ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉಳಿಸಲು ಏರೋಪ್ಲೇನ್ ಮೂಡಲ್ಲೇ ಇಟ್ಟಿದ್ದೆ. ಅದೇ ಮುಳುವಾಯಿತು ಅನಿಸುತ್ತಿದೆ. ಹಿಂತಿರುಗಿ ಬಂದು, ಅದೇ ಸ್ಥಳದಲ್ಲಿ ನೋಡಿದರೂ ಪ್ರಯೋಜನವಿಲ್ಲ. ಕಣ್ಣಿಗೆ ಕಾಣುವಷ್ಟೇ ದೂರದಲ್ಲಿತ್ತು ಆರಕ್ಷಕ ಠಾಣೆ. ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಪೋಲಿಸ್ ಪೇದೆಯೋರ್ವರು ಹೇಳಿದರು, ಕಳೆದಿದ್ದನ್ನು ಮರಳಿ ಪಡೆಯಬಹುದೆಂದು. ಮತ್ತೊಮ್ಮೆ ಕೇಳಿದೆ " ಮೊಬೈಲ್ ಸಿಗಬಹುದಾ ಸಾರ್...."ಅವರು ಪ್ರತಿಕ್ರಿಯಿಸಿದ್ದು ಹೀಗೆ. " ಮೊಬೈಲ್ ಅಲ್ಲ. ಕಂಪ್ಲೈಂಟ್ ಕೊಟ್ಟು , ಹೊಸ ಸಿಮ್ ಗೆ ಎಪ್ಲೈ ಮಾಡಿ. ನಂತರ ಅದೇ ನಂಬರಿನ ಸಿಮ್ ಕೊಡ್ತಾರೆ." ಕಳೆದು ಹೋದ ಮೊಬೈಲ್ , ಒಂದು ರೀತಿಯಲ್ಲಿ ಅಪಶಕುನ ಎಂಬತೆ ಸೂಚಿಸಿತ್ತು......
ಅಕ್ಟೋಬರ್ 3ರಂದು ಹಾಸ್ಟೆಲ್ ಗೆ ಹೋಗಿ ಲಗೇಜ್ ಇಟ್ಟು ಸಭಾ ಕಾರ್ಯಕ್ರಮಕ್ಕೆ ತೆರಳಿದೆವು. ಎಲ್ಲವೂ ಸುಸೂತ್ರವಾಗಿಯೇ ನಡೆಯಿತು. ಕಾಲೇಜು ಮುಂಭಾಗದಲ್ಲೇ ಕುಟುಂದದೊಂದಿಗೆ ಸೆಲ್ಫಿ ಸೆರೆಯಾಯಿತು. ಈವರೆಗೆ ಕಂಡುಕೇಳರಿಯದರದ ಭಾರದ,ದಪ್ಪದ ಪುಸ್ತಕಗಳು ನನ್ನ ಮಡಿಲಿಗೆ ಬಂದವು. ಎಲ್ಲವನ್ನೂ ಕಣ್ಣು ಹಾಯಿಸಿ ನೋಡಿದೆ, ಇಂಟೆರೆಸ್ಟಿಂಗ್ ಅನಿಸಿತು. ಇದ್ದದ್ದು ಕೇವಲ ಮೂರೆ ಸಬ್ಜೆಕ್ಟು. ಇದೇ ಮೂರು, ಓದಲಿಕಿದ್ದದ್ದು ಸುಮಾರು ಒಂದು ಮಾರು!! 