ನಾವೆಲ್ಲರೂ ಸಮಾನರು
(ಮಾನವರಲ್ಲಿ ಮೂರು ವಿಧ
-ಹೆಣ್ಣು
-ಗಂಡು
-ಮಂಗಳಮುಖಿ)
ನಾವೆಲ್ಲರೂ ಒಂದೇ , ಸಮಾನರು ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ತಮ್ಮತಮ್ಮದೇ ಆದ ಸ್ಥಾನವಿದೆ, ಮೌಲ್ಯವಿದೆ. "ಎಲ್ಲಾ ಚರ ಹಾಗೂ ಅಚರ ಜೀವಿಗಳಲ್ಲಿರುವ ಆ ಜೀವಕ್ಕೆ , ಆತ್ಮಕ್ಕೆ ಕಾರಣವಾದ 'ಚೈತನ್ಯ' - ಪರಮಾತ್ಮ" - ಈ ವಾಕ್ಯವು ಒಂದು ರೀತಿಯಲ್ಲಿ ಆಧ್ಯಾತ್ಮಿಕತವಾದದಂತೆಯೇ ತೋರುತ್ತದೆ. ಆದರೆ ಕೊನೇ ಪಕ್ಷ ಮಾನವರಾದ ನಾವೆಲ್ಲರೂ ಸಮಾನರು ಎಂಬುವುದನ್ನಾದರೂ ಒಪ್ಪಿಕೊಳ್ಳಲೇಬೇಕಲ್ಲವೇ?
ಭಾರತದ ಇತಿಹಾಸವನ್ನು ನೋಡುತ್ತಾ ವೇದಗಳ ಕಾಲಕ್ಕೆ ತೆರಳಿದರೆ ಅಂದು ಸ್ತ್ರೀಯರಿಗೂ ಪುರುಷರಿಗೂ ಮೌಲಿಕವಾದ ಸ್ಥಾನ ಇತ್ತು ಎನ್ನಲಾಗುತ್ತಿದೆ. ತದನಂತರ ಪುರುಷಪ್ರಧಾನ ಸಮಾಜ ನಿರ್ಮಾಣವಾಯಿತು, ಅದು ಇಂದಿಗೂ ಪ್ರಭಾವ ಬೀರುವಲ್ಲಿ ಹಿಂದೆ ಬಿದ್ದಿಲ್ಲ - ಎನ್ನುವ ಕೂಗು ಹಲವಾರು ಮಹಿಳಾ ಸಂಘಟನೆಗಳಿಂದ ಕೇಳಿ ಬರುತ್ತಿದೆ. ಆದರೆ ಇದರೊಡನೆಯೇ..-- "ಮಹಿಳೆ ಅಬಲೆಯಲ್ಲ ಸಬಲೆ" ಎಂಬ ಮಾತೂ ಕೇಳಸಿಗುತ್ತದೆ. ಆದರೆ ಕಳೆದ ಹಲವಾರು ದಶಕಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆಬರುತ್ತಿರುವುದು, ಬಂದಿರುವುದು ಮಾತ್ರ ನಿಜ. ಇದಕ್ಕಾಗಿ ಹೋರಾಡಿದ ಹಲವಾರು ವ್ಯಕ್ತಿಗಳೂ, ಸರ್ಕಾರದ ಹಲವಾರು ಹಲವಾರು ಸವಲತ್ತುಗಳೂ ಇದಕ್ಕೆ ಕಾರಣಗಳಾಗಿರಬಹುದು. ಇದು ಒಂದೆಡೆಯಾದರೆ ಜಾತಿ ಪಂಗಡಗಳು ಇನ್ನೊಂದೆಡೆ. ಜಾತಿ ತಾರತಮ್ಯ, ಕೆಳಜಾತಿಯ ತುಳಿತ - ಇದೂ ನಡೆದುಕೊಂಡು ಬಂದಿದೆ . ಆದರೆ ಇದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಹೀಗಾಗಿ ಈ ತಾರತಮ್ಯ,ತುಳಿತಗಳೂ ಕಡಿಮೆಯಾಗುತ್ತಿದೆ. ಇದರ ಹಿಂದೆಯೂ ಹಲವಾರು ಕಾರಣಗಳಿವೆ.
