ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!
ಇಂಜಿನಿಯರಿಂಗ್, ಆರ್ಟ್ಸ್ ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ. ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು. ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1% ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ
ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವುದೇ ತೊಂದರೆಗಳನ್ನು ಉಂಟುಮಾಡುವುದಿಲ್ಲ. ಮೊದಲಿತ್ತು ನಿಜ. ಒಬ್ಬ ಸೀನಿಯರ್ ಬಂದು ಜೂನಿಯರ್ ಬಳಿ ನಿನ್ನ ಹೆಸರೇನು ,ಎಲ್ಲಿ ನಿನ್ನ ಮನೆ, ಅಂತೆಲ್ಲ ವಿಚಾರಿಸದರೆ ತಪ್ಪಲ್ಲ. ನಮ್ಮ ಸಂಪೂರ್ಣ ಬಯೋಡಾಟಾ ಕೇಳಿದರೂ ತಪ್ಪಲ್ಲ. ಹಾಗಾದರೆ ಇವೆಲ್ಲವನ್ನು ಕೇಳಿ ಏನು ಪ್ರಯೋಜನ ಬಂತು ಸ್ವಾಮಿ....
ಯಾವುದೇ ವೃತ್ತಿಪರ ಕೋರ್ಸುಗಳಲ್ಲಿ ಮೊದಲ ವರ್ಷ ಬಹುಮುಖ್ಯ ಅಲ್ಲಿನ ಪರಿಸರಕ್ಕೆ ಹೊಂದಿಕೆಯ ಆಗುವುದು ಅತ್ಯಗತ್ಯ. ಒಂದಷ್ಟು ಜನರ ಸಪೋರ್ಟ್ ಬೇಕಾಗಿರುವ ಸಂದರ್ಭ ಹೇಗೆ ಓದಬೇಕು ಪರೀಕ್ಷಾ ತಯಾರಿ ಹೇಗಿರಬೇಕು ವಸ್ತ್ರ ವಿನ್ಯಾಸ ಮಾತುಗಾರಿಕೆ ಮನಸ್ಥೈರ್ಯ ಇವೆಲ್ಲವನ್ನು ತುಂಬಿ ಉತ್ತಮ ಗೆಳೆಯ ಗೆಳತಿಯ ಸ್ಥಾನದಲ್ಲಿ ಸೀನಿಯರ್ಸ್ ನಿಲ್ಲುತ್ತಾರೆ. ಈಗಿನ ಯುಗದವರೆಗೆ ದೊಡ್ಡವರಿಗೆ ಹೇಗೆ ಗೌರವ ಸೂಚಿಸಬೇಕು ಎಂಬುದೇ ಗೊತ್ತಿಲ್ಲ. ಅದಕ್ಕಾಗಿಯೇ ಸೀನಿಯರ್ಸ್ ಕಿರಿಯರನ್ನು ತಿದ್ದಿ ಬುದ್ಧಿ ಹೇಳುತ್ತಾರೆ. ಇವತ್ತಿಗೂ ಜ್ಯೂನಿಯರ್ಸ್ "good morning ಸರ್, good evening ಮೇಡಂ" ಎನ್ನುತ್ತಾ ಶುಭ ಕೋರುತ್ತೇರೆ. ಮೆಡಿಕಲ್ ಕ್ಷೇತ್ರದಲ್ಲಿ ಸರ್ವವೂ ದುಬಾರಿ!! ವರ್ಷ ವರ್ಷವೂ ಕೇಜಿಗಟ್ಟಲೆ ಪುಸ್ತಕಗಳು, ಇತರ ಸಲಕರಣಿಗಳು ಬೇಕಾಗಿರುತ್ತದೆ. ನಮ್ಮ ಸೀನಿಯರ್ಸ್ ಇವೆಲ್ಲವನ್ನೂ ಉಚಿತವಾಗಿ ಒದಗಿಸುತ್ತಾರೆ . ಪಾಸ್ ಆಗಲು ಕಾರಣಕರ್ತರು ಅವರೆಂದರೆ ತಪ್ಪಾಗದು. ಕಿರಿಯರಿಂದ ಅವರು ಬಯಸುವುದು ಗೌರವ ಒಂದೇ. ನಮ್ಮ ಹವ್ಯಾಸಗಳ ಬಗ್ಗೆ ಅವರು ಹೇಗೋ ತಿಳಿದುಕೊಳ್ಳುತ್ತಾರೆ.ಒಂದಿಷ್ಟು ಟಾಸ್ಕ್ ಕೊಡುತ್ತಾರೆ. ಟಾಸ್ಕ್ ಪೂರ್ಣಗೊಳಿಸುವುದೇ ಒಂದು ಗಮ್ಮತ್ತು. ನನಗಂತೂ ವೇದಿಕೆಯ ಮೇಲೆ ಹಾಡೊಂದಕ್ಕೆ ಚಿತ್ರ ಬಿಡಿಸಲು ಅವಕಾಶ ಕಲ್ಪಿಸಿಕೊಟ್ಟರು .ಎಲ್ಲರೂ ನನ್ನನ್ನು ಗುರುತಿಸುವಂತೆ ಮಾಡಿದರು. ಹೀಗೆ ಹಲವಾರು ವೇದಿಕೆಗಳನ್ನು ನಮಗಾಗಿ ಸಿದ್ಧಗೊಳಿಸುತ್ತಾರೆ.
