ಈ ಲೇಖನದ ಮೂಲಕ ಒಂದಷ್ಟು ಕುತೂಹಲಕಾರಿ ಸಂಗತಿಗಳನ್ನು ತಿಳಿಯಲಿದ್ದೇವೆ. ರಾಯಲ್ ಎನ್ಫೀಲ್ಡ್ ಬೈಕಲ್ಲಿ ಸಂಚರಿಸುತ್ತೀರಿ ಎನ್ನೋಣ. ಹಿಂದೆಯಿಂದ ಅವಸರದಲ್ಲಿದ್ದ ಲಾರಿಯೊಂದು ಬಂತು. ನೀವು ಎದುರಗಡೆ ಇರುವ ಕನ್ನಡಿಯಲ್ಲಿ ವೀಕ್ಷಿಸುತ್ತೀರಿ ಅಲ್ಲವೇ? ಹೋಗಲಿ ಎಂದಾದದರೂ ಅಲ್ಲಿ ಬಿಂಬ (image) ಸೃಷ್ಟಿಯಾಯಿತು ಅಂತ ಚಿಂತಿಸಿದ್ದೀರಾ? ಇದೀಗ ನಮ್ಮ ಚಿತ್ತ ಅದೇ ವಿಷಯದತ್ತ.....
ಒಂದು point ತೆಗೆದುಕೊಳ್ಳುತ್ತೇನೆ. ಅದಕ್ಕೆ A ಎಂದು ನಾಮಕರಣ ಮಾಡುತ್ತೇನೆ. ನನ್ನ ಉದ್ದೇಶ ಈ ಬಿಂದು(point)ವಿನ ಬಿಂಬವನ್ನು(image) ಬಿಳಿಯ ಹಾಳೆಯ ಮೇಲೆ ತೋರಿಸಬೇಕು. ಒಂದು ಪೀನ ಮಸೂರ(Biconvex lens) ಬಳಸಿದ್ರೆ ಸಾಕು.
ವೈಜ್ಞಾನಿಕವಾಗಿ image ಅಂದ್ರೆ ಏನು? ಹೇಗೆ ಉಂಟಾಗುತ್ತದೆ? ಇವೆಲ್ಲಾ ಬಹಳಾ ಕುತೂಹಲ ಮೂಡಿಸುವ , ಹುಚ್ಚು ಹಿಡುಸುವ ಪ್ರಶ್ನೆಗಳು! ಆ point A ಹಲವಾರು ಬೆಳಕಿನ ಕಿರಣಗಳನ್ನು (rays of light)ಎಲ್ಲಾ ದಿಕ್ಕುಗಳಲ್ಲಿ ಹೊರಹಾಕುತ್ತಿರುತ್ತದೆ( reflect ಮಾಡುತ್ತವೆ). ಯಾವುದೇ 2 ಕಿರಣಗಳು ಯಾವುದೋ ಒಂದು ಜಾಗದಲ್ಲಿ ಮತ್ತೆ ಸೇರುತ್ತದೋ, ಆ ಜಾಗದಲ್ಲಿ image ರೂಪುಗೊಂಡಿರುತ್ತದೆ. ವಸ್ತುವಿನ ಬಿಂದುವಿನಿಂದ ಚದುರಿದ(radiating)ಕಿರಣಗಳು ಮತ್ತೆ ಒಂದಾಗುವ ಬಿಂದುವೇ ಅದರ image.
ಈಗ ನೀವು ಕಲಿತದ್ದು image ನ ಬಗ್ಗೆ ತಿಳಿಯಲೇಬೇಕಾದ ಬೇಸಿಕ್ ಸಂಗತಿ.