ಆದರೆ ನಾನೀಗ ಹೇಳ ಹೊರಟಿರುವುದು,ಈ ವಿಷಯಗಳ ಬಗೆಗೆ ಅಲ್ಲ. ಮಹಿಳೆಯರಾಗಲೀ ಅಥವಾ ಕೆಳಜಾತಿಯವರಾಗಲೀ ತುಳಿಯಲ್ಪಟ್ಟುದರಿಂದ ಬಹುಪಾಲು ಹೆಚ್ಚೇ ತುಳಿತಕ್ಕೊಳಗಾದ ಹಾಗೂ ಇಂದಿಗೂ ಅದರ ಕಹಿಯನ್ನು ಅನುಭವಿಸುತ್ತಿರುವ ಇನ್ನೊಂದು ಮಾನವ ಪಂಗಡದ ಬಗೆಗೆ...
ಅದೇ ಮಂಗಳಮುಖಿಯರ ಬಗೆಗೆ.....
ಆದರೆ ನಾನೀಗ ಹೇಳ ಹೊರಟಿರುವುದು,ಈ ವಿಷಯಗಳ ಬಗೆಗೆ ಅಲ್ಲ. ಮಹಿಳೆಯರಾಗಲೀ ಅಥವಾ ಕೆಳಜಾತಿಯವರಾಗಲೀ ತುಳಿಯಲ್ಪಟ್ಟುದರಿಂದ ಬಹುಪಾಲು ಹೆಚ್ಚೇ ತುಳಿತಕ್ಕೊಳಗಾದ ಹಾಗೂ ಇಂದಿಗೂ ಅದರ ಕಹಿಯನ್ನು ಅನುಭವಿಸುತ್ತಿರುವ ಇನ್ನೊಂದು ಮಾನವ ಪಂಗಡದ ಬಗೆಗೆ...
ಅದೇ ಮಂಗಳಮುಖಿಯರ ಬಗೆಗೆ.....
ಜಾತಿಯ ವಿಷಯಕ್ಕಾಗಿ ಇಲ್ಲವೇ ಮಹಿಳೆಯರಿಗಾಗಿ ದನಿಯೆತ್ತುವ ಸಭ್ಯ, ನಾಗರಿಕ ಸಮಾಜದ ಪ್ರಜ್ಞಾವಂತ ಪೌರರೆನಿಸಿರುವ ನಾವುಗಳು ಈ ವಿಷಯದಲ್ಲಿ ಏಕೆ ಮೌನಿಗಳಾಗಿದ್ದೇವೆ..? ನಿಜಕ್ಕೂ ವಿಷಾದ.... ನಾವು ಎಂದಾದರೂ ಈ ಬಗೆಗೆ ಯೋಚಿಸಿದ್ದೇವೆಯೇ..?
ಹೋಗಲಿ...ಮೊತ್ತಮೊದಲನೆಯದಾಗಿ , ಮಂಗಳಮುಖಿ ಅಥವಾ Third gender ಎಂದರೇನು?ಇದಕ್ಕೆ ಹಲವರ ಮನದಲ್ಲಿ ಬರುವ ಉತ್ತರ ಎಂದರೆ - ಹಿಜ್ಡಾ, ಚಕ್ಕ , ಒಂಬತ್ತು , ಚಪ್ಪಾಳೆ ತಟ್ಟೊ ಮಾಮಾ, ಡಬಲ್ ಡೆಕ್ಕರ್....ಇತ್ಯಾದಿ. ಈ ಶಬ್ದಗಳೇ ಅವರ ಸಾಮಾಜಿಕ ಸ್ಥಾನ ಮಾನವನ್ನು ಕಣ್ಣಮುಂದಿಡುತ್ತದೆ. ಆದರೆ ವೈಜ್ಞಾನಿಕವಾಗಿ ಮಂಗಳಮುಖಿ ಎಂದರೆ ...... ಗಂಡೂ ಅಲ್ಲ , ಹೆಣ್ಣೂ ಅಲ್ಲ. ಮೂರನೇ ಲಿಂಗ. ಮೊದಲು ನಾವು ನಮ್ಮ ಮನದಲ್ಲಿ "ಮಾನವರಲ್ಲಿ ಭೇದ ಎಂದರೆ ಗಂಡು ಹಾಗೂ ಹೆಣ್ಣು " ಎನ್ನುವುದನ್ನು ಅಳಿಸಿ, "ಗಂಡು, ಹೆಣ್ಣು ಹಾಗೂ ಮಂಗಳಮುಖಿ" ಎನ್ನುವುದನ್ನು ತಿಳಿಯಬೇಕು. ಇನ್ನೂ ವಿಷಯದ ಆಳಕ್ಕೆ ಹೋಗಿ ನೋಡುವುದಾದರೆ , ಇದಕ್ಕೆ ಕಾರಣ ವಂಶವಾಹಿನಿ-ಕ್ರೋಮೋಜೋಮುಗಳು. ಅವುಗಳ ಆಟ ಸಂಪೂರ್ಣ ಬಲ್ಲವರು ಮಾರೂ ಇಲ್ಲ.