Skip to main content

ಮೊದಲು ಬೇಸಿಕ್ ಕಲಿಯಿರಿ...Part 6

     ಈ ಲೇಖನವನ್ನು ಓದಿದ ನಂತರ ಈ ಕೆಳಗಿನ ಅನುಮಾನಗಳು ಹೋಗಿ,  ರಕ್ತದ ವಿಚಾರದಲ್ಲಿ ಸ್ಪಟಿಕ ಸ್ಪಷ್ಟರಾಗಿರಬೇಕು.
1) Blood clotting
2) Agglutination
3) Antibody Antigen reaction
       Blood clotting ಮತ್ತೆ Agglutination ಎರಡೂ ಬಹಳಷ್ಟು ಭಿನ್ನವಾಗಿದೆ. ನೀವು ತರಕಾರಿ ಹೆಚ್ಚಲು ಹೋಗಿ ಚಾಕುವಿನಿಂದ ಕೈ ಬೆರಳನ್ನು ಗಾಯ ಮಾಡಿಯೇ ಬಿಟ್ಟಿರಿ! ಸ್ವಲ್ಪ ಸಮಯ ರಕ್ತ ಹೊರಗೆ ದರದರನೆ ಹರಿಯಿತು. ಅನಂತರ ಅಲ್ಲಿ ರಕ್ತ ಮಂದವಾಗಿ ಲೀಕ್ ಆಗುದು block ಆಯಿತು. ಇದು clotting process.

    ಮತ್ತೊಂದು ಸನ್ನಿವೇಶ. ಒಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆಯಿರುತ್ತದೆ. "ನಾನೇ ಬ್ಲಡ್ ಕೊಡ್ತೆನೆ ಸರ್. ಎಷ್ಟ್ ಬೇಕಾದ್ರೂ ತೆಗೊಳ್ಳಿ" ಎಂದು ಸಿನಿಮೀಯ ರೀತಿಯಲ್ಲಿ ನೀವು ರಕ್ತದಾನ ಮಾಡಲು ಮುಂದಾಗುವಿರಿ. ದುರಾದೃಷ್ಟವೋ ಏನೂ? ಆತನದ್ದು A- , ನೀವು ಸದಾ B+ !! ಮುಗಿಯಿತು ಕಥೆ. ಇಲ್ಲಿ ನಿಮ್ಮ ಹಾಗೂ ಆತನ ನೆತ್ತರಿನ ನಡುವೆ ಒಂದು Reaction ಆಗ್ತದೆ. ಅದನ್ನು ನಾವು Agglutination ಎಂದು ಕರೆಯುವುದು.
   ಇದೀಗ compare ಮಾಡಿ. Clotting ನಿಮ್ಮನ್ನು ಬದುಕಿಸಲು ಇರುವ protective mechanism. Agglutination ಒಂಥರಾ ಯಮ ಇದ್ದ ಹಾಗೆ!! Agglutination ಆಗ್ಲಿಕೆ ಕಾರಣ antigen antibody reaction. ಏನಿದು antigen? ಏನ್ ಸ್ವಾಮಿ antibody ಅಂದ್ರೆ? ಎಲ್ಲವನ್ನೂ ಡೀಟೇಲ್ ಆಗಿ ನೋಡೋಣ....

      Blood ಲ್ಲಿ 4 components ಇದೆ
*RBC
*WBC
*Platelets
* plasma
   
    Antigen ಅಂದರೆ RBC ಯ surfaceಲ್ಲಿರುವ ಒಂದು chemical compound . Antibody ಅಂದರೆ plasma ದಲ್ಲಿರುವ protein. Blood group ಇವುಗಳ ಆಧಾರದ ಮೇಲೆಯೇ ಮಾಡಿದ್ದು....
ಯಾರ  RBCಗಳಲ್ಲಿ antigen A ಇದೆಯೋ, ಅವರದ್ದು A blood group. ಅವರ  plasmaದಲ್ಲಿ antibody A ಇರುದಿಲ್ಲ ಬದಲಾಗಿ antibody B ಇರುತ್ತದೆ. ಒಬ್ಬಂದು blood group B ಆದ್ರೆ ,ಅವನ RBC ಯಲ್ಲಿ antigen B   ಇರುತ್ತದೆ. ಆದರೆ antibody A ಮಾತ್ರ ಇರುತ್ತದೆ.  O blood groupಲ್ಲಿ antigen ಯಾವ್ದೂ ಇಲ್ಲ. antibody A ಮತ್ತು antibody B ಕೂಡಾ ಇದೆ. AB ಯಲ್ಲಿ ಎರಡೂ antigen ಇದೆ. antibody ಯಾವ್ದೂ ಇಲ್ಲ.(ಕೆಳಗಿರಿರುವ ಚಾರ್ಟ್ ಗಮನಿಸಿ)

