ಒಂದು ಸಿಂಪಲ್ ಪ್ರಶ್ನೆಯೊಂದಿಗೆ ಈ ಲೇಖನವನ್ನು ಆರಂಭಿಸೋಣ ಅನಿಸುತ್ತಿದೆ.
ಕಣ್ಣಿದ್ದೂ ಕುರುಡನಾಗಬಹುದೇ??? Optic nerve ಇಲ್ಲವೇ ಮೆದುಳು ಎಲ್ಲವೂ ಸರಿಯಾಗಿ ಇದೆ ಅಂದುಕೊಳ್ಳೋಣ.ಹಾಗಾದರೆ ಕಿವಿ( Ear) ಇಲ್ಲದೇ ಕುರುಡನಾಗುವ ಎಲ್ಲಾ ಅವಕಾಶಗಳಿವೆ! ದಿಗ್ಭ್ರಮೆಯಲ್ಲಿದ್ದೀರಾ? ತುಂಬಾ ಯೋಚಿಸಬೇಡಿ....
ಕಿವಿ ಇಲ್ಲದಿದ್ದರೆ ಆತ ಹೇಗೆ ಕನ್ನಡ್ಕ ಹಾಕ್ತಾನೆ ಹೇಳಿ. ಇದನ್ನೇ ನಾವು ಹಾಸ್ಯಾಸ್ಪದವಾಗಿ ಕಣ್ಣಿದ್ದೂ ಕುರುಡ ಎನ್ನುವುದು. ತಿಳಿಯಿತೇ ಕಿವಿ ಎಷ್ಟು ಮುಖ್ಯ ಅಂತ? ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಾಗಿಲ್ಲ ನಿಮ್ಮ ಕಿವಿಗಳು!!!
ಕಿವಿಯನ್ನು ಹೇಗೆ ವಿಂಗಡನೆ ಮಾಡುದು? ಕೆಲಸಗಳೇನು? ಏನನೆಲ್ಲಾ ಒಳಗೊಂಡಿದೆ? ಇದಕ್ಕುತ್ತರ ನಿಮ್ಮ ಟೆಕ್ಸ್ಟ್ ಬುಕ್ಕಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಬೇಕಾದ್ರೆ ಹತ್ತು ಸಲ ಓದಿ, ಒಂದಿಷ್ಟು ಅಂಶಗಳ ವಿಶ್ಲೇಷಣೆ ಬಡವಾಗಿದೆ! ಕೊಟ್ಟ ವಿಷಯಗಳಿಗೆ ಕಾರಣ (Reason) ಕೊರತೆ ಇದೆ. ಈ ಕೆಳಗಿನ ಭಾಗದಲ್ಲಿ ನಿಮಗೆ ಎಲ್ಲಿ ಡೌಟ್ ಬರುತ್ತದೋ, ಎಲ್ಲಿ ದ್ವಂದ್ವವಿದಯೋ, ಅಲ್ಲೇ ಗಮನ ಹರಿಸಲಾಗುವುದು. Basic ಜಾಡು ಹಿಡುದು ಹುಡುಕುವ ತವಕದಲ್ಲಿದ್ದೇವೆ....
ಕಿವಿಯನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ.
1) Inner Ear
2) Middle Ear
3) Outer Ear
1) Inner Ear
2) Middle Ear
3) Outer Ear
Outer ಮತ್ತು Middle Ear ಸಾಧಾರಣವಾಗಿ ವಿದ್ಯಾರ್ಥಿಗಳಿಗೆ ಸುಲಭ ಸಂಗತಿ. ನಿಮ್ಮ ಪಠ್ಯಪುಸ್ತಕದಲ್ಲಿ ಒಂದು ಸ್ಟೇಟ್ ಮೆಂಟ್ ಸಲೀಸಾಗಿ ಕೊಡ್ತಾರೆ.
" Eustachian tube equalizes the air pressure on the two sides of the ear drum"
ಪಾಪ, ಹೇಗೋ ಕಲಿತು ಪರೀಕ್ಷೆಗಳಲ್ಲೂ ಯಥಾ ಪ್ರಕಾರ ಬಟ್ಟಿ ಇಳಿಸುತ್ತಾರೆ ನಮ್ಮ ಶಾಲಾ ಮಕ್ಕಳು!