ಹೀಗಾಗಿ ಸುಲಭವಾಗಿ ಹೇಳಬೇಕೆಂದರೆ,ಇದೂ ಒಂದು ರೀತಿಯಲ್ಲಿದೇವರ ಆಟ. ಅವರುಗಳ ಸಂಖ್ಯೆ ಗಂಡು ಹೆಣ್ಣಿನ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆ. ಅಲ್ಲದೇ ಸಂತಾನೋತ್ಪತ್ತಿ ಬಲು ಕಷ್ಟ. (ಕೆಲವು ಕ್ಲಿಷ್ಟ ವೈದ್ಯಕೀಯ ಚಿಕಿತ್ಸೆಗಳಿಂದ ಸಾಧ್ಯ. ನೈಸರ್ಗಿಕವಾಗಿ ಸಾಧ್ಯವಿಲ್ಲ)
ಹಾಗೆಂದಮಾತ್ರಕ್ಕೆ ಅವರನ್ನು ತುಳಿಯಬೇಕೆ?ಅವರನ್ನು ಹೀನಾಯವಾಗಿ ಕಾಣಬೇಕೆ?ಅಥವಾ ಮುಖ್ಯವಾಹಿನಿಯಿಂದ ದೂಲವಿಡಬೇಕೆ?....ಖಂಡಿತಾ ಇಲ್ಲ. ಇದು ನಿಜಕ್ಕೂ ಅಪರಾಧ.
ಮಂಗಳಮುಖಿಯರ ಬಗೆಗೆ ಒಂದು ಬಾರಿ ಯೋಚಿಸಿ ನೋಡಿ. ಹುಟ್ಟಿನಿಂದ ಎಲ್ಲರಂತೆ ಬೆಳೆಯುತ್ತಾರೆ. ಒಂದು ಹಂತ ಕಳೆದ ನಂತರ ಹಾರ್ಮೋನುಗಳ ಬದಲಾವಣೆಯಿಂದ ಮಾನಸಿಕವಾಗಿ ಆಸೆಗಳಲ್ಲಿ , ನಡತೆಗಳಲ್ಲಿ ಏರುಪೇರು ಕಂಡುಬರುತ್ತದೆ. ಮುಂದೆ ಲಿಂಗ ಪರಿವರ್ತನೆ ಆಗಿರುವುದೆಂದು ತಿಳಿದ ನಂತರ ಹೆತ್ತ ತಂದೆ ತಾಯಿಯರೇ ಮನೆಯಿಂದಲೇ ಹೊರದಬ್ಬುತ್ತಾರೆ!!! ಇದರೊಡನೆ ಉಳಿದೆಲ್ಲಾ ಸಮಾಜದಿಂದ ಹೀನಾಯವಾಗಿ ಕಾಣುವ, ಮನಸ್ಸನ್ನು ಕುಗ್ಗಿಸುವ ನೋಟ , ತಿರಸ್ಕಾರ!!! ಎಲ್ಲವನ್ನೂ ಆ ಪುಟ್ಟ ಹೃದಯ, ಮನಸ್ಸು ಅದು ಹೇಗೆ ತಾನೇ ತಡೆದುಕೊಳ್ಳಲು ಸಾಧ್ಯ?? ಮುಂದೆ ಬದುಕುವ ಒಂದೇ ಒಂದು ಆಸೆಯಿಂದ ಸಮಾನಮನಸ್ಕರಾದ ಈ ಮಂಗಳಮುಖಿಯರೆಲ್ಲಾ ಒಂದುಗೂಡಿ ಒಂದೆಡೆ ಜೀವಿಸುತ್ತಾರೆ. ಸ್ವಂತವಾಗಿ ದುಡಿದು ತಿನ್ನುವ ಹಂಬಲವಿದ್ದರೂ ನಮ್ಮ ಸಮಾಜ ಅದಕ್ಕೆ ಅವಕಾಶವೇ ನೀಡುವುದಿಲ್ಲ.... ಅವರನ್ನು ಭಿಕ್ಷೆ ಬೇಡುವ ಕೂಪಕ್ಕೆ ತಳ್ಳಿ ಬಿಡುತ್ತದೆ. ನೀವೇ ಹೇಳಿ ನಿಮ್ಮ ಮನೆಯಲ್ಲಿಯೋ ಅಂಗಡಿಯಲ್ಲಿಯೋ ಅಂತಹವರನ್ನು ಸೇರಿಸಿಕೊಳ್ಳಲು ತಯಾರಿರುವಿರಾ?ಬಹಳ ವಿರಳ.


ಸೀರೆ ಉಟ್ಟು , ಲಕ್ಷಣವಾಗಿ ಕುಂಕುಮದ ತಿಲಕವಿಟ್ಟರೂ ದಿನವೂ ಕ್ಷೌರ ಮಾಡಿಕೊಳ್ಳುವ(ಮೀಸೆ ,ದಾಡಿ) ಪರಿಸ್ಥಿತಿ ಇವರದು. ದೇಹದೊಳಗಿನ ಬದಲಾವಣೆಗಳಿಗೆ ಹೊಂದಿಕೊಳ್ಳುವುದೇ ದೊಡ್ಡ ಸವಾಲಾಗಿ ಇರುವಾಗ, ಸಮಾಜದ ಇಂತಹ ತಿರಸ್ಕಾರಕ್ಕೆ ಅವರುಗಳ ಮನಸ್ಸು ಹೇಗೆ ಸ್ಪಂದಿಸುತ್ತದೆ...ಎಂದರೆ ಇವರಲ್ಲಿ ಹಲವಾರು ವಿಕೃತರಾಗುತ್ತಾರೆ , ಕ್ರೂರಿಗಳಾಗುತ್ತಾರೆ. ಆದರೆ ಇದಕ್ಕೆ ಕಾರಣ ನಾವೇ ಎಂದರ ಬಹುಶಃ ತಪ್ಪಾಗಲಾರದು .
ವಿದ್ಯಾವಂತರೂ, ಅಕ್ಷರಸ್ಥರೂ ಆಗಿರುವ ನಾವುಗಳು ಇಂತಹ ತುಳಿಯುವ ಸಮಾಜದ ಸದಸ್ಯರಾಗ ಬಾರದು. ಎಲ್ಲರನ್ನೂ ಸಮಾನರಾಗಿ ಕಾಣುವ ಸಮಾಜದ ಸದಸ್ಯರಾಗಬೇಕು. ನಮ್ಮಂತೆಯೇ ಮಾನವರೇ ಆಗಿರುವ ಅವರುಗಳು 'ನಮ್ಮ ಸಮಾನರು' ಎಂಬುದನ್ನು ಮೊದಲು ನಮ್ಮ ಮನಸ್ಸಿಗೆ ಅರ್ಥೈಸಬೇಕು. ಇನ್ನು ನಾವೆಲ್ಲರೂ ಒಂದಾಗಿ ಅವರೆಲ್ಲರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಪಾತ್ರವಹಿಸಬೇಕು. ಅವರು ನಮ್ಮಂತೆಯೇ ನಮ್ಮೊಡನೆಯೇ ಇದ್ದು, ದುಡಿದು, ಮಾನವಂತರಾಗಿ ಬಾಳುವಂತಾಗಬೇಕು....ಹೀಗೆಂದ ಮಾತ್ರಕ್ಕೆ ಅವರನ್ನು ಮುಖ್ಯವಾಹಿನಿಗೆ ಕರೆತರುವ ಯಾವ ಕೆಲಸಗಳೂ ಆಗುತ್ತಿಲ್ಲವೆಂದಲ್ಲ. ಆದರೆ ಅದರ ದರ ಬಹಳ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಬೇಕು ಎಂದು.