    RBC ಯಲ್ಲಿರುವ antigen ಮತ್ತು plasma ದಲ್ಲಿರುವ antibody ಒಂದೇ ಆದ್ರೆ , Antigen antibody reaction ಆಗುತ್ತದೆ.  Agglutination ಆಗಿಬಿಡುತ್ತದೆ. ನೋಡಿ ದೇವರ ಸೃಷ್ಟಿ ಹೇಗಿದೆ? ನನ್ನ ರಕ್ತ B +ve. ನನ್ನ RBC ಯಲ್ಲಿ antigen B ಇದೆ. ಪುಣ್ಯವೇನೆಂದರೆ plasma ದಲ್ಲಿ antibody B ಇಲ್ಲ, ಬದಲಾಗಿ  antobody A ಇದೆ. ಒಂದು ವೇಳೆ antibody B  ಇದ್ದಿದ್ದರೆ.......?        ಗಮನಿಸಬೇಕಾದ್ದೆಂದರೆ, ರಕ್ತದಾನ ಮಾಡುವಾಗ antigen antibody reaction ಆಗದಂತೆ ನೋಡಿಕೊಳ್ಳಬೇಕು.  ಇದನ್ನೆಲ್ಲಾ ಯೋಚಿಸಿದಾಗ ಕೆಳಗಿನ ಚಾರ್ಟ್ ದೊರೆಯಿತು. ಯಾರು ಯಾರಿಗೆ ರಕ್ತದಾನ ಮಾಡಬಹುದು ಎಂದು ಕ್ಲೀಯರ್ ಆಗಿ ಹೇಳುವಂತಿದೆ ಈ ಚಾರ್ಟ್.

     ಸರಿಯಾಗಿ  ಚಾರ್ಟ್ ನೋಡಿದರೆ ಒಂದು ಡೌಟ್ ಬಾರದೇ ಉಳಿಯದು. ಪಿಯು NCERT ಟೆಕ್ಸ್ಟ್ಬುಕ್ ಕೂಡಾ ಈ ನಿಮ್ಮ ಅನುಮಾನಗಳನ್ನು ಬಗೆಹರಿಸದು!  A blood group ನ ವ್ಯಕ್ತಿಗೆ , O blood group ನ ರಕ್ತ ಕೊಡಬಹುದೇ?? ಕೇಳಲೇ ಬೇಕಾದ ಪ್ರಶ್ನೆ. ಯಾಕಂದ್ರೆ O bloodಲ್ಲಿ (donor)  antibody A , B ಎರಡೂ ಕೂಡಾ ಇದೆ(2 antigen ಇಲ್ಲ). A bloodಲ್ಲಿ (recipient) antigen A ಇದ್ದರೆ, antibody B ಇದೆ. ಹಾಗಾದರೆ ಇಲ್ಲಿ antigen A ಮತ್ತು antibody A  ಯ ಮಧ್ಯೆ reaction ಆಗಿ agglutination ಆಗ್ಲಿಕಿಲ್ವಾ?

     ನೋಡಿ ಸ್ವಾಮಿ. ಮೇಲಿನ ಸಂದರ್ಭದಲ್ಲಿ antigen A ಬಂದದ್ದು donor ನಿಂದ. Antibody ಇರುವುದು  ಆತನ plasmaದಲ್ಲಿ ಅಲ್ವಾ? ರಕ್ತ ಮಿಕ್ಸ್ ಆದ ನಂತರ ಈ ಎಲ್ಲಾ antibody, recipientನ plasmaದಲ್ಲಿ ಬೆರೆತು ತುಂಬಾ dilute ಆಗುವುದು. ಹಾಗಾಗಿ ಹೆಚ್ಚು antigen antibody reaction ಆಗುವುದಿಲ್ಲ. 
  
