ನೀವು ಚಿಕ್ಕವರಾಗಿದ್ದಾಗ ಚಿಕ್ಕಪುಟ್ಟ ತಪ್ಪನ್ನು ಮಾಡಿರುತ್ತೀರಿ. ಹೆದರುತ್ತಲೇ ಚೇಷ್ಠೆ ನಡೆದೇಬಿಟ್ಟುರುತ್ತದೆ. ಇನ್ನೂ ಹಲವು ಬಾರಿ ಮಾಸ್ಟರ್ ಹೇಳಿದ ಮನೆಕೆಲಸ( Home work) ಮಾಡದೇ ತರಗತಿಗೆ ಹಾಜರಾಗಿರುತ್ತೀರಿ. ಎಲ್ಲಾ ಸಂಧರ್ಭಗಳಲ್ಲೂ Common ಅಂದ್ರೆ, ಶಿಕ್ಷೆಗೆ ಒಳಪಡುವುದು. ಅದರಲ್ಲೂ ಟೀಚರ್ ಬಂದು ಕಿವಿ ಹಿಂಡುವುದು!!! ಕಿವಿ ಹಿಂಡುವಿಕೆಯಲ್ಲಿ ವೈಜ್ಞಾನಿಕ ಕಾರಣವೊಂದು ಅಡಗಿದೆ.....
Vagus nerve ಎಂಬ ನರವು ಕಿವಿಯ ಚರ್ಮದ ಒಳಭಾದಲ್ಲಿ ಹರಿಯುತ್ತದೆ(Auricular branch of vagus nerve ಚಿತ್ತದಲ್ಲಿ ಕಾಣುತ್ತಿದೆ). ಈ ನರ ಹೃದಯ ಹಾಗೂ ಜೀರ್ಣಾಂಗ ವ್ಯವಸ್ಥೆ(Digestive system)ಗೂ ವ್ಯಾಪಿಸಿದೆ. ಇದರ ಕೆಲಸ ಏನು ಗೊತ್ತೇ? ಹೃದಯ ಬಡಿತವನ್ನು ಕಡಿಮೆ ಮಾಡಿ Stress ನ್ನು ಕ್ಷಮನ ಮಾಡುವುದು. ಜೀರ್ಣಾಂಗ ವ್ಯವಸ್ಥೆಯನ್ನು ಹುರಿದುಂಬಿಸಿ, ಆದಷ್ಟು ಬೇಗ ಆಹಾರ ಪಚ್ಛನವಾಗುವಂತೆ ನೋಡಿಕೊಳ್ಳುತ್ತದೆ. ಅಂದರೆ ಅನ್ನನಾಳ(Oesophagus), ಜಠರ(Stomach), ಸಣ್ಣ ಮತ್ತು ದೊಡ್ಡ ಕರುಳು( small and large intestine) ಇತ್ಯಾದಿ ನಾಳಗಳ propulsive movement(miximg movement)ನ್ನು ಹೆಚ್ಚು ಮಾಡುತ್ತದೆ. ಮತ್ತು ರಸಗಳು( enzyme secretions) ಹೆಚ್ಚಾಗುವುದು.
ಕಿವಿ ಹಿಂಡಿದಾಗ ಈ ನರ ಸಿಕ್ಕಾಪಟ್ಟೆ Active ಆಗುತ್ತದೆ. ಹೃದಯ ಬಡಿತ ಕಡಿಮೆಯಾಗಿ ಮನ ಶಾಂತಿ ಸಿಗುತ್ತದೆ. ಜೀರ್ಣಕ್ರಿಯೆ ವರ್ಧಿಸುತ್ತದೆ. ನೆನಪಿರಲಿ vagus ಎಂಬುದು Parasympathetic systemಗೆ ಒಳಪಡುತ್ತದೆ. Parasympathetic system ಆಕ್ಟಿವ್ ಆದಾಗ ದೇಹ Stressನಿಂದ ಹೊರಬರುತ್ತದೆ. ಯೋಗವೂ ಕೂಡಾ ಇದೇ systemನ್ನು ಉತ್ತೇಜಿಸುವುದು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಶಿಕ್ಷಕರು ಕಿವಿಹಿಂಡುವ ಮೂಲಕ ಗೊತ್ತಿದ್ದೋ, ಗೊತ್ತಿಲ್ಲದೇ ಆ ವಿದ್ಯಾರ್ಥಿ ಪಠ್ಯವನ್ನು ಗ್ರಹಿಸಲುಬೇಕಾದ ಪರಿಸರವನ್ನು ಸೃಷ್ಠಿಸುತ್ತಾರೆ. ಅದಕ್ಕೇ ಹೇಳುವುದು 'ಗುರು: ದೇವೋ ಭವ'.......
ಶ್ರೀ ಗುರವೇ ನಮಃ
ReplyDelete
Delete🙏🙏🙏