Skip to main content

ಮೊದಲು ಬೇಸಿಕ್ ಕಲಿಯಿರಿ....Part 3

     ಹತ್ತನೇ ಕ್ಲಾಸ್ ಮುಗಿಯಿತು. ಮುಂದೇನು? ಡಾಕ್ಟರ್ ಆಗಬೇಕೆಂಬ ಹೆಬ್ಬಯಕೆ ಹೊತ್ತ ವಿದ್ಯಾರ್ಥಿ ಪಿ.ಸಿ.ಎಮ್.ಬಿ ಯತ್ತ ಮುಖ ಮಾಡುತ್ತಾನೆ. ಪಿ.ಸಿ.ಎಮ್.ಬಿ ತೆಗೊಂಡ್ರೆ ಹಲವಾರು  ವೃತ್ತಿ ಶಿಕ್ಷಣಗಳ ಆಯ್ಕೆಗಳಿವೆ ಎಂಬ ಕಾರಣಕ್ಕೆ ಕೆಲವು ಮಂದಿ ಧಾವಿಸುತ್ತಾರೆ. "ಸಾಕಪ್ಪ ಸಾಕು, ಈ ಜೀವಶಾಸ್ತ್ರ(Biology) ಸಹವಾಸ" ಎನ್ನುವವರು ಕಂಪ್ಯೂಟರ್ ಸಯನ್ಸ್ ,ಎಲೆಕ್ಟ್ರಾನಿಕ್ಸ್ ವಿಷಯಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಬಯೋಲಾಜಿಯಲ್ಲಿ ಕಲಿಯಲು ಬಹಳಷ್ಟು ಇವೆಯಂತೆ, ಡ್ರಾಯಿಂಗ್ ಗೊತ್ತಿರಬೇಕಂತೆ ಎಂಬ ಅಂತೆ-ಕಂತೆಗಳ ಸಂತೆ! ಇದು ನಾವೆಲ್ಲಾ ತಿಳಿದಂತೆ ಕೇವಲ memory based ಅಲ್ಲ. ನಮ್ಮ ಕುತೂಹಲವನ್ನು ದುಪ್ಪಟ್ಟಾಗಿಸುವ ವಿಷಯಗಳೂ ಇವೆ.
 
      ಹೈಸ್ಕೂಲ್ ಬಯೋಲಜಿ ಕಬ್ಬಿಣದ ಕಡಲೆಕಾಯಿ ಅನಿಸುವುದುಂಟು. ಪಠ್ಯ ಪುಸ್ತಕದ ವಿಷಯಗಳಿಗೂ ಹಿಂದೂ-ಮುಂದೂ ಯಾವುದೂ ಇಲ್ಲ. ವಿಷಯಗಳ ಆಳ ಪರಿಚಯಿಸುವ ಉದ್ದೇಶವೇ ಇಲ್ಲ. ಉದಾಹರಣೆಗಳ ಮೂಲಕವೇ ತಿಳಿಯೋಣ....
      
Sympathetic and Parasympathetic nervous system
      ನೀವು ಯಾವುದೋ ಮನೆಯ ಎದುರಗಡೆ 'ನಾಯಿ ಇದೆ ಎಚ್ಚರಿಕೆ!!' ಬೋರ್ಡ್ ಕಂಡೂ, ಒಳಗಡೆ ಹೋಗಲೇಬೇಕೆಂಬ ಪರಿಸ್ಥಿತಿಯಲ್ಲಿದ್ದೀರಿ ! ನಿಮ್ಮ ಗ್ರಹಚಾರ ನೆಟ್ಟಗೆ ಇರದಿದ್ರೆ ಆ ನಾಯಿ ಅಲ್ಲೇ ಪ್ರತ್ಯಕ್ಷವಾಗುತ್ತದೆ. ನೀವು ಜೀವದ ಆಸೆಯನ್ನೇ ಬಿಟ್ಟು ಬಿಡುತ್ತೀರಿ. ಆದರೆ ನಿಮ್ಮ Central nervous system  ಇದೆಯಲ್ಲಾ? ಅದು ನಿಮ್ಮನ್ನು ಬದುಕಿಸಲು ಪ್ರಯತ್ನ ಮಾಡುತ್ತದೆ. ತನ್ನದೇ ಒಂದು ಅಂಗವಾದ Autonomic nervous system ಅನ್ನು ಎಚ್ಚರಿಸುತ್ತದೆ. ಇದರ ಭಾಗವಾಗಿ ನಿಮ್ಮ ದೇಹದಲ್ಲಿ Sympathetic nervous system ಕಾರ್ಯಪ್ರವೃತ್ತವಾಗುವುದು.
   
