Skip to main content

ಮೊದಲು ಬೇಸಿಕ್ ಕಲಿಯಿರಿ....Part 5

  ಈ ಹಿಂದಿನ ಲೇಖನದಲ್ಲಿ Middle ear ನ ಬಗ್ಗೆ ವಿವರಿಸಲಾಗಿತ್ತು. ಇಂದು ನಾವು Inner Earನ ಬಗ್ಗೆ ಕೇಂದ್ರೀಕರಿಸಿ ಕೆಲವು ಅನುಮಾನಗಳನ್ನು ಬಗೆಹರಿಸೋಣ.
 
    Inner Ear ನ 3 ಭಾಗಗಳು
1)Vestibule
2)Semicircular canal
3)Cochleavestibule ಮತ್ತು semicircular canal ಬಾಡಿ ಬ್ಯಾಲೆನ್ಸ್ ಗೆ ಬಹುಮಖ್ಯ. ಪಿಯು ಮಟ್ಟದಲ್ಲಿ ಇಷ್ಟು ಸಾಕು ಬಿಡಿ. ನಿಮಗೆ ಡೌಟ್ ಬರುದು Cochleaದಲ್ಲಿ ಎಂದು ನನಗೆ ತಿಳಿದಿದೆ. ಸುರುಳಿ ಅಕಾರದ ಒಂದು organ. ನೋಡಲು ಪೈಪ್ ಸುತ್ತಿದಂತೆ ಇದೆ. ಸುತ್ತಿಕೊಂಡಿರುವ cochlea ವನ್ನು ಎಳೆದು ನೇರ ಮಾಡಿಈಗ ನಿಮಗೆ ಪೈಪ್ ದೊರೆತಿದೆ ಅಲ್ವಾ?ಚಿತ್ರದಲ್ಲಿ ಗಮನಿಸಿ. ಈ ಪೈಪ್ ಮೂರು ಒಂದರ ಮೇಲೊಂದಿರುವ ಚಿಕ್ಕ ಪೈಪ್ ನಿಂದ ಮಾಡಲ್ಪಟ್ಟಿದೆ. ಮೇಲಿನದ್ದು Scala vestibuli 
ಮಧ್ಯದ್ದು Scala media
ಕೆಳಗಿನದ್ದು Scala tympani
   
