Skip to main content

ಕಡಿಮೆಯಾಗುತ್ತಿದೆಯಾ ಶಿಕ್ಷಕರ ಮೇಲಿನ ಗೌರವ?

     
  ಗುರು ಶಿಷ್ಯರದ್ದು ಅವಿನಾಭಾವ ಸಂಬಂಧ. ಜೀವನದಲ್ಲಿ ಏನಾದರು ಗೆಲುವು ಸಿಕ್ಕಾಗ ಮೊದಲಿಗೆ ನೆನಪಾಗುವವರೇ ನಮ್ಮೆಲ್ಲಾ ಆದರದ ಶಿಕ್ಷಕರು. ನಮ್ಮ ಭವಿಷ್ಯದ ಮಾರ್ಗದರ್ಶಕರು ಅವರೇ. ಅಜ್ಞಾನವೆಂಬ ಕತ್ತಲನ್ನು, ಜ್ಞಾನವೆಂಬ ಜ್ಯೋತಿಯಿಂದ ಬೆಳಗುವವರು ಮತ್ತಾರು? ತನಗೆ ಒಲಿಯದ ಯಶಸ್ಸು , ತನ್ನ ಶಿಷ್ಯನಿಗೆ ಸಿಕ್ಕಾಗ ಸಂತಸ ಪಡುವವನೇ ಗುರು. ಯಶಸ್ಸಿನಲ್ಲಿ  ಎರಡು   ಅಂಶಗಳು ಬಹು ಮುಖ್ಯ . ಏನು ಮಾಡಬೇಕೆಂಬ ಗುರಿ ಒಂದಾದರೆ, ಏನು ಮಾಡಬಾರದು ಎಂಬುದು ಮತ್ತೊಂದು. ಆ ಶಿಕ್ಷಕ 2 ನೇ ಅಂಶದಲ್ಲಿ ಸೋಲನ್ನನುಭವಿಸಿ ವಿದ್ಯಾರ್ಥಿಗೆ ತಿಳಿ ಹೇಳುತ್ತಾನೆ. ಎಲ್ಲಿ ಎಡವಬಾರದು ಎಂದು ಸ್ಪಷ್ಟವಾಗಿ ತೋರಿಸಿಕೊಡುತ್ತಾನೆ....
      ಬೆತ್ತ ಕೈಯಲ್ಲಿ ಹಿಡಿದರೆ, ಮಕ್ಕಳು ಸದ್ದಡಗಿಸಿ ಬೆಂಚಿನಲ್ಲಿ
ಕುಳಿತುಕೊಳ್ಳುತ್ತಿದ್ದರು.ದುರಾದೃಷ್ಟವಾಶಾತ್ ಆ ಬೆತ್ತ ಸಹಿತ ಕೈಗಳಿಗೆ ಕೆಲಸ ಕೊಟ್ಟಾರೆ ನೋವನ್ನು ತಡೆದುಕೊಳ್ಳಲಾರದೇ ಕಣ್ಣ ನೀರು ಕಣ್ಣನ್ನೇ ಬಿಟ್ಟು ಹೊರಡುವುದು! ಪೆಟ್ಟು ಬಿದ್ದ ಜಾಗದಲ್ಲಿ ಬಿಸಿನೋವಿನ ಅನುಭವ! ಆ ಅನುಭವದ ತೀವ್ರತೆ, ಮತ್ತೊಮ್ಮೆ ಅಂತಹ ತಪ್ಪೆಸಗದಂತೆ ನೋಡಿಕೊಳ್ಳುವಂತಿತ್ತು. ತಲೆಗೆ ಹಾಕುತಿದ್ದ  ನಾಲ್ಕು  ಕುಟ್ಟಿ, ಹಿಂಡಿದಾಗ ಕೆಂಪಾಗುತ್ತಿದ್ದ ಕಿವಿಗಳು,  ಬಸ್ಕಿ ತೆಗೆಸಿದಾಗ ಸೆಳೆಯುತ್ತಿದ್ದ ಸ್ನಾಯುಗಳು ಪಶ್ಚಾತಾಪದ ಸಂಕೇತಗಳು! " ಬಿಟ್ಟು ಬಿಡಿ ಸಾರ್ ನನ್ನನ್ನು "ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು  ಅದೇ ಗುರುಗಳನ್ನು ಸದಾ ಹೃದಯದಲ್ಲಿಟ್ಟಿದ್ದರು. ಆ ಪ್ರೀತಿಯ ಗುರುಗಳ ಬೆಲೆ, ಶಾಲೆಯನ್ನು ಬಿಟ್ಟು ಹೋಗುವಾಗ ಅರ್ಥವಾಗುತ್ತಿತ್ತು. ಹೀಗಿತ್ತು ನೋಡಿ, ಅಂದಿನ ನಮ್ಮ ಶಿಕ್ಷಣ ವ್ಯವಸ್ಥೆ. ಶಿಕ್ಷಣದ ಸ್ವರ್ಣಯುಗ ಎಂದಾರೆ ತಪ್ಪಾಗದು.
    ಒಂದಷ್ಟು ಜನ ನಮ್ಮ ಫೇವರೇಟ್ ಟೀಚರ್ಸ್.  ಮತ್ತೊಂದಷ್ಟು ಜನರ ಪಾಠ ,ನೀರಿನಲ್ಲಿ ಹೋಮ ಮಾಡಿದಂತಹ ಭ್ರಾಂತಿ! ಆಗಾಗ ಬಾಯಿ ತೆರೆಯುವ ಸಂಪ್ರದಾಯ! ಅಲ್ಲಲ್ಲಿ ತಲೆಯಾಡಿಸಿ ಸರ್ವವೂ ಅರ್ಥವಾಯಿತು ಎಂದು ತೋರಿಸುವ ವೈಖರಿ ಸರ್ವೇ ಸಾಮಾನ್ಯ ಬಿಡಿ. ಮುಂದಿನ ಅವಧಿಯ ಕಾಪಿ ಪುಸ್ತಕವನ್ನು ಕದ್ದು ಮುಚ್ಚಿ ಬರೆದು ಸಿಕ್ಕಿಬೀಳುವ ಮಹತ್ಕಾರ್ಯ ಮಾಡಿದವರಲ್ಲಿ ನಾವು-ನೀವೂ ಕೂಡಾ ಒಬ್ಬರು.
  