     ಮತ್ತೊಂದು ಕೇಸ್ ನೋಡೋಣ. ಈಗ donor A, recipient B. 
A blood group - antigen A, antibody B
B blood group -  antigen B , antibody A
    Recipient ನಲ್ಲಿರುವ antibody A , donorನ antigen A ಒಟ್ಟಿಗೆ ಸೇರಿ agglutination ಆಗ್ತದೆ. donorನ antigenಇದೆಯಲ್ಲಾ? ಅದು  antibodyಯಷ್ಟು dilute ಆಗುವುದಿಲ್ಲ. ಯಾಕಂದ್ರೆ antibody plasma ದಲ್ಲಿದೆ. Plasma ಒಂದು ಲಿಕ್ವಿಡ್. ರಕ್ತ ಬೆರೆತರೆ ವೇಗವಾಗಿ ಹರಡುತ್ತಾ ಹೋಗುವುದು. ಆದರೆ antigen ಎಲ್ಲಿದೆ? RBCಯಲ್ಲಿ ಅಲ್ಲವೇ? ರಕ್ತ ಮಿಕ್ಸ್ ಆದ್ರೂ , antigen ಎಲ್ಲವೂ RBCಯಲ್ಲೆ concentrated ಆಗಿ ಇರಬೇಕು. ಆದರೆ ಸ್ವತ: RBCಯೇ  ಚಲಿಸುವುದರಿಂದ ಟೋಟಲ್ ಆಗಿ ಸ್ವಲ್ಪ ಪ್ರಮಾಣದಲ್ಲಿ antigen dilute ಆಗಬಹುದು. ಆದರೆ ಆದು negligible.

    ಒಟ್ಟಾಗಿ ಹೇಳಬೇಕೆಂದರೆ donorನ antigen , dilute ಆಗಿ ತನ್ನ ಪವರ್ ಕಳೆದುಕೊಳ್ಳುವುದು. ಆದರೆ, recipient ನ antibody ಯಾವಾಗಲೂ ಒಂದೇ concentrationನಲ್ಲಿ ಇರುತ್ತದೆ(donor ಕೊಡುದು ಸ್ವಲ್ಪ ಪ್ರಮಾಣದ ಬ್ಲಡ್ ಮಾತ್ರ). ಹೀಗಾಗಿ agglutination ಆಗುವುದು recipientನ antibody ಹಾಗೂ donor ನ antigen reactionನಿಂದ. 

     ಇನ್ನುಳಿದಂತೆ blood +ve / -ve ಹೇಗೆ ನೋಡುವುದು? Rh antigen ಅಂತ ಒಂದಿದೆ. ನಿಮ್ಮ ಊಹೆಯಂತೆ ಅದೂ ಕೂಡಾ RBCಯ surfaceನ ಮೇಲಿದೆ.  ನಿಮ್ಮ RBCಯಲ್ಲಿ Rh antigen ಇದ್ದರೆ ನೀವು +ve, ಇಲ್ಲವಾದರೆ -ve.
ಹೀಗೆ ವಿವರಿಸುತ್ತಾ ಹೋದರೆ , ಸಾಕಷ್ಟಿವೆ. ಇಷ್ಟು ಬೇಸಿಕ್ ಕಲಿತರೆ ಅವೆಲ್ಲವೂ  ನೀರು ಕುಡಿದಷ್ಟೇ ಸುಲಭ!
  
      " ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ" ಎಂಬ ಸುಭಾಷರ ನುಡಿಗಳು ಅಂದಿನ ಸಂದರ್ಭ ಹೇಗಿತ್ತು ಎಂಬುವುದನ್ನು ವಿವರಿಸುತ್ತದೆ. ರಕ್ತದ ಬಗೆಗಿನ ಈ ಮಾತು ಹೋರಾಟಗಳಲ್ಲಿ ಕ್ರಾಂತಿಯ ಕಿಡಿಯನ್ನೇ ಉರಿಸಿತ್ತು. ವರ್ತಮಾನದಲ್ಲಿ ನಿಮಗಂತೂ ಎಲ್ಲಾ ಸ್ವಾತಂತ್ರ್ಯವೂ ಇದೆ. ಅದನ್ನು ಬಳಸಿ ಒಂದಿಷ್ಟು ಬೇಸಿಕ್ ಕಲಿತರೆ, ನಮ್ಮದು ಹೋಗುವುದಾದರೂ ಏನಿದೆ ಅಲ್ವಾ?
  

  

Comments

Popular posts from this blog

ಹೇಗಿರುತ್ತೆ ಗೊತ್ತಾ 1st Year MBBS? ನಿಮ್ಮ ಕುತೂಹಲಕ್ಕೊಂದು ಪೂರ್ಣ ವಿರಾಮ!!!

ಎಮ್.ಬಿ.ಬಿ.ಎಸ್ ಅಂದ್ರೆ ನಿಮಗೆ ನೆನಪು ಬರುವುದು ಉಪ್ಪಿದಾದ ಇಲ್ಲಾಂದ್ರೆ ಮುನ್ನಾಬಾಯ್. ನನ್ನ ಪ್ರಕಾರ ಅವೆಲ್ಲವೂ ಸಿನೆಮಾ ಹಾಲ್ನಲ್ಲಿ   ನೋಡಲು ಚಂದ. ಅಲ್ಲಿಯ ಚಿತ್ರಣವೇ ಬೇರೆ...ನೈಜತೆಯೇ ಬೇರೆ. ಈ ಡಿಜಿಟಲ್ ಹೊತ್ತಗೆಯ  ಹಾಳೆಯೊಳು ನನ್ನದೊಂದು ಸಿಹಿಕಹಿ ಅನುಭವಗಳ ಸಂಗ್ರಹ ನಿಮ್ಮ ಮುಂದೆ.....     ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ  ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉ...