 ಮತ್ತೊಮ್ಮೆ ಹೇಳುತ್ತೇನೆ, ಕೇಳಿರಿ. ಈ 3 ಪೈಪ್ ಸೇರಿ , Cochlea ಎಂಬ ದಪ್ಪದ ಪೈಪ್ ಆಗಿದೆ. ಇದನ್ನು ಅಡ್ಡ ಕತ್ತರಿಸಿದರೆ ( cross section) ಚಿತ್ರದಲ್ಲಿರುವಂತೆ ಕಾಣುತ್ತದೆ.   3 comapartment ಸಿಗಲು ಕಾರಣ,  2 ಪದರಗಳು(membrane)
* vestibular membrane
* basilar membrane
Scala media ದ ಮೇಲೆ ಹಾಗೂ ಕೆಳಗಡ ಕೇವಲ membrane ಇದೆ.  ಹಾಗಾದರೆ Scala media ಒಂದು membranous ಪೈಪ್. ಇದನ್ನೇ ನಾವು Membranous Labyrinth ಎಂದು ಹೇಳುವುದು. ಇಲ್ಲಿ Endolymph ಎಂಬ fluid ಇದೆ.   Scala vestibuli ಮತ್ತು Scala tympani ಬಲ ಭಾಗದ ತುದಿಯಲ್ಲಿ ಸೇರುತ್ತವೆ.(ಚಿತ್ರ ನೋಡಿ). ಇವೆರಡರಲ್ಲೂ Perilymph ಎಂಬ fluid ಇರುವುದು.  ಈ  cochlea   ಇದೆಯಲ್ಲಾ? ಇದು ಒಂದು ಸುರುಳಿ ಪೈಪ್ ಆಕಾರದ Bony Cavity ಯಲ್ಲಿದೆ. ಈ Bony cavity ಯನ್ನು ನಾವು Bony Labyrinth ಎನ್ನುತ್ತೇವೆ.     ಇಷ್ಟೆಲ್ಲಾ ವಿಷಯಗಳನ್ನು ನಮ್ಮ ಪಠ್ಯಪುಸ್ತಕಗಳಲ್ಲಿ 
1) Endolymph is the fluid present in membranous cavity...
2)Perilymph is the fluid present in the bony cavity... 
    ಎಂದು ಸಿಂಪಲ್ಲಾಗಿ ಹೇಳುತ್ತಾರೆ. ಪಾಪ ವಿದ್ಯಾರ್ಥಿಗಳು ಸಂಕಟದಲ್ಲಿ ಓದುತ್ತಾರೆ. ಗಮನಿಸಬೇಕಾದದ್ದು 2 ನೇ ಸ್ಟೇಟ್ಮೆಂಟ್. Perilymph is present in the bony cavity called bony labyrinth, except Scala media ಅಂತ ಹೇಳಿದ್ದರೆ ಮಕ್ಕಳಿಗೆ ಅರ್ಥವಾಗುತಿತ್ತು.
   ಸ್ವಾಮಿ ವಿವೇಕಾನಂದರು ಹೇಳಿದ್ದಾರೆ,  " ತನ್ನೊಳಗಿನ ಪರಿಪೂರ್ಣತೆಯನ್ನು ಹೊರತೆಗೆಯುವುದೇ ಶಿಕ್ಷಣ" ಎಂದು. ಅಂದ್ರೆ ಸಕಲ ವಿದ್ಯೆಯೂ ನಿನ್ನೊಳಗಿದೆ. ಪ್ರಯತ್ನಪಟ್ಟು ಹೊರತೆಗೆಯಬೇಕಷ್ಟೆ! ಕಂಠಪಾಠ ಮಾಡಿದ್ರೆ ವಿದ್ಯೆ ಹೊರೆಯಾದೀತು. ಅರ್ಥ ಮಾಡಿ ಕಲಿತರೆ ವಿದ್ಯೆ ಆಸರೆಯಾದೀತು. ಎರಡರಲ್ಲಿ ಯಾವುದು ಆರಿಸಬೇಕೆಂಬ ನಿರ್ಧಾರ ನಿಮಗೆ ಬಿಟ್ಟದ್ದು.
    

Comments

Popular posts from this blog

ಹೇಗಿರುತ್ತೆ ಗೊತ್ತಾ 1st Year MBBS? ನಿಮ್ಮ ಕುತೂಹಲಕ್ಕೊಂದು ಪೂರ್ಣ ವಿರಾಮ!!!

ಎಮ್.ಬಿ.ಬಿ.ಎಸ್ ಅಂದ್ರೆ ನಿಮಗೆ ನೆನಪು ಬರುವುದು ಉಪ್ಪಿದಾದ ಇಲ್ಲಾಂದ್ರೆ ಮುನ್ನಾಬಾಯ್. ನನ್ನ ಪ್ರಕಾರ ಅವೆಲ್ಲವೂ ಸಿನೆಮಾ ಹಾಲ್ನಲ್ಲಿ   ನೋಡಲು ಚಂದ. ಅಲ್ಲಿಯ ಚಿತ್ರಣವೇ ಬೇರೆ...ನೈಜತೆಯೇ ಬೇರೆ. ಈ ಡಿಜಿಟಲ್ ಹೊತ್ತಗೆಯ  ಹಾಳೆಯೊಳು ನನ್ನದೊಂದು ಸಿಹಿಕಹಿ ಅನುಭವಗಳ ಸಂಗ್ರಹ ನಿಮ್ಮ ಮುಂದೆ.....     ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ  ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉ...

'ರಾಗಿಂಗ್' ನಿಜಕ್ಕೂ ಇದೆಯಾ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಠಿಣ!

  ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!     ಇಂಜಿನಿಯರಿಂಗ್,  ಆರ್ಟ್ಸ್  ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ.  ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು.  ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1%  ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ    ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವ...

