮುಗಿದ ನಂತರ ಬೋರ್ಡ್ ಎಕ್ಸಾಮ್ ಮಾರ್ಕ್ ನೋಡಿ ಮೆಡಿಕಲ್ ಸೀಟ್ ಹಂಚುವುದು ಸಲೀಸಾಗಿತ್ತು ಅವರಿಗೆ. ಆ ಪ್ರಕ್ರಿಯೆಗಳಲ್ಲಿ ಎಷ್ಟು ಅಕ್ರಮ ನಡೆಯುತ್ತದೋ ಏನೋ . ಅವರದ್ದೇ ಸರ್ಕಾರ, ಅವರದ್ದೇ ಬೋರ್ಡ್ ಎಕ್ಸಾಮ್, ಅವರದ್ದೇ ಪ್ರಶ್ನೆ ಪತ್ರಿಕೆ, ಅವರೇ ಮೆಡಿಕಲ್ ಸೀಟಿನ ಡಿಸ್ಟ್ರಿಬ್ಯೂಟರ್ಸ್! ಅಲ್ಲಿನವರಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಇರುವವರು ಒಂದಿಷ್ಟು ಮಂದಿ ಮಾತ್ರ ಅನಿಸುತ್ತದೆ. ಏಕೆಂದರೆ ನಮ್ಮ ಕರ್ನಾಟಕದಲ್ಲಿರುವಂತೆ ಸಿ.ಇ.ಟಿ ಇರಲೇ ಇಲ್ಲ. ಅದೇ ಕಾರಣಕ್ಕೆ ಮಾಜಿ ಮ

Corridor purana

ಕಾರಿಡಾರ್‍ನಲ್ಲಿ ಒಂದು ರೌಂಡ್ . . . . ……………………………………………… ಕಾರಿಡಾರಿನಲ್ಲಿ ನಿಂತ ನಾಲ್ಕು ಹುಡುಗರು    ಸ್ವಾತಿಯನ್ನು ಪಾಪ ಗೇಲಿ ಮಾಡುತ್ತಿದ್ದರು..... ……………………………………………………… ಕಾಲೇಜು ಕ್ಯಾಂಪಸ್ಸಿನ ಪ್ರಮುಖ ಅಡ್ಡಗಳಲ್ಲಿ ಕಾರಿಡಾರ್ ಕೂಡ ಒಂದು. ನಮ್ಮ ಕಾಲೇಜಿನ ಕಾರಿಡಾರನ್ನು ನಾಲ್ಕಾರು ದಿನ ಬಿಡದೇ ಸುತ್ತಿದ ನನಗೆ ಹಲವು ಸೋಜಿಗದ ವಿಚಾರಗಳು ಅರಿವಿಗೆ ಬಂತು. ಕ್ಲಾಸ್ ಫ್ರೀ ಇರುವಾಗ ಗ್ರಂಥಾಲಯಕ್ಕೆ ಹೋಗದೆ, ಕೆಲವು ಗಂಡ್ ಹೈಕ್ಳು ಆ ತರಗತಿಯಿಡೀ ದೇವಸ್ಥಾನದಲ್ಲಿ ಗರ್ಭಗುಡಿಯನ್ನು ಸುತ್ತಿದಂತೆ ಕಾರಿಡಾರ್ ಸುತ್ತುತ್ತಾರೆ. ತರಗತಿಯಲ್ಲಿ  ಪಾಠ ಕೇಳುತ್ತಿರುವ ತಮ್ಮ ಸ್ನೇಹಿತರ ಹೊಟ್ಟೆ ಉರಿಸಲು ಕಾರಿಡಾರ್ ಸುತ್ತುವುದು ಕೆಲವು ವಿದ್ಯಾರ್ಥಿಗಳ ದಿನಚರಿಯಾಗಿರುತ್ತದೆ. ಹಾಗೆ ಸುತ್ತು ಹಾಕುವಾಗ ಒಂದಷ್ಟು ಕ್ಯೂಟ್ ಹೆಣ್ಮಕ್ಳಿಗೆ ಲೈನ್ ಹಾಕೋದು ಅವರ ಅಜೆಂಡಾಗಳಲ್ಲಿ ಒಂದು. ಹೆಣ್ಮಕ್ಳನ್ನು ಚುಡಾಯಿಸುವ ಗಂಡ್‍ಹೈಕ್ಳು ಲೈನ್ ಹಾಕಿದರೆ ಸಾಲದೆಂಬಂತೆ ಕೆಲವರಿಗೆ ಪಾಪದ ಹೆಣ್ಮಕ್ಕಳ ಅಟೆಂಡನ್ಸ್ ಕರೆಯುವ ಅಭ್ಯಾಸವೂ ಇದೆ. ಯಾರ ತಂಟೆಗೂ ಹೋಗದ ಪಾಪದ ಹೆಣ್ಮಕ್ಕಳ ಹೆಸರನ್ನು ಜೋರಾಗಿ ಕರೆದು ನೀನು ಪ್ರೆಸೆಂಟಾ ಅಲ್ಲಾ ಆಬ್ಸೆಂಟಾ ಎಂದು ವ್ಯಂಗ್ಯವಾಡುವ ಚಾಳಿ ಪಡ್ಡೆಗಳದ್ದು. ಕಲರ್ ಡ್ರೆಸ್ ದಿನವಂತು ಹೆಣ್ಮಕ್ಕಳಿಗೆ ತಲೆ ಎತ್ತಿ ಓಡಾಡದ ಪರಿಸ್ಥಿತಿ. ಬಣ್ಣ ಬಣ್ಣದ ದಿರಿಸಿನಲ್ಲಿ ಕಂಗೊಳಿಸುವ ನಾರೀಮಣಿಯರಿಗೆ ಕಮೆಂಟ್ ಹಾಕದಿದ್ದರೆ ಹುಡುಗರಿಗ