'ರಾಗಿಂಗ್' ನಿಜಕ್ಕೂ ಇದೆಯಾ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಠಿಣ!

  ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!     ಇಂಜಿನಿಯರಿಂಗ್,  ಆರ್ಟ್ಸ್  ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ.  ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು.  ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1%  ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ    ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವ...

ಮೊದಲು ಬೇಸಿಕ್ ಕಲಿಯಿರಿ....Part 1

       ನಮ್ಮ ಬಹಳಷ್ಟು ವಿಜ್ಞಾನ ಪಠ್ಯ ಪುಸ್ತಕದಲ್ಲಿ ದೊಡ್ಡ ದೊಡ್ಡ ನಿಯಮಗಳಿವೆ. ನ್ಯೂಟನ್ ನಿಯಮ, ಐನ್ಸ್ಟೀನ್ಸ್  ಥಿಯರಿ ಆಫ್ ರಿಲೇಟಿವಿಟಿ, ಫ್ಲೆಮಿಂಗ್ಸ್ ಲಾ ಇತ್ಯಾದಿ. ಪ್ರೌಢ ಶಿಕ್ಷಣದಿಂದ ಹಿಡಿದು ಒಂದಷ್ಟು ಪಿಯು ವಿದ್ಯಾರ್ಥಿಗಳು ಇವುಗಳನ್ನ ಕಂಠಪಾಠ ಮಾಡುತ್ತಾ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಅಕಸ್ಮಾತ್ ಅವನಿಗೆ ದಿನಾಂಕ ನಿಗದಿಪಡಿಸದೇ ಅನಿರೀಕ್ಷಿತವಾಗಿ ನಾಲ್ಕು ಪ್ರಶ್ನೆಯನ್ನು ಮುಂದಿಟ್ಟರೆ ಆತ ಉತ್ತರಿಸುವನೇ? ನಾನು ಕೇಳುದು, ಇವನು ಓದಿ ಏನಾದರೂ ಪ್ರಯೋಜನ ಉಂಟಾ ಅಂತ! ನನ್ನನ್ನು ನಂಬಿ. ಇಂದು ಅನೇಕರು ಓದಿಗೆ ಈ ಮಾರ್ಗವನ್ನೇ ಆರಿಸಿದ್ದಾರೆ.  ಕಿ.ಮೀ/ಗಂಟೆ  ಯನ್ನು   ಮೀ/ಸೆಕೆಂಡಿಗೆ ಬದಲಿಸಲು ಫಾರ್ಮುಲಾ ಗೊತ್ತಿಲ್ಲದೇ  ಸಾಧ್ಯವಿಲ್ಲ ಎಂಬ ಮನಸ್ಥಿತಿಯವರಿದ್ದಾರೆ. ಕಾಮನ್ ಸೆನ್ಸ್ ಇದ್ದರೆ ಸಾಕು ಬದಲಿಸಲು. ನೋಡಿ, ಫಾರ್ಮುಲ ಕಲಿಯಬೇಕು ನಿಜ. ಅದರೊಂದಿಗೆ ಅದು ಹೇಗೆ ಉದ್ಭವಿಸಿತು ಎಂದು ನೋಟವನ್ನು ಹಾಯಿಸಬೇಕು. ಆಗ ಫಾರ್ಮುಲಾ ಮರೆತು ಹೋದರೂ ಅದನ್ನು ನೀವೇ ಕಂಡುಕೊಳ್ಳಬಲ್ಲಿರಿ.       ಹಾಗಾದರೆ ಹೇಗೆ ಓದಬೇಕು? ಈ ಮೇಲಿನ ಕೆಲವು ನಿಯಮಗಳನ್ನು ರಾತ್ರಿ 12 ಗಂಟೆಗೆ ಬಡಿದೆಬ್ಬಿಸಿ ಕೇಳಿದರೂ ಅದಕ್ಕೆ ಕಾರಣ ಸಹಿತ ಉತ್ತರ ನೀಡುವಂತಿರಬೇಕು! ಸಿಂಪಲ್ಲಾಗಿ ಹೇಳಬೇಕೆಂದರೆ, ಬೇಸಿಕ್ ಕಲಿಯತಕ್ಕದ್ದು.  ಓಮನ ನಿಯಮ(oh...