ಇದುವರೆಗೆ ಭಾರತದಲ್ಲಿ ಈ ನಿಟ್ಟಿನಲ್ಲಿ ಕೆಲವು ಕಾರ್ಯಗಳು ನಡೆದಿವೆ. ಹಾಗೇ ಮಂಗಳಮುಖಿಯರಲ್ಲಿ ಕೆಲವರು ಸಾಧನೆಗಳನ್ನೂ ಮಾಡಿದ್ದಾರೆ.
ಮೊದಲನೇದಾಗಿ ಭಾರತದಲ್ಲಿ 1994ರಲ್ಲಿ ಇವರನ್ನು Third sex ಎಂದು ಗುರುತಿಸಲಾಯಿತು. ಅಲ್ಲದೆ ಮೂಲಭೂತ ನಾಗರಿಕ-ಹಕ್ಕುಗಳನ್ನು ಒದಗಿಸಲಾಯಿತು.(ಆದರೆ ಯಾವುದೇ ಸರ್ಕಾರಿ ಹುದ್ದೆಗಳಾಗಲಿ, ಮತದಾನಕ್ಕಾಗಲೀ ಅವಕಾಶ ನೀಡಲಿಲ್ಲ . 2009ರಲ್ಲಿ ಮತದಾನ ಮಾಡಲು ಮುಂದಾದ ಮೂವರು ಮಂಗಳಮುಖಿಯರಿಗೆ ಅವಕಾಶ ನಿರಾಕರಿಸಲಾಗಿದೆ. ಗುರುತಿನ ಚೀಟಿಯಲ್ಲಿ ,ಮತದಾರರ ಪಟ್ಟಿಯಲ್ಲಿ , 'ಲಿಂಗ' ಎನ್ನುವ ಕಾಲಂನಲ್ಲಿ ಭರ್ತಿ ಮಾಡಲು ಇದ್ದುದು ಎರಡೇ ಅವಕಾಶ. ಗಂಡು/ಹೆಣ್ಣು. ಮೂರನೆಯದು ಇರಲೇ ಇಲ್ಲ )
ಮುಂದೆ ಹಲವಾರು ಹೋರಾಟ ಪ್ರಕರಣಗಳ ನಂತರ ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದನ್ನು ನೀಡಿತು. ಇದರ ಅಡಿಯಲ್ಲಿ ಮಂಗಳಮುಖಿಯರು 3rd gender ಎಂದು ಗುರುತಿಸಲ್ಪಟ್ಟಿದ್ದು ಮಾತ್ರವಲ್ಲದೆ, ಸರಕಾರದ ಹಲವಾರು ಸವಲತ್ತುಗಳನ್ನು ಪಡೆಯಲು ಅರ್ಹರಾದರು. ಮತದಾನ, ಗುರುತಿನ ಚೀಟಿ, ಶಿಕ್ಷಣ ಹುದ್ದೆಗಳು, ಪಾಸ್ಪೋರ್ಟ್ ಇತ್ಯಾದಿಗಳನ್ನು ಒಳಗೊಂಡಂತೆ.
ಮುಂದೆ ಹಲವಾರು ಹೋರಾಟ ಪ್ರಕರಣಗಳ ನಂತರ ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದನ್ನು ನೀಡಿತು. ಇದರ ಅಡಿಯಲ್ಲಿ ಮಂಗಳಮುಖಿಯರು 3rd gender ಎಂದು ಗುರುತಿಸಲ್ಪಟ್ಟಿದ್ದು ಮಾತ್ರವಲ್ಲದೆ, ಸರಕಾರದ ಹಲವಾರು ಸವಲತ್ತುಗಳನ್ನು ಪಡೆಯಲು ಅರ್ಹರಾದರು. ಮತದಾನ, ಗುರುತಿನ ಚೀಟಿ, ಶಿಕ್ಷಣ ಹುದ್ದೆಗಳು, ಪಾಸ್ಪೋರ್ಟ್ ಇತ್ಯಾದಿಗಳನ್ನು ಒಳಗೊಂಡಂತೆ.