       ಎಲ್ಲದಕ್ಕೂ ಒಂದು ಮಿತಿ ಇದೆ ಅಲ್ಲವೇ? ಆ ಮಿತಿ ಮೀರಿದಾಗ  ಗುರು ಶಿಷ್ಯರ ನಡುವಿನ ಅಂತರ ಹೆಚ್ಚಾಗುವುದು. ಶಿಕ್ಷಕರು ತರಗತಿಯಲ್ಲಿರುವಾಗಲೇ ನಾನಾ ಬಗೆಯ ಶಬ್ಧ ಹೊರಹೊಮ್ಮಿಸುತ್ತಾ ಇಡೀ ತರಗತಿಯನ್ನೇ ಬಲಿ ತೆಗೆದುಕೊಳ್ಳುವುದು ಜಾಸ್ತಿಯಾಗಿದೆ. ಸಿಸಿ ಕ್ಯಾಮರಾ ಹಾಕುವುದು ವಿದ್ಯಾರ್ಥಿ ಸ್ವಾತಂತ್ರ್ಯ ಕಸಿಯುವ ಯತ್ನ ಎಂದು ಭಾವಿಸಬೇಡಿ. ಕ್ಯಾಮರಾಗಳಿಗೂ ಹೆದರದೇ, ಶಿಕ್ಷಕರಿಗೆ ಎದುರುತ್ತರ ನೀಡುವುದು ಅದೆಷ್ಟು ಸರಿ? ಯಾವ ಏಟಿಗೂ ತಲೆ ಕೆಡಿಸದ ಎಮ್ಮೆ ಚರ್ಮದವರು ಅಲ್ಪಬುದ್ಧಿ ಪ್ರದರ್ಶಿಸುವವರು. ಕನಿಷ್ಠ ಪಕ್ಷ ತರಗತಿಯೊಳಗಾದರೂ ಆ ಗೌರವ ನೀಡಬೇಕಲ್ಲವೇ?
ಇಂತಹ ಚಟುವಟಿಕೆಗಳು ಹೊಸ ಟೀಚರ್ ಬಂದಾಗ ಕಾಣಿಸಿಕೊಳ್ಳುವುದು ಹೆಚ್ಚು. ಹೊಸದಾಗಿ ನೇಮಕಗೊಂಡಾಗ ಆ ವೃತ್ತಿಯಲ್ಲಿ ಅನನುಭವ ಇರುವುದು ಸಹಜ. ಹಾಗೆಂದು ತರಗತಿಯಲ್ಲೇ ಅನಾಗರೀಕರಂತೆ ನಡೆಯುವುದು ಎಂದಿಗೂ ಸಹಿಸಲಾಗದ ಸಂಗತಿ. ಕೆಲವು ವರುಷಗಳ ನಂತರ ಅವರೇ ನಿಮ್ಮ ಫೇವರೇಟ್ ಗುರುಗಳಾಗಬಹುದು. ನನ್ನ ಉಪನ್ಯಾಸಕರೊಬ್ಬರು ಹೇಳಿದ ಮಾತೊಂದನ್ನು ಈಗಲೂ ನೆನಪಿಸಬಲ್ಲೆ. " ನಿಮ್ಮಲ್ಲಿ ಯಾರಾದರೂ ಶಿಕ್ಷಕರಾಗಬೇಕೆಂದಿದ್ದರೆ, ಆದಷ್ಟು ಘನವಾಗಿರಿ! ಮುಂದೆ ದೊರಕುವ ವಿದ್ಯಾರ್ಥಿಗಳನ್ನು ಎದುರಿಸುವುದು ಬಹಳಷ್ಟು ಕಠಿಣವಿದೆ...."
    ಸಂಬಳಕ್ಕಾಗಿ ಪಾಠ ಮಾಡುವುದೇ ಆಗಿದ್ದರೆ, ಗದ್ಯ-ಪದ್ಯಗಳಲ್ಲಿ ಪ್ರೀತಿ ಬೆರೆಸದೇ  ತುಟಿಯಾಡಿಸಿ ಹೋಗಬಹುದಿತ್ತು! ಇನ್ನಾದರೂ ಅವರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾ, ಸೌಜನ್ಯದಿಂದಿರೋಣ.......
    