ಮೊದಲು ಬೇಸಿಕ್ ಕಲಿಯಿರಿ....Part 1

       ನಮ್ಮ ಬಹಳಷ್ಟು ವಿಜ್ಞಾನ ಪಠ್ಯ ಪುಸ್ತಕದಲ್ಲಿ ದೊಡ್ಡ ದೊಡ್ಡ ನಿಯಮಗಳಿವೆ. ನ್ಯೂಟನ್ ನಿಯಮ, ಐನ್ಸ್ಟೀನ್ಸ್  ಥಿಯರಿ ಆಫ್ ರಿಲೇಟಿವಿಟಿ, ಫ್ಲೆಮಿಂಗ್ಸ್ ಲಾ ಇತ್ಯಾದಿ. ಪ್ರೌಢ ಶಿಕ್ಷಣದಿಂದ ಹಿಡಿದು ಒಂದಷ್ಟು ಪಿಯು ವಿದ್ಯಾರ್ಥಿಗಳು ಇವುಗಳನ್ನ ಕಂಠಪಾಠ ಮಾಡುತ್ತಾ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಅಕಸ್ಮಾತ್ ಅವನಿಗೆ ದಿನಾಂಕ ನಿಗದಿಪಡಿಸದೇ ಅನಿರೀಕ್ಷಿತವಾಗಿ ನಾಲ್ಕು ಪ್ರಶ್ನೆಯನ್ನು ಮುಂದಿಟ್ಟರೆ ಆತ ಉತ್ತರಿಸುವನೇ? ನಾನು ಕೇಳುದು, ಇವನು ಓದಿ ಏನಾದರೂ ಪ್ರಯೋಜನ ಉಂಟಾ ಅಂತ! ನನ್ನನ್ನು ನಂಬಿ. ಇಂದು ಅನೇಕರು ಓದಿಗೆ ಈ ಮಾರ್ಗವನ್ನೇ ಆರಿಸಿದ್ದಾರೆ.  ಕಿ.ಮೀ/ಗಂಟೆ  ಯನ್ನು   ಮೀ/ಸೆಕೆಂಡಿಗೆ ಬದಲಿಸಲು ಫಾರ್ಮುಲಾ ಗೊತ್ತಿಲ್ಲದೇ  ಸಾಧ್ಯವಿಲ್ಲ ಎಂಬ ಮನಸ್ಥಿತಿಯವರಿದ್ದಾರೆ. ಕಾಮನ್ ಸೆನ್ಸ್ ಇದ್ದರೆ ಸಾಕು ಬದಲಿಸಲು. ನೋಡಿ, ಫಾರ್ಮುಲ ಕಲಿಯಬೇಕು ನಿಜ. ಅದರೊಂದಿಗೆ ಅದು ಹೇಗೆ ಉದ್ಭವಿಸಿತು ಎಂದು ನೋಟವನ್ನು ಹಾಯಿಸಬೇಕು. ಆಗ ಫಾರ್ಮುಲಾ ಮರೆತು ಹೋದರೂ ಅದನ್ನು ನೀವೇ ಕಂಡುಕೊಳ್ಳಬಲ್ಲಿರಿ.       ಹಾಗಾದರೆ ಹೇಗೆ ಓದಬೇಕು? ಈ ಮೇಲಿನ ಕೆಲವು ನಿಯಮಗಳನ್ನು ರಾತ್ರಿ 12 ಗಂಟೆಗೆ ಬಡಿದೆಬ್ಬಿಸಿ ಕೇಳಿದರೂ ಅದಕ್ಕೆ ಕಾರಣ ಸಹಿತ ಉತ್ತರ ನೀಡುವಂತಿರಬೇಕು! ಸಿಂಪಲ್ಲಾಗಿ ಹೇಳಬೇಕೆಂದರೆ, ಬೇಸಿಕ್ ಕಲಿಯತಕ್ಕದ್ದು.  ಓಮನ ನಿಯಮ(oh...