*2014ರಲ್ಲಿ ದಿಲ್ಲಿಯ ವಿಶ್ವವಿದ್ಯಾಲಯ ಮಂಗಳಮುಖಿಯರಿಗೆ ತನ್ನಲ್ಲಿ ವಿದ್ಯಾರ್ಜನೆಗೆ ಅವಕಾಶ ಒದಗಿಸುವ ಮೂಲಕ ಉತ್ತಮ ಕಾರ್ಯ ಕೈಗೊಂಡಿತು.
* ಇನ್ನು ಕೇರಳದಲ್ಲಿ ಸೆಹಾಜ್ ಇಂಟರ್ನ್ಯಾಷನಲ್ ಸ್ಕೂಲ್ ಮಂಗಳಮುಖಿಯರಿಗಾಗಿ ವಿಶೇಷ ಕಾರ್ಯ ಕೈಗೊಂಡಿತು. ಶಾಲೆಯಿಂದ ಹೊರಗುಳಿದ ವಯಸ್ಕ ಮಂಗಳಮುಖಿಯರಿಗೆ ಶಿಕ್ಷಣ ನೀಡುವ ಮೂಲಕ ಹೊಸ ಅಧ್ಯಾಯ ಸೃಷ್ಟಿಸುತ್ತಿದೆ.
* 2015ರಿಂದ ಕೇರಳ ಸರ್ಕಾರವು 7ನೇ ತರಗತಿ ಮೇಲ್ಪಟ್ಟು ಕಲಿಯುತ್ತಿರುವ ಮಂಗಳಮುಖಿಯರಿಗಾಗಿ ಸ್ಕಾಲರ್ ಶಿಪ್ ನ್ನು ಆರಂಭಿಸಿದೆ. (2015-16 2016-17ರ ಸಾಲುಗಳಲ್ಲಿ ಕೇವಲ ನಾಲ್ಕೇ ಅರ್ಜಿಗಳು ಬಂದಿರುತ್ತದೆ!!!)
*ಕೆ . ಪ್ರೀತಿಕಾ ಇವರು ಭಾರತದ ಪ್ರಪ್ರಥಮ ಮಂಗಳಮುಖಿ SI ( sub inspector) ಎಂದು ಗುರುತಿಸಿಕೊಂಡಿದ್ದಾರೆ. ಇವರು ತಮ್ಮ ಕೆಲಸವನ್ನುಯ ಧರ್ಮಪುರಿ ಪೋಲೀಸು ಠಾಣೆಯಲ್ಲಿ ಆರಂಭಿಸಿದರು.
* ತಾರಿಕಾ - ತಮಿಳುನಾಡಿನಲ್ಲಿ ಮೊದಲಬಾರಿಗೆ 12ನೇ ತರಗತಿ ಪೂರ್ಣಗೊಳಿಸಿದ ಮಂಗಳಮುಖಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.
*ಜೋಯಿತಾ ಮಂಡಲ್ ಭಾರತದ ಮೊದಲ ಮಂಗಳಮುಖಿ ನ್ಯಾಯಮೂರ್ತಿ.
* 'ಶ್ರೀದೇವಿ' ಮುಂಬೈ ವಿಶ್ವವಿದ್ಯಾಲಯದ ಮೊದಲ ಮಂಗಳಮುಖಿ ವಿದ್ಯಾರ್ಥಿ.
*ಮಧು ಬಾಯಿ- ಭಾರತದ ಮೊದಲ ಮಂಗಳಮುಖಿ ಮೇಯರ್.