ಈ ವಾಕ್ಯದ ನೈಜತೆ ಅವರ ಅರಿವಿಗೆ ಬಂದಿರುವುದಿಲ್ಲ. ನೋಡಿ, Middle Ear ಇದೆಯಲ್ಲಾ? ಇಲ್ಲಿಂದ ಒಂದು ಟ್ಯುಬ್ ನಿಮ್ಮ ಮೂಗಿನ ಒಳಭಾಗಕ್ಕೆ ಕನೆಕ್ಟ್ ಮಾಡುತ್ತದೆ. Outer ear ಮತ್ತು Middle Ear ನ್ನು ಸಪರೇಟ್ ಮಾಡಲು ಒಂದು ತೆಳುವಾದ ಪದರವಿದೆ. ಇದನ್ನೇ ನಾವು ತಮಟೆ/ Ear drum ಎನ್ಬನುವುದು.ಬಲ ಕಿವಿಯನ್ನೇ ತೆಗೆದುಕೊಳ್ಳೋಣ.
Ear drum ನ ಬಲ ಭಾಗವು ನೇರವಾಗಿ ವಾತಾವರಣದ ಒತ್ತಡಕ್ಕೆ (Atmospheric pressure) ಸಂಪರ್ಕ ಹೊಂದಿದೆ.
Ear drum ನ ಎಡಭಾಗಕ್ಕೆ(ಒಳಗಡೆ) middle ear- eustachian tube ಮೂಲಕ ಮೂಗು ಹಾಗೂ ಬಾಯಿಗೆ ಸಂಬಂಧ ಹೊಂದಿದೆ. ನಿಮಗೊತ್ತಿದೆ, ಮೂಗು ಮತ್ತೆ ಬಾಯಿ ಎರಡೂ ನೇರವಾಗಿ ವಾತಾವರಣದ ಒತ್ತಡಕ್ಕನುಗುಣವಾಗಿದೆ. ಅಂದರೆ Ear drum ನ ಆ ಕಡೆ ,ಈ ಕಡೆ Atmospheric pressure ಇದೆ.
" Eustachian tube equalizes the air pressure on the two sides of the ear drum"
ಪಾಪ, ಹೇಗೋ ಕಲಿತು ಪರೀಕ್ಷೆಗಳಲ್ಲೂ ಯಥಾ ಪ್ರಕಾರ ಬಟ್ಟಿ ಇಳಿಸುತ್ತಾರೆ ನಮ್ಮ ಶಾಲಾ ಮಕ್ಕಳು!
ಈ ವಾಕ್ಯದ ನೈಜತೆ ಅವರ ಅರಿವಿಗೆ ಬಂದಿರುವುದಿಲ್ಲ. ನೋಡಿ, Middle Ear ಇದೆಯಲ್ಲಾ? ಇಲ್ಲಿಂದ ಒಂದು ಟ್ಯುಬ್ ನಿಮ್ಮ ಮೂಗಿನ ಒಳಭಾಗಕ್ಕೆ ಕನೆಕ್ಟ್ ಮಾಡುತ್ತದೆ. Outer ear ಮತ್ತು Middle Ear ನ್ನು ಸಪರೇಟ್ ಮಾಡಲು ಒಂದು ತೆಳುವಾದ ಪದರವಿದೆ. ಇದನ್ನೇ ನಾವು ತಮಟೆ/ Ear drum ಎನ್ಬನುವುದು.ಬಲ ಕಿವಿಯನ್ನೇ ತೆಗೆದುಕೊಳ್ಳೋಣ.
Ear drum ನ ಬಲ ಭಾಗವು ನೇರವಾಗಿ ವಾತಾವರಣದ ಒತ್ತಡಕ್ಕೆ (Atmospheric pressure) ಸಂಪರ್ಕ ಹೊಂದಿದೆ.