'ರಾಗಿಂಗ್' ನಿಜಕ್ಕೂ ಇದೆಯಾ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಠಿಣ!

  ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!     ಇಂಜಿನಿಯರಿಂಗ್,  ಆರ್ಟ್ಸ್  ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ.  ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು.  ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1%  ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ    ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವುದೇ ತೊಂದರೆಗಳನ್ನು ಉಂಟುಮಾಡುವುದಿಲ್ಲ. ಮೊದಲಿತ್ತು

ಹೇಗಿರುತ್ತೆ ಗೊತ್ತಾ 1st Year MBBS? ನಿಮ್ಮ ಕುತೂಹಲಕ್ಕೊಂದು ಪೂರ್ಣ ವಿರಾಮ!!!

ಎಮ್.ಬಿ.ಬಿ.ಎಸ್ ಅಂದ್ರೆ ನಿಮಗೆ ನೆನಪು ಬರುವುದು ಉಪ್ಪಿದಾದ ಇಲ್ಲಾಂದ್ರೆ ಮುನ್ನಾಬಾಯ್. ನನ್ನ ಪ್ರಕಾರ ಅವೆಲ್ಲವೂ ಸಿನೆಮಾ ಹಾಲ್ನಲ್ಲಿ   ನೋಡಲು ಚಂದ. ಅಲ್ಲಿಯ ಚಿತ್ರಣವೇ ಬೇರೆ...ನೈಜತೆಯೇ ಬೇರೆ. ಈ ಡಿಜಿಟಲ್ ಹೊತ್ತಗೆಯ  ಹಾಳೆಯೊಳು ನನ್ನದೊಂದು ಸಿಹಿಕಹಿ ಅನುಭವಗಳ ಸಂಗ್ರಹ ನಿಮ್ಮ ಮುಂದೆ.....     ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ  ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉಳಿಸಲು ಏರೋಪ್ಲೇನ್ ಮೂಡಲ್ಲೇ ಇಟ್ಟಿ