ಮೇಲಿನ ಇಷ್ಟೊಂದು ಮಂಗಳಮುಖಿಯರು ದೊಡ್ಡದೊಡ್ಡ ಸಾಧನೆನ್ನೇ ಮಾಡಿದ್ದಾರೆ. ಆದರೆ ಇವರಲ್ಲಿ ಪ್ರತಿಯೊಬ್ಬರ ಹಿಂದೆಯೂ ಕಲ್ಲುಮುಳ್ಳುಗಳಿಂದ ಕೂಡಿದ ಬಲು ಕಠಿಣ ಹಾದಿಯ ಕರಾಳ ಕಥೆಗಳಿವೆ. ಇವರಿಂದ ಮಂಗಳ ಮುಖಿಯರು ಏಳಿಗೆಯನ್ನು ಕಾಣುತ್ತಿದ್ದಾರೆ ಎಂದರೆ ತಪ್ಪಾಗದು. ಅವರ ಏಳಿಗೆಗಾಗಿ ಹಲವರು ದುಡಿಯುತ್ತಿದ್ದಾರೆ. ಮುಖ್ಯವಾಹಿನಿಗೆ ಕರೆತರುವ ಕಾರ್ಯಗಳು ನಡೆಯುತ್ತಿದೆ. ಆದರೆ ಇನ್ನೂ ಆಗಬೇಕಿರುವ ಕೆಲಸಗಳು, ಈ ನಿಟ್ಟಿನಲ್ಲಿ ಸಾಗಬೇಕಿರುವ ಹಾದಿ ಸಾಕಷ್ಟಿದೆ. ಇನ್ನೂ ನಮ್ಮ ಜನಗಣತಿಯಲ್ಲಿ ಇವರುಗಳು ಸೇರ್ಪಡೆಯಾಗಿಲ್ಲ. ಮಂಗಳಮುಖಿಯರ ಸಂಖ್ಯೆ ಎಷ್ಟು ಎಂಬುದು ಇಂದಿಗೂ ತಿಳಿದಿಲ್ಲ. ಒಂದು ಅಂದಾಜಿನ ಪ್ರಕಾರ ಇವರ ಸಂಖ್ಯೆ ಸುಮಾರು 50,000ದಿಂದ 5 ಮಿಲಿಯನ್ ವರೆಗೆ... ಇಷ್ಟೇ ಅಲ್ಲದೇ,ಮಂಗಳಮುಖಿಯರು ಅಕಸ್ಮಾತ್ , ಯಾವುದಾದರೂ ಅಪರಾಧದಲ್ಲಿ ಭಾಗಿಯಾಗಿದ್ದು , ಶಿಕ್ಷೆಗೊಳಾಗಾದರೆ ಅವರನ್ನು ಎಲ್ಲರಂತೆ ಜೈಲಿಗೆ ಹಾಕಲಾಗುತ್ತದೆ. ಇದನ್ನು ಒಪ್ಪಿಕೊಳ್ಳೋಣ , ಆದರೆ ಒಂದು ಮುಖ್ಯ ಸಂಗತಿಯೆಂದರೆ ಮಂಗಳಮುಖಿಯರಿಗಾಗಿ ಪ್ರತ್ಯೇಕ ವಿಭಾಗ ಭಾರತದ ಕಾರಾಗೃಹದಲ್ಲಿ ಇಂದಿಗೂ ಲಭ್ಯವಿಲ್ಲ.
ಸಾಮಾನ್ಯವಾಗಿ ಇವರುಗಳನ್ನು ಪುರುಷ ಕೈದಿಗಳೊಂದಿಗೆ ಇಲ್ಲವೇ ಮಹಿಳಾ ವಿಭಾಗದಲ್ಲಿ ಬೇರೆ ಕೊಠಡಿಗಳಲ್ಲಿ ಇರಿಸಲಾಗುತ್ತದೆ. ಇತ್ತೀಚೆಗೊಮ್ಮೆ ಕಾರಾಗೃಹದಲ್ಲಿ ಜೈಲಿನ ಅಧಿಕಾರಿಗಳಿಂದಲೂ, ಸಹಪುರುಷ ಖೈದಿಗಳಿಂದಲೂ, ಶೋಷಣೆಗೆ ಒಳಗಾಗುತ್ತಿರುವುದು ಬೆಂಗಳೂರಿನಲ್ಲಿ ಕೇಳಿಬಂದಿದೆ. ಆದರೆ ಇಂದಿಗೂ ಕಾರಾಗೃಹದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಇರುವಂತೆ ಪ್ರತ್ಯೇಕ ವಿಭಾಗ ಮಂಗಳಮುಖಿಯರಿಗೆ ಇಲ್ಲ.