Biconvex lens ತನ್ನ ಬಳಿ ಬಂದ ಕಿರಣಗಳನ್ನು ಕೇಂದ್ರೀಕರಿಸುತ್ತದೆ(converge). A ಬಿಂದುವಿನಿಂದ ಬಂದ ಒಂದಷ್ಟು ಕಿರಣಗಳನ್ನು ಕೇಂದ್ರೀಕರಿಸಿ ಬೇರಾವುದೋ ಬಿಂದುವಿನಲ್ಲಿ ಒಟ್ಟುಗೂಡಿಸುತ್ತದೆ. ಆ ಬಿಂದುವಲ್ಲಿ ಬಿಳಿಯ ಹಾಳೆಯನ್ನಿಟ್ಟರೆ ಖಡಾಖಂಡಿತವಾಗಿ point Aಯ image ಕಾಣಸಿಗುತ್ತದೆ. ಇನ್ನುಳಿದಂತೆ Focal point, focal length, centre of curvature ಎಲ್ಲವೂ ನಿಮಗೆ ಅರಿವಿರುತ್ತದೆ.
ಒಂದು ವೇಳೆ, ಪೂರ್ಣ ವಸ್ತುವನ್ನೇ(object) Biconvex lens ಬಳಿ ಇಟ್ಟರೆ , ಪೂರ್ಣ image ಹೇಗೆ ಬಿಳಿ ಹಾಳೆಯ ಮೇಲೆ ದೊರಕುತ್ತದೆ ? ಆ ವಸ್ತು
ವಿನ ಪ್ರತಿಯೊಂದು ಬಿಂದುವಿನ image ಬಿಳಿ ಹಾಳೆಯ ಬೇರೆ ಬೇರೆ ಸ್ಥಳಗಳಲ್ಲಿ ಕಾಣುತ್ತದೆ. ಈ ಎಲ್ಲಾ image ಸೇರಿ , ಪೂರ್ಣ ವಸ್ತುವಿನ image ಸಿದ್ಧವಾಗಿರುತ್ತದೆ.
ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ , ಪೂರ್ಣ ವಸ್ತುವಿನ image ಸಿಗಲು ವಸ್ತುವಿನ ಮೇಲಿನ ತುದಿಯ ಬಿಂದುವಿನಿಂದ parallel ಆಗಿ, lens ನಿಂದ ಕೇಂದ್ರಿಕೃತವಾಗಿ ಹೋಗುವ ಕಿರಣ ಹಾಗೂ ವಸ್ತುವಿನ ಕೆಳ ಭಾಗದ ಬಿಂದು, lens ನ ಸೆಂಟರ್ ಮೂಲಕ ಹಾದುಹೋಗುವ ಕಿರಣ ಮಾತ್ರ ಸಾಕು. ಸ್ಕೂಲ್ ಮಕ್ಕಳಿಗೆ ಇದಾವುದೇ ವಿಷಯಗಳ ಸುಳಿವನ್ನೂ ಪಠ್ಯ ಪುಸ್ತಕದಲ್ಲಿ ಮುದ್ರಿಸಿಲ್ಲ. ಕೇವಲ ಎರಡು ಕಿರಣಗಳಿರುವ Ray diagrams ಬಳಸಿ ಕೈ ತೊಳೆದುಕೊಳ್ಳುತ್ತಾರೆ. ಪೂರ್ಣ image ಪಡೆಯಲು ಆ 2 ಕಿರಣಗಳು ಸಾಕು, ಆದರೂ image ನ ಎಲ್ಲಾ ಬಿಂದುಗಳು ಹೇಗೆ ಲಭಿಸಿದವು ಎಂದು ಹೇಳಬೇಕಲ್ಲವೇ? ಕೆಲವು ಸಂದರ್ಭದಲ್ಲಿ ಶಿಕ್ಷಕರೂ ಹೇಳಿ ಕೊಡದೇ ಹೋದರೆ , ಆ ಮಕ್ಕಳ ಗತಿ ಏನು?
Virtual image ನಿಮಗೆ ಏನೆಂದು ಗೊತ್ತಾ?