4ಕ್ಕೆ ತರಗತಿ ಆರಂಭ ಅಂದಿದ್ದರು. ನಾನೇನೂ, ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಬೆಳಗ್ಗೆ 8:30 ಕ್ಕೆ ಹೋದೆ. ಸ್ಟೂಡೆಂಟ್ ಯಾರೂ ಕಾಣಲಿಲ್ಲ. ಮಧ್ಯಾನದ ನಂತರ ಶುರು ಮಾಡುತ್ತಾರೆ ಅಂದುಕೊಂಡೆ. ಅಲ್ಲಿ ಒಬ್ಬರನ್ನು ವಿಚಾರಿಸಿದ ನಂತರ ತಿಳಿಯಿತು,ತರಗತಿ ಸರಿಯಾಗಿ 8ಕ್ಕೆ ಪ್ರಾರಂಭಿಸಿದೆಯೆಂದು. ಮುಗಿಯಿತು ನನ್ನ ಕಥೆ! ಫಸ್ಟ್ ಡೇ,ಫಸ್ಟ್ ಕ್ಲಾಸ್ ಮಿಸ್ ಆದರೆ ಮುಂದಾಗುವ ತೊಂದರೆಗಳೇ ನನ್ನ ತಲೆಯಲ್ಲಿದ್ದವು. ಮುಂದಿನ ಅವಧಿಗೆ 149 ವಿದ್ಯಾರ್ಥಿಗಳಿದ್ದ ದೊಡ್ಡ ತರಗತಿಗೆ ಹೋದೆ. ಎಲ್ಲರೂ ನನ್ನನ್ನೇ ನೋಡಿದ್ದನ್ನು ಕಂಡು ಒಂಚೂರು ಗಾಭರಿಗೊಂಡು, ಮೊದಲ ರೋ ದಲ್ಲಿ ಕುಳಿತೆ. ಆಮೇಲೆ ಗೊತ್ತಾಯಿತು. ಅವರು ಬಿಳಿ ಕೋಟ್ ಧರಿಸಿದ್ದರು. ನಾನು ಫಾರ್ಮಲ್ ಡ್ರೆಸ್ ಹಾಕಿ ಹೋಗಿದ್ದೆ ಅಷ್ಟೆ. ಯಾವಾಗಲೂ ಆ ಬಿಳಿಕೋಟ್ ಧರಿಸಿಯೇ ಪಾಠ ಆಲಿಸಬೇಕೆಂದು ನನಗೇನು ಕನಸು ಬಿದ್ದಿತ್ತಾ? ಅದೃಷ್ಟವಶಾತ್ ಯಾವ ಶಿಕ್ಷಕರೂ ಇರಲಿಲ್ಲ.
ಗಮನವಿಟ್ಟು 'ಅನಾಟಮಿ' ಪಿರಿಡ್ ಪಾಠ ಕೇಳಿದೆ. ಅದು ಒಂದಷ್ಟು ಹಿಸ್ಟರಿ ಮತ್ತು ವಿಜ್ಞಾನಿಗಳ ಬಗ್ಗೆ ಆಗಿತ್ತು. ಆ ದಿನ ಅದೂ ಕೂಡಾ ಬಹಳ ಮುಖ್ಯವೇನೋ; ಎಂದು ಭಾವಿಸಿ , ಓದಿ ಬಿಟ್ಟೆ. ನಾಳೆ ಖಂಡಿತವಾಗಿಯೂ ಪ್ರಶ್ನೆ ಕೇಳೆಯಾರು ಎನ್ನುತ್ತಲೇ ಹಾಸ್ಟೆಲ್ನಿಂದ ತುಸು ದೂರ ಹೆಜ್ಜೆ ಇಟ್ಟೆ. ಏನೂ ಕೇಳಲಿಲ್ಲ. ಬೇರೆ ಬೇರೆ ವಿಷಯಗಳು ಮುಂದುವರೆಯಿತೇ ಹೊರತು, ಒಬ್ಬನನ್ನೇ ನಿಲ್ಲಿಸಿ, ಗಧರಿಸಿ ಪ್ರಶ್ನಿಸಲೇ ಇಲ್ಲ. ನಾನೂ ಹೆಚ್ಚು ತಲೆಕೆಡಿಸಲಿಲ್ಲ. ಒಂದೇ ಸಬ್ಜೆಕ್ಟ್ ಆದರೂ ದಿನಂಪ್ರತಿ ಬೇರೆ ಬೇರೆ ಲೆಕ್ಚರ್ ಗಳು! ಒಂದು ಲೆಕ್ಕದಲ್ಲಿ ನಮಗೂ ವರವಾಯಿತು.