    ಈ ಸಿಸ್ಟಮ್ ಏನೆಲ್ಲಾ ಮಾಡುತ್ತದೆ ನೋಡೋಣ...
1)ಹೃದಯ ಬಡಿತ (Heart beat) ಹೆಚ್ಚಾಗುತ್ತದೆ.
    ಯಾಕೆ? ಎಂದು ನೀವು ಕೇಳಲೇಬೇಕು. ಏಕೆಂದರೆ ನಿಮ್ಮ concept ಮತ್ತಷ್ಟು ಪ್ರಭಲವಾಗುತ್ತದೆ. ನಾಯಿ ನಿಮ್ಮ ಕಾಲಿಗೆ ಬಾಯಿ ಹಾಕುವ ಮೊದಲು ಅಲ್ಲಿಂದ ಕಾಲ್ಕಿತ್ತು ಓಡಬೇಕಲ್ಲವೇ? ಅಲ್ಲದೇ ತಪ್ಪಿಸಿಕೊಳ್ಳಲು ಒಂದುಷ್ಟು calculations  ಆಗುತ್ತಿರಬೇಕು.  ಹಾಗಾದರೆ ಮೆದುಳು, ಕೈಕಾಲುಗಳ ಸ್ನಾಯುಗಳಿಗೆ ರಕ್ತ ಧಾವಿಸಿ ಬರಬೇಕು. ಅಂದರೆ ಹೃದಯ ತನ್ನ ಕಾರ್ಯವನ್ನು ವೃದ್ಧಿಸಬೇಕು.
2) ಮೈಯಲ್ಲಿರುವ ಕೂದಲು ಎದ್ದು ನಿಲ್ಲುತ್ತದೆ.(Erection of hair)
    ನಿಮಗೆ ತಿಳಿದಿದೆ ಆ ನಾಯಿ ಅದೆಷ್ಟು ಭಯಾನಕ ಎಂದು. ನಿಮ್ಮ ಭಯಾನಕತೆಯನ್ನು ಆ ಶ್ವಾನಕ್ಕೂ ಒಂದು ಬಾರಿ ತೋರಬೇಕಲ್ಲವೇ?  ಪ್ರಾಣಿ ಸಂಕುಲಗಳಲ್ಲಿ ಇವುಗಳು ಮತ್ತಷ್ಟೂ ಪರಿಣಾಮಕಾರಿ. ಮುಳ್ಳಿನಂತೆ ಎದ್ದು ನಿಂತ ಕೂದಲುಗಳು  ಎದುರಿಗಿರುವ ವೈರಿಯನ್ನು ಹೆದರಿಸಬಲ್ಲದು.
3) Pupillary dilation
                 

    ಕಣ್ಣಿನ ಮಧ್ಯ ಭಾಗದಲ್ಲಿ ಕಪ್ಪು ಬಣ್ಣದ ಚಿಕ್ಕ ಗೋಲಿಯಂತಹಾ ಆಕೃತಿಯನ್ನು Pupil ಎನ್ನುತ್ತಾರೆ. ಇದರ ಮೂಲಕವೇ ಬೆಳಕಿನ ಕಿರಣಗಳು (light rays) ಕಣ್ಣೊಳಗೆ ಹೋಗುವುದು. ನಿಮಗೆ ತಿಳಿದಿದೆ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕತ್ತಲು ಜಾಸ್ತಿ. ಮಾವುದಾದರೂ ಪ್ರಾಣಿ ಮತ್ತಾವುದೋ ಪ್ರಾಣಿಯನ್ನು ಭೇಟೆಯಾಡಲು ಬಂದಾಗ , ಆ ಪ್ರಾಣಿಯು ಕಡುಕತ್ತಲೆಯಲ್ಲೂ ತಪ್ಪಿಸುವ ಅನಿವಾರ್ಯತೆ ಇದೆ. ಓಡಲು ದಾರಿ ಕಾಣಿಸಬೇಕಲ್ಲವೇ? ಹಾಗಾಗಿ Pupil ದೊಡ್ಡದಾದರೆ(Pupillary dilation)  ಗರಿಷ್ಠ ಪ್ರಮಾಣದಲ್ಲಿ ಬೆಳಕು ಕಣ್ಣನ್ನು ಪ್ರವೇಶಿಸುತ್ತದೆ. ಈ ಅಂಶಗಳು ಕ್ರಮೇಣ ಬಳುವಳಿಯಾಗಿ ಮನುಷ್ಯನಿಗೂ ಬಂದಿದೆ.
4) Decreased convexity of lens
          ಕಣ್ಣೊಳಗೆ ಪುಟ್ಟ ಲೆನ್ಸ್ ಇರುತ್ತದೆ. ಈ ಲೆನ್ಸಿನ  convexity ಹೆಚ್ಚಾಗುವುದು ನೀವು ಹತ್ತಿರದ ವಸ್ತುವನ್ನು ನೋಡಬಯಸಬೇಕೆನ್ನುವಾಗ.  ದೂರದ ವಸ್ತುವನ್ನು ವಿಕ್ಷಿಸುವಾಗ ಅದು ತನ್ನ convexity ಯನ್ನು ಕಡಿಮೆಗೊಳಿಸುತ್ತದೆ. ಈಗ ಯೋಚಿಸಿ ...ನಾಯಿಯಿಂದ ಬಚಾವ್ ಅಗಲು ಓಡುವಾಗ ದೂರದೃಷ್ಠಿ ಇರಬೇಬೇಕಾ? ಹೌದು ನೀವು ಆದಷ್ಟು ದೂರದ ದಾರಿಯನ್ನೇ ಗಮನಿಸುತ್ತಾ ಓಡುವಿರಿ.
5) Relaxation of smooth muscles of Digestive system and bronchus.
   