Biconvex lens ನ ತುಂಬಾ ಹತ್ತಿರಕ್ಕೆ ವಸ್ತುವನ್ನು ತಂದಾಗ , ವಸ್ತುವಿನ image ಬಲ ಭಾಗದಲ್ಲಿ ಬರುವುದಿಲ್ಲ. ವಸ್ತುವಿನ ಯಾವುದಾದರೂ ಒಂದು point ನಿಂದ ಬಂದ ಕಿರಣಗಳು lens ಮೂಲಕ ಹಾದು ಹೋಗಿ ಎಂದಿಗೂ ಒಂದಾಗುವುದಿಲ್ಲ. ಬಲ ಭಾಗದಿಂದ ನೋಡುವ ವ್ಯಕ್ತಿ lens ನಿಂದ ಹೊರ ಬರುವ ಕಿರಣಗಳನ್ನು ಆದರಿಸಿದಾಗ , ಅವನಿಗೆ image ಎಡ ಭಾಗದಲ್ಲಿ ಇರುವಂತೆ ಕಾಣುವುದು.(ನಾವು ಯಾವುದೇ ವಸ್ತುವನ್ನು ಗುರುತಿಸುವುದು ಅದರಿಂದ ಬರುವ ಕಿರಣಗಳನ್ನು ನೋಡಿ. ಆ ಕಿರಣಗಳು diverge ಆಗಿದ್ದರೆ , ಯಾವುದೋ pointನಿಂದ ಬಂದಂತೆ ಕಾಣುತ್ತದೆ. ಬೆಳಕು ಬರುವ ವಿರುದ್ಧ ದಿಕ್ಕಿನಲ್ಲಿ ಮುಂದುವರೆದರೆ ಆ point ಕೂಡಾ ಸಿಗುತ್ತದೆ) .ಯಾವುದೇ ಬಿಳಿ ಹಾಳೆ ಬೇಕಾಗಿಲ್ಲ. ಇದೊಂದು virtual image ಗೆ ಉದಾಹರಣೆ.

"ಅವರು ಪಾಠ ಮಾಡಲಿಲ್ಲ, ಹೀಗಾಗಿ ನಾನು ಕಲಿಯಲಿಲ್ಲ" ಎಂಬ ಮೊಂಡುವಾದ ಬೇಡ! ನೀವೆ ಊಹೆಗಳನ್ನು ಮಾಡಿ. ತಪ್ಪುಗಳನ್ನೂ ಮಾಡಿ. ಏಕೆಂದರೆ "Mistakes are the proof that you are trying ". ಈ ತಪ್ಪುಗಳೇ right concept ನಿಮ್ಮದಾಗುವಂತೆ ಮಾಡುತ್ತದೆ. ಸಾಧ್ಯವಾದರೆ ಅನುಮಾನಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿ. ಇನ್ನೂ ಮನ: ಶಾಂತಿ ದೊರಕದೇ ಹೋದರೆ, ಶಿಕ್ಷಕರ ಬಳಿಯೇ ಹೋಗಿ ಕೇಳಿರಿ. ಇಲ್ಲೂ ಪರಿಹಾರವಾಗುವುದು ಗ್ಯಾರೆಂಟಿ ಏನಿಲ್ಲ. ಕೊನೆಯದಾಗಿ ಪಿ.ಯು ಅಣ್ಣ ಅಕ್ಕಂದಿರ ಬಳಿ ಪ್ರಸ್ಥಾಪಿಸಿ , ಇದರ ಬಗ್ಗೆ ಬೇರೆ ಬೇರೆ ಪುಸ್ತಕಗಳನ್ನು ಓದಿ. ಇದೀಗ ಈ ವಿಷಯ ನಿಮ್ಮ ಆಸ್ತಿ ! ಏನನ್ನೂ ಕದ್ದರೂ ವಿದ್ಯೆ ಎಂಬ ರತ್ನವನ್ನು ದೋಚಲು ಅಸಾಧ್ಯ.
ಮತ್ತೊಮ್ಮೆ ಹೇಳಬಯಸುವುದೇನೆಂದರೆ, ಬೇಸಿಕ್ ಕಲಿಯಿರಿ...
Bhari lakiddu maraya
ReplyDeleteThank u...
Delete