Skip to main content

ನ್ಯೂಟನಿನ ನಿಯಮವನ್ನು Apply ಮಾಡಿ ನೋಡಿ....ಸತ್ಯಕ್ಕೂ ಮಜಾ ಸಿಗುತ್ತದೆ!

  ನ್ಯೂಟನ್ ಎಂದಾಕ್ಷಣ ಹೊಳೆಯುವುದದೋ Apple tree! ಮೇಲಿಂದ ಒಂದು Apple ಬಿತ್ತು, ಅದರಿಂದಲೇ ನ್ಯೂಟನ್ Gravity ಕಂಡುಹಿಡಿದನೆಂದು ಓದಿರುತ್ತೀರಿ. ಕೆಲವರು ಕೇಳುವುದುಂಟು, "Apple tree ಬದಲು ಹಲಸಿನ ಮರದ ಕೆಳಗೆ ಕೂತಿದ್ದರೆ!" ಹೌದು, ಹೀಗೆ ಚಿತ್ರ ವಿಚಿತ್ರವಾಗಿ ಯೋಚಿಸಿ ನೋಡಬೇಕು. ಅವಾಗಲೇ ನೋಡಿ, ಮಜಾ ಸಿಗುವುದು. ನನಗೆ ಗೊತ್ತು Newton's lawವನ್ನು ಬಾಯಿಪಾಠ ಮಾಡಿ ಬರೆದವರೇ ಹೆಚ್ಚು. ಅದರ ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕಾಗಿತ್ತು ಅನಿಸುತ್ತಿದೆಯೇ? ಪಕ್ಕಾ ಹೇಳ್ತಿದ್ದೇನೆ. ಇದು ಬೋರಿಂಗ್ ಅಲ್ಲ.
    "Rate of change of momentum is the external force applied on body and momentum is in the direction of the force applied"
      2nd law ಅಂತ ಗೊತ್ತಾಗಿದೆ.
ಇದರ Equation , 
                   F= ma
ಏನಿದು ಸ್ವಾಮಿ?  F ಅಂದರೆ Force, m= mass ಮತ್ತು a= ಅಂದರೆ acceleration. ಯಾರನ್ನು ಕೇಳಿದರೂ ಹೇಳ್ಳ್ತಾರೆ. Special ಆಗಿರಬೇಕೆಂದರೆ Different ಆಗಿ ಯೋಚಿಸಬೇಕು. ಈಗ ನಿಜವಾದ ಅರ್ಥ ಕೊಟ್ಟಂತಾಗುತ್ತದೆ. ನಾನು ಸಿಂಪಲ್ ಆಗಿ Define ಮಾಡ್ತೆನೆ ನೋಡಿ......
    
     ಒಂದು ವಸ್ತುವನ್ನು ತೆಗೆದುಕೊಳ್ಳಿ. ಆ ವಸ್ತುವಿನ ಮೇಲೆ ಬಲ(Force) ಪ್ರಯೋಗ ಮಾಡುತ್ತೇನೆ. ಅದಲ ರಾಶಿ(mass) m ಎಂದಿರಲಿ. ಆ forceಗೆ acceleration(a) ಪಡೆಯುತ್ತದೆ. ಇದೀಗ F ಅಂದರೆ ಆ ವಸ್ತುವಿನ ಮೇಲಿರುವ Net force. a  ಅಂದರೆ ನಿಮ್ಮ ಕಣ್ಣಿಗೆ ಕಾಣುವ acceleration. ಉದಾಹರಣೆ ಇಲ್ಲಾಂದ್ರೆ ನಿಮಗೇನೂ ಅರ್ಥವಾಗೊಲ್ಲ ಅಲ್ವಾ?
    