     ಈಗ ನಿಮಗೆ ಪ್ರಾಣ ಉಳಿಸಿಕೊಳ್ಳುವುದು ಮುಖ್ಯವೇ ಹೊರತು,ಈ ಮೊದಲು ತಿಂದ ಆಹಾರವನ್ನು ಜೀರ್ಣಿಸುವುದಲ್ಲ. ಅದಕ್ಕಾಗಿ ಜೀರ್ಣಾಂಗ ವ್ಯವಸ್ಥೆಯ ಮಾಂಸಗಳನ್ನು(smooth muscles) relax ಮಾಡಲಾಗುವುದು.
    ವಾಯು ನಾಳ(bronchus)ದ ಮೂಲಕ ಉಸಿರಲ್ಲಿ ತೆಗೆದುಕೊಂಡ ಗಾಳಿಯು ಶ್ವಾಸಕೋಶಗಳಿಗೆ(lungs) ಸಂಚರಿಸುತ್ತದೆ. ವಾಯುನಾಳದ ಮಾಂಸಗಳು ವಿಕಸನ (relax) ಹೊಂದಿದಾಗ ನಾಳವು ಹಿಗ್ಗುತ್ತದೆ(  increase in diameter of the bronchus). ಹೆಚ್ಚಿನ ಆಮ್ಲಜನಕ(Oxygen) ದೇಹಕ್ಕೆ ಹೋಗುತ್ತದೆ.
6) Constriction of superficial vessels and blood vessels to the digestive system.
    Superficial vessels ಇವೆಯಲ್ಲಾ? ಇವುಗಳು ಚರ್ಮ ಇತ್ಯಾದಿಗಳಿಗೆ ರಕ್ತವನ್ನು ಹಂಚುತ್ತದೆ. ನೀವು ಓಡುವಾಗ ಇವುಗಳ ಅವಶ್ಯಕತೆ ಏನಾದರೂ ಇದೆಯಾ? ನೀವೇ ಯೋಚಿಸಿ. ಹಾಗಾಗಿ ಈ ರಕ್ತನಾಳಗಳು(superficial and vessels to digestive system) ತನ್ನ diameterನ್ನು ಕಡಿಮೆ ಮಾಡುತ್ತದೆ.   ಹೆಚ್ಚಿನ ರಕ್ತ ಮೆದುಳು ಹಾಗೂ ಕೈಕಾಲುಗಳ ಮಾಂಸಕ್ಕೆ ಹೋಗುತ್ತದೆ.  ಇನ್ನಷ್ಟೂ ಹೇಳಬೇಕೆಂದರೆ B.P ಜಾಸ್ತಿ ಆಗ್ತದೆ. ಮೊದಲಿನ ಒತ್ತಡದಲ್ಲಿ ರಕ್ತ ಅಷ್ಟು ವೇಗವಾಗಿ supply ಆಗುವುದಿಲ್ಲ.  ದೇಹದಲ್ಲಿದ್ದ Fat ಕರಗಿ ಹೆಚ್ಚು ಹೆಚ್ಚು Glucose ಉತ್ಪಾದನೆಯಾಗುತ್ತದೆ. ಏಕೆಂದರೆ ರಕ್ತದ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿ ಇಡಬೇಕಾಗುತ್ತದೆ. ಸಾಕಷ್ಟು ಸಕ್ಕರೆಯನ್ನು ಮಾಂಸ ಹಾಗೂ ಮೆದುಳೇ ತಿನ್ನುತ್ತದೆ!!!
ಮೇಲಿನ ಎಲ್ಲಾ ಅಂಶಗಳೂ ಸೇರಿ You are under STRESS ಅಂತ ಹೇಳಬಹುದು....
    ಅಂತೂ ಇಂತೂ ನಾಯಿಯಿಂದ ಬಲುದೂರ ಬಂದಿದ್ದೀರಿ.  ನಿಮ್ಮ Stress ತುಂಬಾ ಸಮಯ ಇದ್ದರೆ ಆರೋಗ್ಯ ಹಾಳಾದೀತು. ಈಗ ಆ ನಾಯಿಯೂ ಇಲ್ಲ , ಓಡಬೇಕೆಂಬ ಅನಿವಾರ್ಯತೆಯೂ ಇಲ್ಲ. ಆ ನಂತರ ನಿಮ್ಮ Sympathetic System ಗೆ ವಿರುದ್ಧವಾಗಿ Parasympathetic System   ಕೆಲಸ ಮಾಡುತ್ತದೆ. ಮೇಲಿನ ಎಲ್ಲಾ ಅಂಶಗಳೂ ವುಲ್ಟಾ ಹೊಡೆಯುತ್ತದೆ. ತಿಂದ ಆಹಾರವನ್ನು ಜೀರ್ಣೀಸಲು ಸೂಕ್ತ ಸಮಯ. B.P, ಹೃದಯ ಬಡಿತ ಎಲ್ಲವೂ ಮೊದಲಿನ ಸ್ಥಿತಿಗೆ ಬರುತ್ತದೆ.
 
  ಒಟ್ಟಾಗಿ ಹೇಳಬೇಕೆಂದರೆ ನೀವು ಸಹಜ ಸ್ಥಿತಿಯಲ್ಲಿರುವಾಗ Parasympathetic  activity ಯದ್ದೇ ಮೇಲುಗೈ. ಆದರೆ Fight Flight Fright ಸಂಧರ್ಭಗಳಲ್ಲಿ sympathetic ಅಂಶ ಹೆಚ್ಚಾಗುತ್ತದೆ. ಎರಡೂ System ಬಹಳ ಪ್ರಯೋಜನಕಾರಿ. Sympathetic ಸಿಂಪತಿ ತೋರಿಸಿ ನಿಮ್ಮ ಪ್ರಾಣ ಉಳಿಸಿದರೆ , Parasympathetic  ನಿಮ್ಮ stress ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡುತ್ತದೆ. 
   ಯೋಗಾ ಇದೆಯಲ್ಲಾ? ನಿಮ್ಮಲ್ಲಿ Parasympathetic activity ಯನ್ನು ಹೆಚ್ಚಿಸಿ, ಮನ:ಶಾಂತಿಯನ್ನು ನೀಡುತ್ತದೆ.
ಈಗ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ.
ಜೀವಶಾಸ್ತ್ರ memory based?
                 ಬೋರಿಂಗ್ ಸಬ್ಜೆಕ್ಟ್?
         ಅಥವಾ ಕುತೂಹಲಕಾರಿ ಸಂಗತಿಯೋ???
   
                 
 

Comments

Popular posts from this blog

ಹೇಗಿರುತ್ತೆ ಗೊತ್ತಾ 1st Year MBBS? ನಿಮ್ಮ ಕುತೂಹಲಕ್ಕೊಂದು ಪೂರ್ಣ ವಿರಾಮ!!!

ಎಮ್.ಬಿ.ಬಿ.ಎಸ್ ಅಂದ್ರೆ ನಿಮಗೆ ನೆನಪು ಬರುವುದು ಉಪ್ಪಿದಾದ ಇಲ್ಲಾಂದ್ರೆ ಮುನ್ನಾಬಾಯ್. ನನ್ನ ಪ್ರಕಾರ ಅವೆಲ್ಲವೂ ಸಿನೆಮಾ ಹಾಲ್ನಲ್ಲಿ   ನೋಡಲು ಚಂದ. ಅಲ್ಲಿಯ ಚಿತ್ರಣವೇ ಬೇರೆ...ನೈಜತೆಯೇ ಬೇರೆ. ಈ ಡಿಜಿಟಲ್ ಹೊತ್ತಗೆಯ  ಹಾಳೆಯೊಳು ನನ್ನದೊಂದು ಸಿಹಿಕಹಿ ಅನುಭವಗಳ ಸಂಗ್ರಹ ನಿಮ್ಮ ಮುಂದೆ.....     ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ  ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉ...