ಹೀಗೂ ಯೋಚಿಸಿ ನೋಡಿ. ಒಂದು ವೇಳೆ Eustichian tube ಇಲ್ಲದೆ ಹೋಗಿದ್ದರೆ, Atmospheric pressure (ear drum ನ ಹೊರಗಡೆಯಿಂದ) ಹೆಚ್ಚಾದಾಗ ಆ Ear drum ಸ್ವಲ್ಪ ಒಳಗಡೆ ಬಾಗುತಿತ್ತು. Pressure ಕಡಿಮೆ ಆದರೆ ಹೊರಗಡೆ ಬಾಗುತಿತ್ತು. ಒತ್ತಡ ಹೆಚ್ಚಾದರೆ ಹರಿದೇ ಹೋಗಿ ಕಿವುಡರಾಗುತ್ತಿದ್ದಿರಿ. ಏಕೆಂದರೆ ತಮಟೆಯ ಒಳಭಾಗದಿಂದ , ಮೂಗು ಅಥವಾ ಬಾಯಿಗೆ ಯಾವುದೇ ಸಂಪರ್ಕ ಇಲ್ಲ. ಹಾಗಾದರೆ Ear drum ನ ಎರಡೂ ಕಡೆಯಲ್ಲೂ ಒಂದೇ ಅರ್ಥಾತ್ Atmospheric pressure ಇರುವಂತೆ Eustachian tube ನೋಡಿಕೊಳ್ಳುತ್ತದೆ. ಭಗವಂತನ ಸೃಷ್ಟಿ ಅದ್ಭುತ ಎನ್ನುವುದು ಇಂತಹ ವಿಷಯಗಳಿಗೆ....
ಶೀತ(cold) ಆದಾಗ ಕಿವಿ ನೋವು ಏಕೆ ಬರುವುದು? ಶೀತವಾದಾಗ ಮೂಗಿನ ಒಳಭಾಗದಲ್ಲಿ ದ್ರವ ರೂಪದ mucous ಉತ್ತತ್ತಿಯಾಗುವುದು ನಿಮಗೆ ತಿಳಿಯದ ವಿಷಯವೇನಲ್ಲ ಬಿಡಿ. Mucous ನಮ್ಮ Eustachian tubeನ್ನು Block ಮಾಡುತ್ತದೆ. Eustichian tube ಬಾಯಿ/ಮೂಗಿಗೆ ಕನೆಕ್ಟ್ ಮಾಡುತ್ತಿದ್ದ ದಾರಿ ಸಂಪೂರ್ಣ ಬಂದ್. ಇದೀಗ Ear drum ನ ಮೇಲೆ ಒತ್ತಡ ಹೆಚ್ಚಾಗಿ ನೋವು ಬರುತ್ತದೆ. ಬಾರೀ ನೋವು ಕಾಣಿಸಿಕೊಳ್ಳುತ್ತದೆ. Mucous ನಲ್ಲಿರುವ ರೋಗಾಣು(microbes) middle Ear ಗೂ ಧಾವಿಸಿ ಅಲ್ಲೂ ತನ್ನ ಕೈಚಳಕ ತೋರಬಹುದು. Middle Ear ನ ಗೋಡೆಗಳಿಂದ ಮತ್ತಷ್ಟೂ mucous ಉತ್ತತ್ತಿಯಾಗಿ ನೋವನ್ನು ಜೀವಂತವಾಗಿಸಬಹುದು. ಇದನ್ನೇ ನಾವು Middle ear infection ಎಂದು ಕರೆಯುತ್ತೇವೆ. ರೋಗಿ ನೋವು ತಡೆಯಲಾರದೇ ಕೈಗಳಿಂದ ಕಿವಿ ಮುಚ್ಚಿಕೊಂಡು ಆಕ್ರಂಧಿಸುತ್ತಾನೆ. ಈ ಸಮಸ್ಯೆಯನ್ನು ಕಡೆಗಣಿಸಬಾರದು. Infection middle ear ನ
ಮೇಲ್ಛಾವಣಿಯನ್ನು(roof) ಒಡೆದು ಡೈರೆಕ್ಟ್ ಮೆದುಳಿಗೆ ಎಂಟ್ರಿ ಕೊಡುತ್ತೆ. Meninges ಅಂತ ಮೂರು ಚೀಲಗಳು ಮೆದುಳನ್ನು ಸುತ್ತುವರೆದಿದೆ. ಈ meninges ಗಳು ಕೀಟಾಣುಗಳಿಗೆ ತುತ್ತಾಗಿ, infection ಗೆ ಒಳಗಾದಾಗ ನಾವು 'Meningitis' ಎಂದು ಕರೆಯುತ್ತೇವೆ. ಕಿವಿ ಎನ್ನುವುದು ನಾನಾ ವಿಧಗಳಲ್ಲಿ ಡೆಲಿಕೇಟ್ ಆರ್ಗನ್!

Comments
Post a Comment