ಒಬ್ಬೊಬ್ಬ ಶಿಕ್ಷಕರೂ ಒಂದೊಂದು ರೀತಿ! ಅವರ ಮಾತಿನ ವೈಖರಿ, ಪಾಠ ಮಾಡುವ ವಿಧಾನ ಶಿಕ್ಷಿಸುವ ಬಗೆ ಎಲ್ಲವೂ ವಿಭಿನ್ನ .ಇಂತಹ ಸೂಕ್ಷ್ಮ ವಿಚಾರಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಮುಂದೆ ವೈದ್ಯನಾದ ವೇಳೆಯೂ ನಮ್ಮೊಂದಿಗೆ ಸಂಪರ್ಕದಲ್ಲಿದ್ದು ಕೈ ಹಿಡಿಯುವವರೂ ಅವರೇ! ಈ ವಿಷಯಗಳನ್ನು ಪೋಷಕರಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಇಂತಹ ರೀತಿಯ ಚಿಕ್ಕಪುಟ್ಟ ಸಂಗತಿಗಳನ್ನು ಅವರ ಗಮನಕ್ಕೆ ತರದಿದ್ದರೇ ಸೂಕ್ತ. ಅವರು ಗಾಭರಿಗೊಳಗಾದಾರು.ಇವೆಲ್ಲವನ್ನೂ ರಾಗಿಂಗ್ ಎನ್ನಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅಂತಹಾ ಮೂರ್ಖನೂ ನಾನಲ್ಲ.
ಹೌದು ಎಲ್ಲರೂ ಐಡಿಯಲ್ ಸೀನಿಯರ್ ಅಲ್ಲ ಎಂಬುದು ಅಷ್ಟೇ ಸತ್ಯ .ಕೆಲವರ ಮನಸ್ಥಿತಿಯೇ ಹಾಳು. ಅಂತಹವರಿಂದ ತೊಂದರೆಗೊಳಗಾದರೆ ಮೊಟ್ಟಮೊದಲು ಶಿಕ್ಷಕರಿಗೆ ದೂರು ನೀಡಿ. ನಂತರವಷ್ಟೇ ಪೋಷಕರಿಗೆ ತಿಳಿಸಿ. ಮತ್ತಷ್ಟೂ ತೀವ್ರವಾಗಿದ್ದರೆ ಠಾಣೆಯಲ್ಲೇ ಕಂಪ್ಲೆಂಟ್ ನೀಡುವ ಅವಕಾಶ ನಿಮಗಿದೆ. ಈ ಮೂಲಕ ನಿಮ್ಮಲ್ಲಿ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸುತ್ತೇನೆ .ಒಂದು ವೇಳೆ ನೀವು ಕಪ್ಲೆಂಟ್ ಕೊಟ್ಟೇಬಿಟ್ಟರೆ ,ಸೀನಿಯರ್ ವಿದ್ಯಾರ್ಥಿಯ ಭವಿಷ್ಯ ಕತ್ತಲಾಗುವುದು ಖಂಡಿತ. ಈ ಜಗತ್ತಿನಲ್ಲಿರುವ ಯಾವುದೇ ಯುನಿವರ್ಸಿಟಿ ಆತನಿಗೆ ಡಾಕ್ಟರ್ ಪದವಿಯನ್ನು ಕೊಡಲು ಸಾಧ್ಯವೇ ಇಲ್ಲ. ಸತ್ಯಕ್ಕೂ ನೀವು ರಾಗಿಂಗ್ ಗೆ ಒಳಗಾಗಿದ್ದೀರಾ ಎಂದು ಹತ್ತು ಬಾರಿಯಾದರೂ ಯೋಚಿಸಿ. ಆ ಬಳಿಕವಷ್ಟೇ ಮುಂದುವರೆಯಿರಿ. ಸೀನಿಯರ್, ಜೂನಿಯರ್ ಹತ್ತಿರವಾಗಲು ಇರುವ ಸಂಬಂಧದ ಸೇತುವೆಯನ್ನು 'ರಾಗಿಂಗ್ 'ಎಂದು ನಾಮಕರಣ ಮಾಡುವುದು ಆಕ್ಷೇಪಾರ್ಹ ಸಂಗತಿ. ಪ್ರಥಮ ವರ್ಷದ ಹಲವು ಅನುಭವಗಳಿಗೆ ಇದೀಗ ಪೂರ್ಣವಿರಾಮ ನೀಡುವ ವರ್ತಮಾನ.
True
ReplyDelete☺☺
DeleteSathyavaada maathu 👏
ReplyDelete😊
DeleteNice 👍👍
ReplyDeleteTq..☺
Delete