ಇನ್ನು ಮುಖ್ಯವಾಹಿನಿಗೆ ಮಂಗಳಮುಖಿಯರನ್ನು ತರುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ನಾವೆಲ್ಲರೂ ತಿಳಿಬೇಕು. ಅವರೂ ನಮ್ಮಂತೆಯೇ ಮಾನವರು. ನಾವೆಲ್ಲರೂ ಸಮಾನರು. ನಮಗೆ ಸಿಗುತ್ತಿರುವ ಎಲ್ಲಾ ಸವಲತ್ತುಗಳೂ ಮಂಗಳಮುಖಿಯರಿಗೆ ಸಿಗಬೇಕು. ನಮ್ಮಂತೆಯೇ ಎಲ್ಲಾ ಸ್ಥಾನಮಾನಗಳು , ಹಕ್ಕುಗಳು ದೊರಕಬೇಕು. ಇದಕ್ಕೆ ಮೊತ್ತಮೊದಲನೆಯದಾಗಿ ಮಾನಸಿಕವಾಗಿ ಸಿದ್ಧರಾಗಬೇಕು. ನಂತರ ಕಾರ್ಯೋನ್ಮುಖರಾಗಬೇಕು. ಯುವಜನತೆ ಒಗ್ಗೂಡಲೇಬೇಕು.
ಸಾಮಾನ್ಯವಾಗಿ ಇವರುಗಳನ್ನು ಪುರುಷ ಕೈದಿಗಳೊಂದಿಗೆ ಇಲ್ಲವೇ ಮಹಿಳಾ ವಿಭಾಗದಲ್ಲಿ ಬೇರೆ ಕೊಠಡಿಗಳಲ್ಲಿ ಇರಿಸಲಾಗುತ್ತದೆ. ಇತ್ತೀಚೆಗೊಮ್ಮೆ ಕಾರಾಗೃಹದಲ್ಲಿ ಜೈಲಿನ ಅಧಿಕಾರಿಗಳಿಂದಲೂ, ಸಹಪುರುಷ ಖೈದಿಗಳಿಂದಲೂ, ಶೋಷಣೆಗೆ ಒಳಗಾಗುತ್ತಿರುವುದು ಬೆಂಗಳೂರಿನಲ್ಲಿ ಕೇಳಿಬಂದಿದೆ. ಆದರೆ ಇಂದಿಗೂ ಕಾರಾಗೃಹದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಇರುವಂತೆ ಪ್ರತ್ಯೇಕ ವಿಭಾಗ ಮಂಗಳಮುಖಿಯರಿಗೆ ಇಲ್ಲ.
ಇನ್ನು ಮುಖ್ಯವಾಹಿನಿಗೆ ಮಂಗಳಮುಖಿಯರನ್ನು ತರುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ನಾವೆಲ್ಲರೂ ತಿಳಿಬೇಕು. ಅವರೂ ನಮ್ಮಂತೆಯೇ ಮಾನವರು. ನಾವೆಲ್ಲರೂ ಸಮಾನರು. ನಮಗೆ ಸಿಗುತ್ತಿರುವ ಎಲ್ಲಾ ಸವಲತ್ತುಗಳೂ ಮಂಗಳಮುಖಿಯರಿಗೆ ಸಿಗಬೇಕು. ನಮ್ಮಂತೆಯೇ ಎಲ್ಲಾ ಸ್ಥಾನಮಾನಗಳು , ಹಕ್ಕುಗಳು ದೊರಕಬೇಕು. ಇದಕ್ಕೆ ಮೊತ್ತಮೊದಲನೆಯದಾಗಿ ಮಾನಸಿಕವಾಗಿ ಸಿದ್ಧರಾಗಬೇಕು. ನಂತರ ಕಾರ್ಯೋನ್ಮುಖರಾಗಬೇಕು. ಯುವಜನತೆ ಒಗ್ಗೂಡಲೇಬೇಕು.
" ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ"
-ಸ್ವಾಮಿ ವಿವೇಕಾನಂದ
Comments
Post a Comment