11 ಗಂಟೆ ಆಯಿತು. ಕೆಳ ಮಹಡಿಯಲ್ಲಿದ್ದ ವಿಷಾಲವಾದ ಕೊಠಡಿ ನಮಗಾಗಿ ಕಾಯುತ್ತಿತ್ತು. ಹೋದರೆ, ಕೆಮಿಕಲ್ ವಾಸನೆ ಬಡಿಯಿತು.ಕಣ್ಣು ಹಾಗೂ ಮೂಗಲ್ಲಿ ಉರಿಯಾಗಿ ನೀರು ಬಂತು. ಶ್ವೇತ ವಸ್ತ್ರ ಹಾಸಿ, ಟೇಬಲ್ಗಳ ಮೇಲೆ ಮಲಗಿಸಿದ್ದ ಜೀವ ರಹಿತ ದೇಹಗಳು. ಹೆಣಗಳು ಎಂದರೆ ತಪ್ಪಾಗಬಹುದೇನೋ? ಏಕೆಂದರೆ ಅವುಗಳೇ ನಮ್ಮ ನೈಜ ಶಿಕ್ಷಕರು. ಕೆಲವರಿಗೆ ಮುಟ್ಟಲು ಭಯ. ಧೈರ್ಯವಂತರೆನಿಸಿಕೊಂಡವರು ತಲೆಯ ಬಳಿ ಸ್ಪರ್ಶಿಸತೊಡಗಿದರು. 10 ಜನರ ವೈದ್ಯ ಶಿಕ್ಷಕರ ಆಗಮನವಾಯಿತು. ನಮ್ಮೆಲ್ಲರ ಕೈಯಲ್ಲೂ 'ಕನ್ನಿಂಗ್ಹ್ಯಾಮ್ ' ಎಂಬ ಬೇಸಿಕ್ ಬುಕ್ ಇತ್ತು. "ಅದರ ಮೊದಲ 19 ಪುಟಗಳನ್ನು ಓದಿರಿ, ನಿಮ್ಮಿಂದ ಉತ್ತರವನ್ನು ನಿರೀಕ್ಷಿಸಲಾಗುವುದು"ಎಂದರು. 120 ನಿಮಿಷಗಳು ಉರುಳಿದ ನಂತರ, ನೀವಿನ್ನು ಊಟಕ್ಕೆ ತೆರಳಬಹುದೆನ್ನುವ ಮುನ್ನ ಕೆಲವು ನಿಯಮಗಳನ್ನು ಹೇಳಿದರು.....
" ನಾಳೆ ನಾಡಿದ್ದೋ ಬಾಡಿ ಕೊರೆಯುವುದಿದೆ. ಬೇಕಾದ ಸಲಕರಣಿಗಳನ್ನು ತಂದರೆ ಮಾತ್ರ ಪ್ರವೇಶ. ಎಲರ್ಜಿ ಇದ್ದವರು ಮಾತ್ರ ಗ್ಲೌಸ್ ಬಳಸಬಹುದು.11ರಿಂದ 1 ಗಂಟೆಯವರೆಗೆ ದಿನವೂ ಡಿಸೆಕ್ಷನ್(ಬಾಡಿ ಕೊರೆಯುವುದು) ಇರುತ್ತದೆ". ಅಯ್ಯೇ... ಬಾಡಿ ಕೊರೆದು, ಬರಿಗೈಯಲ್ಲಿ ಮುಟ್ಟಿ, ಊಟ ಮಾಡುವುದಾದರೂ ಹೇಗೆಂಬ ಚಿಂತೆ! ಇಂದು ಡಿಸೆಕ್ಷನ್ ಶುರುವಾಗುತ್ತದೆ, ನಾಳೆ ಆಗುತ್ತದೆ ಎಂದು 2 ವಾರ ಆ ಟೈಮ್(11ರಿಂದ 1ಗಂಟೆಯವರೆಗೆ) ಬುಕ್ ಓದುತ್ತಾ ಕಳೆದೆವು. ಒಂದು ದಿನ ಆ ಪುಸ್ತಕದಲ್ಲಿರುವಂತೆ ಚರ್ಮವನ್ನು ಮಾತ್ರ ಕತ್ತರಿಸಿ ಎಂದರು. ನಮಗೆ ಭಯವಿದ್ದದ್ದೇನೆಂದರೆ ಅಕಸ್ಮಾತ್ ಕತ್ತರಿಸುವಾಗ ಹೆಚ್ಚುಕಮ್ಮಿಯಾಗಿ ಬೈಗಳುಗಳಿಗೆ ತುತ್ತಾಗುವೆನೋ ಎಂದು. ದೆವ್ವ ಭೂತ ಎಲ್ಲವೂ ಕೇವಲ ಸಿನೆಮಾದಲ್ಲಿ ಅಷ್ಟೇ. ನಾನಂತೂ ಇದುವರೆಗೆ ನೋಡಲಿಲ್ಲ. ಆ ವಿಷಯದನುಸಾರ ಮತ್ತಾರೂ ತಲೆ ತಿರುಗಿ ಬೀಳಲಿಲ್ಲ.ಮಾತ್ರ ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡದೇ ಒಂದೆರಡು ಜನ ಬಿದ್ದಿದ್ದಾರೆ! ನನ್ನತ್ರ ತುಂಬಾ ಮಂದಿ(ನೆರೆಹೊರೆಯವರು, ಇತರ ಕ್ಷೇತ್ರದ ಸ್ನೇಹಿತರು) ಡೌಟ್ ಕೇಳುವುದುಂಟು....
1) ಬಾಡಿ ಕಟ್ ಮಾಡಿ ಮತ್ತೊಮ್ಮೆ ಹೊಲಿಯುವುದುಂಟಾ?
2) ಒಂದು ವರ್ಷಕ್ಕೆ ಎಷ್ಟು ಬಾಡಿ?
3) ಆ ಬಾಡಿ ಕೊಳೆತು ವಾಸನೆ ಬರುವುದೋ?
4) ಎಷ್ಟು ಜನ ಇರುತ್ತಾರೆ ಒಂದು ತರಗತಿಯಲ್ಲಿ?
ನಾವು ಒಳಗೇನಿದೆ ಎಂಬ ಸಂಗತಿ ತಿಳಿಯಲು ಬಾಡಿಯನ್ನು ಕ್ರಮ ಬದ್ಧವಾಗಿ ಕತ್ತರಿಸಲಾಗುವುತು. ಮೊದಲು ಚರ್ಮ ನಂತರ ಫ್ಯಾಟ್ ಅನಂತರ ಮಾಂಸ, ಸ್ನಾಯು ಮತ್ತು ಅಂಗಗಳನ್ನು ಕಲಿಯುತ್ತೇವೆ.

ರಕ್ತನಾಳ(Blood vessels),ನರವ್ಯೂಹ(nerves) ಚಿತ್ರದಲ್ಲಿ ನೋಡುವಂತೆ ಎಲ್ಲವೂ ರಾಶಿ ಕರೆಂಟ್ ವಯರ್ ರೀತಿ ಇರುತ್ತದೆ. ಅವುಗಳಿಗೂ ಒಂದೊಂದು ಹೆಸರುಗಳು! ಮೊದಲ ವರ್ಷ 70,000 ಹೊಸ ಶಬ್ಧಗಳನ್ನು ತಲೆಗೆ ತುಂಬಿಸಬೇಕೆಂದರೆ ನಂಬುವಿರಾ?