ನಾವೆಲ್ಲರೂ ಸಮಾನರು. 【ಮಾನವರಲ್ಲಿ ಮೂರು ವಿಧ.....ಗಂಡು, ಹೆಣ್ಣು, ಹಾಗೂ ಮಂಗಳಮುಖಿಯರು】

                 ನಾವೆಲ್ಲರೂ ಸಮಾನರು     (ಮಾನವರಲ್ಲಿ ಮೂರು ವಿಧ             -ಹೆಣ್ಣು            -ಗಂಡು            -ಮಂಗಳಮುಖಿ)               ನಾವೆಲ್ಲರೂ ಒಂದೇ , ಸಮಾನರು ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ತಮ್ಮತಮ್ಮದೇ ಆದ ಸ್ಥಾನವಿದೆ, ಮೌಲ್ಯವಿದೆ. "ಎಲ್ಲಾ ಚರ ಹಾಗೂ ಅಚರ ಜೀವಿಗಳಲ್ಲಿರುವ ಆ ಜೀವಕ್ಕೆ , ಆತ್ಮಕ್ಕೆ ಕಾರಣವಾದ 'ಚೈತನ್ಯ' - ಪರಮಾತ್ಮ" -  ಈ ವಾಕ್ಯವು ಒಂದು ರೀತಿಯಲ್ಲಿ ಆಧ್ಯಾತ್ಮಿಕತವಾದದಂತೆಯೇ ತೋರುತ್ತದೆ. ಆದರೆ ಕೊನೇ ಪಕ್ಷ ಮಾನವರಾದ ನಾವೆಲ್ಲರೂ ಸಮಾನರು ಎಂಬುವುದನ್ನಾದರೂ ಒಪ್ಪಿಕೊಳ್ಳಲೇಬೇಕಲ್ಲವೇ?            ಭಾರತದ ಇತಿಹಾಸವನ್ನು ನೋಡುತ್ತಾ ವೇದಗಳ ಕಾಲಕ್ಕೆ ತೆರಳಿದರೆ ಅಂದು ಸ್ತ್ರೀಯರಿಗೂ ಪುರುಷರಿಗೂ ಮೌಲಿಕವಾದ ಸ್ಥಾನ ಇತ್ತು ಎನ್ನಲಾಗುತ್ತಿದೆ. ತದನಂತರ ಪುರುಷಪ್ರಧಾನ  ಸಮಾಜ ನಿರ್ಮಾಣವಾಯಿತು, ಅದು ಇಂದಿಗೂ ಪ್ರಭಾವ ಬೀರುವಲ್ಲಿ ಹಿಂದೆ ಬಿದ್ದಿಲ್ಲ - ಎನ್ನುವ ಕೂಗು ಹಲವಾರು ಮಹಿಳಾ ಸಂಘಟನೆಗಳಿಂದ ಕೇಳಿ ಬರುತ್ತಿದೆ. ಆದರೆ ಇದರೊಡನೆಯೇ..--  "ಮಹಿಳೆ ಅಬಲೆಯಲ್ಲ ಸಬಲೆ" ಎಂಬ ಮಾತೂ ಕೇಳಸಿಗುತ್ತದೆ. ಆದರೆ ಕಳೆದ ಹಲವಾರು ದಶಕಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆಬರುತ್ತಿರುವುದು, ಬಂದಿರುವುದು ಮಾತ್ರ ನಿಜ. ಇದಕ್ಕಾಗಿ ಹೋರಾಡಿದ ಹಲವಾರು ವ್ಯಕ್ತಿಗಳೂ, ಸರ್ಕಾರದ ಹಲವಾರು ಹಲವಾರು ಸವಲತ್ತುಗಳೂ ಇದಕ್ಕೆ ಕಾರಣಗಳಾಗಿರಬಹುದು.