'ರಾಗಿಂಗ್' ನಿಜಕ್ಕೂ ಇದೆಯಾ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಠಿಣ!

  ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!     ಇಂಜಿನಿಯರಿಂಗ್,  ಆರ್ಟ್ಸ್  ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ.  ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು.  ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1%  ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ    ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವ...

ಮೊದಲು ಬೇಸಿಕ್ ಕಲಿಯಿರಿ....Part 1

       ನಮ್ಮ ಬಹಳಷ್ಟು ವಿಜ್ಞಾನ ಪಠ್ಯ ಪುಸ್ತಕದಲ್ಲಿ ದೊಡ್ಡ ದೊಡ್ಡ ನಿಯಮಗಳಿವೆ. ನ್ಯೂಟನ್ ನಿಯಮ, ಐನ್ಸ್ಟೀನ್ಸ್  ಥಿಯರಿ ಆಫ್ ರಿಲೇಟಿವಿಟಿ, ಫ್ಲೆಮಿಂಗ್ಸ್ ಲಾ ಇತ್ಯಾದಿ. ಪ್ರೌಢ ಶಿಕ್ಷಣದಿಂದ ಹಿಡಿದು ಒಂದಷ್ಟು ಪಿಯು ವಿದ್ಯಾರ್ಥಿಗಳು ಇವುಗಳನ್ನ ಕಂಠಪಾಠ ಮಾಡುತ್ತಾ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಅಕಸ್ಮಾತ್ ಅವನಿಗೆ ದಿನಾಂಕ ನಿಗದಿಪಡಿಸದೇ ಅನಿರೀಕ್ಷಿತವಾಗಿ ನಾಲ್ಕು ಪ್ರಶ್ನೆಯನ್ನು ಮುಂದಿಟ್ಟರೆ ಆತ ಉತ್ತರಿಸುವನೇ? ನಾನು ಕೇಳುದು, ಇವನು ಓದಿ ಏನಾದರೂ ಪ್ರಯೋಜನ ಉಂಟಾ ಅಂತ! ನನ್ನನ್ನು ನಂಬಿ. ಇಂದು ಅನೇಕರು ಓದಿಗೆ ಈ ಮಾರ್ಗವನ್ನೇ ಆರಿಸಿದ್ದಾರೆ.  ಕಿ.ಮೀ/ಗಂಟೆ  ಯನ್ನು   ಮೀ/ಸೆಕೆಂಡಿಗೆ ಬದಲಿಸಲು ಫಾರ್ಮುಲಾ ಗೊತ್ತಿಲ್ಲದೇ  ಸಾಧ್ಯವಿಲ್ಲ ಎಂಬ ಮನಸ್ಥಿತಿಯವರಿದ್ದಾರೆ. ಕಾಮನ್ ಸೆನ್ಸ್ ಇದ್ದರೆ ಸಾಕು ಬದಲಿಸಲು. ನೋಡಿ, ಫಾರ್ಮುಲ ಕಲಿಯಬೇಕು ನಿಜ. ಅದರೊಂದಿಗೆ ಅದು ಹೇಗೆ ಉದ್ಭವಿಸಿತು ಎಂದು ನೋಟವನ್ನು ಹಾಯಿಸಬೇಕು. ಆಗ ಫಾರ್ಮುಲಾ ಮರೆತು ಹೋದರೂ ಅದನ್ನು ನೀವೇ ಕಂಡುಕೊಳ್ಳಬಲ್ಲಿರಿ.       ಹಾಗಾದರೆ ಹೇಗೆ ಓದಬೇಕು? ಈ ಮೇಲಿನ ಕೆಲವು ನಿಯಮಗಳನ್ನು ರಾತ್ರಿ 12 ಗಂಟೆಗೆ ಬಡಿದೆಬ್ಬಿಸಿ ಕೇಳಿದರೂ ಅದಕ್ಕೆ ಕಾರಣ ಸಹಿತ ಉತ್ತರ ನೀಡುವಂತಿರಬೇಕು! ಸಿಂಪಲ್ಲಾಗಿ ಹೇಳಬೇಕೆಂದರೆ, ಬೇಸಿಕ್ ಕಲಿಯತಕ್ಕದ್ದು.  ಓಮನ ನಿಯಮ(oh...