15 ವಿದ್ಯಾರ್ಥಿಗಳುಳ್ಳ ಒಂದು ಟೇಬಲಿಗೆ , ವರ್ಷಕ್ಕೆ ಒಂದೇ ಬಾಡಿ. ಫಾರ್ಮಾಲಿನ್ ಬಳಸುವುದರಿಂದ ಬಾಡಿ ಎಷ್ಟು ಸಮಯಕ್ಕೂ ಕೊಳೆಯುವುದಿಲ್ಲ. ಆ ಕೆಮಿಕಲ್ ವಾಸನೆ ಮಾತ್ರ ಸ್ವಲ್ಪ ಕಿರಿಕಿರಿ ಉಂಟು ಮಾಡುತ್ತದೆ. ಮೊದಲ ವರ್ಷದ ಎಲ್ಲಾ ಮಕ್ಕಳಿಗೂ(150 ಜನ)ಕ್ಕೂ ಒಂದು ದೊಡ್ಡ ತರಗತಿ. ಇದೊಂದೇ ನೀವು ಸಿನೆಮಾಗಳಲ್ಲಿ ಗಮನಿಸಬಹುದಾದ ಸತ್ಯ.
ಅನುದಿನವೂ ಓದುತ್ತಾ ಹೋದರೂ, ಮುಗಿಯದಂತಹಾ ಜ್ಞಾನರಾಶಿ. ಪರೀಕ್ಷಾ ಸಮಯವಂತೂ ಘನಘೋರ.ನೆನಪಿರಲಿ ಪಾಸಿಂಗ್ ಮಾರ್ಕ್ 35 ಅಲ್ಲ, 50!! 50 ಅಂಕ ಪಡೆಯುವುದು ಅತ್ಯಂತ ಕಠಿಣ. ಪಿಯುನಲ್ಲಿ 90-100 ತೆಗೆಯುವವರು ಒಂದು ಕ್ಷಣ ವಿಚಲಿತರಾಗುತ್ತಾರೆ. 70-75 ಹೈಯಸ್ಟ್ ಸ್ಕೋರ್. ಅಂದರೆ ಪಾಸ್ ಆದವನಿಗೂ ಟಾಪರ್ ಆದವನಿಗೂ ಇರುವ ವ್ಯತ್ಯಾಸ ಕೇವಲ 20 ಮಾರ್ಕ್ ಅಷ್ಟೆ!!! ದ್ವಿತೀಯ ಪಿಯುನಲ್ಲೂ ಇಷ್ಟು ಕಷ್ಟದ ಸಮಯವನ್ನು ನಾನು ಕಳೆದಿಲ್ಲ. ತಾಂತ್ರಿಕ ವಿದ್ಯಾರ್ಥಿಗಳೂ ಒಪ್ಪುತ್ತಾರೆ ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಓದುವುದು ಬಹಳಷ್ಟಿದೆ ಎಂದು.
365 ದಿನಗಳ ಅನುಭವವನ್ನು ಒಂದೇ ಅಂಕಣದಲ್ಲಿ ಬರೆಯಬಹುದಾ? ನೀವೆ ಹೇಳಿ. ಇದೀಗ ನನಗನಿಸುತ್ತಿದೆ, ಲೇಖನದ ಹೆಡ್ಡಿಂಗ್ ನಲ್ಲಿ ಪೂರ್ಣವಿರಾಮ ಎನ್ನುವಲ್ಲಿ ಅಲ್ಪವಿರಾಮ ಎಂದಿದ್ದರೆ ಚೆನ್ನಾಗಿತ್ತು. ಏಕೆಂದರೆ ಈ ಲೇಖನವು ಮುಂದುವರೆಯುತ್ತದೆ...............

ಧನ್ಯವಾದಗಳು...
ಲೇಖನ ಚೆಂದ ಆಯ್ದು👌
ReplyDeleteಧನ್ಯವಾದಗಳು...
Deleteಇನ್ನೂ ಲಾಯ್ಕ ಬರವಲೆ ಪ್ರಯತ್ನಿಸುತ್ತೆ...
👏👌
ReplyDelete😊😊
DeleteMBBS madida hange atu appachhi
ReplyDeleteHehe....thank u
DeleteVery true😀 good job👏
ReplyDeleteThank u Shayari...😊
Delete