     F ಅಂದ್ರೆ net force ಅಂತ ನಿಮಗೆ ಗೊತ್ತು. ಹಾಗಾದರೆF ಅಂದ್ರೆ mg-N ( ಕೆಳಮುಖ ದಿಕ್ಕನ್ನು standard ಎಂದು ಭಾವಿಸಿದಾಗ). N ಅಂದರೆ floor ಆ box ನ ಮೇಲೆ upward directionಲ್ಲಿ ಹಾಕುವ Normal force. ಭೂಮಿಯು downward directionಲ್ಲಿ box ನ್ನು ಎಳೆಯಲು ಬಳಸುವ force(mg).
ಚಿತ್ರದಲ್ಲಿ ತೋರುವಂತೆಯೇ ನೀವು free ಆಗಿ ಕೆಳಬೀಳುತ್ತಿರುವ  ಲಿಫ್ಟಿನಲ್ಲಿ ಇದ್ದೀರಿ. ಅದರ floorಲ್ಲಿ ಒಂದು Box ಇದೆ( ಇದನ್ನೇ system ಎಂದು ತೆಗೆದುಕೊಳ್ಳೋಣ) ಈಗ F=ma apply ಮಾಡಿ.
    a ಅಂದ್ರೆ ಕಣ್ಣಿಗೆ ಕಾಣುವ acceleration. ನೀವೂ ಕೂಡಾ ಲಿಫ್ಟಿನಲ್ಲಿ ಇರುವ ಕಾರಣ ಆ box ಚಲಿಸದಂತೆ(Static) ಕಾಣುತ್ತದೆ.  ನಿಮ್ಮ ಪ್ರಕಾರ(relatively) ನಿಮ್ಮ ಕಣ್ಣಿಗೆ ತೋಚುವಂತೆ acceleration(a)= 0 
              F=ma
  Substitute ಮಾಡಿದಾಗ,
      mg-N=m(0)
            N= mg..........................(1)
  
   
ಇನ್ನೊಂದು ಸನ್ನಿವೇಶ. ಬೀಳುತ್ತಿರುವ ಲಿನ್ನಫ್ಟಿನಲ್ಲಿ ಕೇವಲ box ಇದೆ. ನೀವು Ground floorಲ್ಲಿ ಇದ್ದುಕೊಂಡು ಗಮನಿಸುತ್ತಿದ್ದೀರಿ. ನೀವಂತೂ F=ma ಸಂಪೂರ್ಣವಾಗಿ ತಿಳಿದಿದ್ದೀರಿ. ನಿಮ್ಮ ಲೆಕ್ಕ ಕೆಳಗಿನಂತಿರಬಹುದು.   F= net force on the box= mg-N
ನಿಮ್ಮ ಪ್ರಕಾರ ಈಗ ಆ box, free fallನಲ್ಲಿ ಇರುವಂತೆ ಕಾಣುತ್ತದೆ. ಹಾಗಾದರೆ a=ಕಣ್ಣಿಗೆ ಕಾಣುವ acceleration=g   
       Substitution ಮಾಡಿದಾಗ,
            mg-N=m(g)
                   N=0..........................(2)

  ನೀವು ನೋಡಿದ್ದು ಮಾತ್ರ ಬೇರೆ ಬೇರೆ ಕಡೆಯಿಂದ. ಆದರೆ ಆ Box ನ ಸ್ಥಿತಿ ಎರಡೂ ಸನ್ನಿವೇಶಗಳಲ್ಲೂ ಒಂದೆ ಆಗಿದೆ. ಆದರೂ equation(1) ಮತ್ತು (2) ನ್ನು ಗಮನಿಸಿದರೆ N=mg, N= 0 ಎಂದು ದ್ವಂದ್ವವಾಗಿದೆ. ಯಾವುದು ಸತ್ಯ? ಯಾವುದು ಮಿಥ್ಯ? ನೀವು ಯಾವ ಜಾಗದಿಂದ ನೋಡುವಿರೋ ಆ ಜಾಗವನ್ನು frame of reference ಎನ್ನುವುದು. ಭೂಮಿಯಿಂದ ನೋಡಿದರೆ ಭೂಮಿಯೇ frame of reference. ಲಿಫ್ಟಿನಿಂದ ನೋಡಿದರೆ ಲಿಫ್ಟ್ frame of reference.
   
   N=0 ಸತ್ಯ!! ಎಂದರೆ, ನೀವು ground floor(earth)ನಿಂದ ನೋಡಿ ಲೆಕ್ಕ ಹಾಕಿದ್ದು ಸರಿ ಇದೆ.  ಎಲ್ಲಾ frame of reference ಸರಿಯಾದ ಉತ್ತರ ಕೊಡಲಾರದು. ಕೇವಲ standard frame of reference ನಲ್ಲಿ ನಿತ್ತು ಲೆಕ್ಕ ಹಾಕಿದಾಗ ಬರುವ ಉತ್ತರ ಸರಿಯಾಗಿರುವುದು. ನಮ್ಮ ಮಟ್ಟಿಗೆ ಭೂಮಿ(earth=ground floor) standard frame of reference.
   
   ಹಾಗಾದರೆ ಲಿಫ್ಟಿನಲ್ಲಿ ಕೂತು ಲೆಕ್ಕ ಮಾಡಬೇಕಾದರೆ , ಏನು ಮಾಡಬೇಕು?
Pseudo force ನ್ನು add ಮಾಡಬೇಕು. ಇಡೀ ಲಿಫ್ಟೇ ಕೆಳಗಿನ ದಿಕ್ಕಿನಲ್ಲಿ' g' accelerationನಲ್ಲಿ ಚಲಿಸುತ್ತಿದೆ. ಚಲಿಸುತ್ತಿರುವ ವಿರುದ್ಧ ದಿಕ್ಕಿನಲ್ಲಿ (upward) ಗಮನಿಸುತ್ತಿರುವ ವಸ್ತು(box)ವಿನ ಮೇಲೆ pseudo force[ (mass of box )× (acceleration of the frame of reference where you are standing) ] ಇದೆ ಎಂದು ಸುಮ್ಮನೆ ಬರೆದು ಲೆಕ್ಕ ಹಾಕಿದರೆ ಸರಿಯಾದ ಉತ್ತರ ದೊರೆಯುತ್ತದೆ. 
      ಇದೀಗ Pseudo force= mg

    F = (mg-N)-psedo force=  m(0)
    F = (mg-N)- mg = 0
     =>    N= 0   
      
                 ಮೂಲ ಲೇಖನ
       'The concepts of  Physics'
                By H.C Verma
         ಧನ್ಯವಾದಗಳು......
   
  
 




Comments

Popular posts from this blog

ಹೇಗಿರುತ್ತೆ ಗೊತ್ತಾ 1st Year MBBS? ನಿಮ್ಮ ಕುತೂಹಲಕ್ಕೊಂದು ಪೂರ್ಣ ವಿರಾಮ!!!

ಎಮ್.ಬಿ.ಬಿ.ಎಸ್ ಅಂದ್ರೆ ನಿಮಗೆ ನೆನಪು ಬರುವುದು ಉಪ್ಪಿದಾದ ಇಲ್ಲಾಂದ್ರೆ ಮುನ್ನಾಬಾಯ್. ನನ್ನ ಪ್ರಕಾರ ಅವೆಲ್ಲವೂ ಸಿನೆಮಾ ಹಾಲ್ನಲ್ಲಿ   ನೋಡಲು ಚಂದ. ಅಲ್ಲಿಯ ಚಿತ್ರಣವೇ ಬೇರೆ...ನೈಜತೆಯೇ ಬೇರೆ. ಈ ಡಿಜಿಟಲ್ ಹೊತ್ತಗೆಯ  ಹಾಳೆಯೊಳು ನನ್ನದೊಂದು ಸಿಹಿಕಹಿ ಅನುಭವಗಳ ಸಂಗ್ರಹ ನಿಮ್ಮ ಮುಂದೆ.....     ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ  ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉ...

'ರಾಗಿಂಗ್' ನಿಜಕ್ಕೂ ಇದೆಯಾ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಠಿಣ!

  ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!     ಇಂಜಿನಿಯರಿಂಗ್,  ಆರ್ಟ್ಸ್  ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ.  ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು.  ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1%  ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ    ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವ...

ಮೊದಲು ಬೇಸಿಕ್ ಕಲಿಯಿರಿ....Part 1

       ನಮ್ಮ ಬಹಳಷ್ಟು ವಿಜ್ಞಾನ ಪಠ್ಯ ಪುಸ್ತಕದಲ್ಲಿ ದೊಡ್ಡ ದೊಡ್ಡ ನಿಯಮಗಳಿವೆ. ನ್ಯೂಟನ್ ನಿಯಮ, ಐನ್ಸ್ಟೀನ್ಸ್  ಥಿಯರಿ ಆಫ್ ರಿಲೇಟಿವಿಟಿ, ಫ್ಲೆಮಿಂಗ್ಸ್ ಲಾ ಇತ್ಯಾದಿ. ಪ್ರೌಢ ಶಿಕ್ಷಣದಿಂದ ಹಿಡಿದು ಒಂದಷ್ಟು ಪಿಯು ವಿದ್ಯಾರ್ಥಿಗಳು ಇವುಗಳನ್ನ ಕಂಠಪಾಠ ಮಾಡುತ್ತಾ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಅಕಸ್ಮಾತ್ ಅವನಿಗೆ ದಿನಾಂಕ ನಿಗದಿಪಡಿಸದೇ ಅನಿರೀಕ್ಷಿತವಾಗಿ ನಾಲ್ಕು ಪ್ರಶ್ನೆಯನ್ನು ಮುಂದಿಟ್ಟರೆ ಆತ ಉತ್ತರಿಸುವನೇ? ನಾನು ಕೇಳುದು, ಇವನು ಓದಿ ಏನಾದರೂ ಪ್ರಯೋಜನ ಉಂಟಾ ಅಂತ! ನನ್ನನ್ನು ನಂಬಿ. ಇಂದು ಅನೇಕರು ಓದಿಗೆ ಈ ಮಾರ್ಗವನ್ನೇ ಆರಿಸಿದ್ದಾರೆ.  ಕಿ.ಮೀ/ಗಂಟೆ  ಯನ್ನು   ಮೀ/ಸೆಕೆಂಡಿಗೆ ಬದಲಿಸಲು ಫಾರ್ಮುಲಾ ಗೊತ್ತಿಲ್ಲದೇ  ಸಾಧ್ಯವಿಲ್ಲ ಎಂಬ ಮನಸ್ಥಿತಿಯವರಿದ್ದಾರೆ. ಕಾಮನ್ ಸೆನ್ಸ್ ಇದ್ದರೆ ಸಾಕು ಬದಲಿಸಲು. ನೋಡಿ, ಫಾರ್ಮುಲ ಕಲಿಯಬೇಕು ನಿಜ. ಅದರೊಂದಿಗೆ ಅದು ಹೇಗೆ ಉದ್ಭವಿಸಿತು ಎಂದು ನೋಟವನ್ನು ಹಾಯಿಸಬೇಕು. ಆಗ ಫಾರ್ಮುಲಾ ಮರೆತು ಹೋದರೂ ಅದನ್ನು ನೀವೇ ಕಂಡುಕೊಳ್ಳಬಲ್ಲಿರಿ.       ಹಾಗಾದರೆ ಹೇಗೆ ಓದಬೇಕು? ಈ ಮೇಲಿನ ಕೆಲವು ನಿಯಮಗಳನ್ನು ರಾತ್ರಿ 12 ಗಂಟೆಗೆ ಬಡಿದೆಬ್ಬಿಸಿ ಕೇಳಿದರೂ ಅದಕ್ಕೆ ಕಾರಣ ಸಹಿತ ಉತ್ತರ ನೀಡುವಂತಿರಬೇಕು! ಸಿಂಪಲ್ಲಾಗಿ ಹೇಳಬೇಕೆಂದರೆ, ಬೇಸಿಕ್ ಕಲಿಯತಕ್ಕದ್ದು.  ಓಮನ ನಿಯಮ(oh...