   
  
    
   

Comments

Post a Comment

Popular posts from this blog

ಹೇಗಿರುತ್ತೆ ಗೊತ್ತಾ 1st Year MBBS? ನಿಮ್ಮ ಕುತೂಹಲಕ್ಕೊಂದು ಪೂರ್ಣ ವಿರಾಮ!!!

ಎಮ್.ಬಿ.ಬಿ.ಎಸ್ ಅಂದ್ರೆ ನಿಮಗೆ ನೆನಪು ಬರುವುದು ಉಪ್ಪಿದಾದ ಇಲ್ಲಾಂದ್ರೆ ಮುನ್ನಾಬಾಯ್. ನನ್ನ ಪ್ರಕಾರ ಅವೆಲ್ಲವೂ ಸಿನೆಮಾ ಹಾಲ್ನಲ್ಲಿ   ನೋಡಲು ಚಂದ. ಅಲ್ಲಿಯ ಚಿತ್ರಣವೇ ಬೇರೆ...ನೈಜತೆಯೇ ಬೇರೆ. ಈ ಡಿಜಿಟಲ್ ಹೊತ್ತಗೆಯ  ಹಾಳೆಯೊಳು ನನ್ನದೊಂದು ಸಿಹಿಕಹಿ ಅನುಭವಗಳ ಸಂಗ್ರಹ ನಿಮ್ಮ ಮುಂದೆ.....     ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ  ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉ...

'ರಾಗಿಂಗ್' ನಿಜಕ್ಕೂ ಇದೆಯಾ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಠಿಣ!

  ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!     ಇಂಜಿನಿಯರಿಂಗ್,  ಆರ್ಟ್ಸ್  ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ.  ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು.  ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1%  ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ    ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವ...

ಮೊದಲು ಬೇಸಿಕ್ ಕಲಿಯಿರಿ....Part 1

       ನಮ್ಮ ಬಹಳಷ್ಟು ವಿಜ್ಞಾನ ಪಠ್ಯ ಪುಸ್ತಕದಲ್ಲಿ ದೊಡ್ಡ ದೊಡ್ಡ ನಿಯಮಗಳಿವೆ. ನ್ಯೂಟನ್ ನಿಯಮ, ಐನ್ಸ್ಟೀನ್ಸ್  ಥಿಯರಿ ಆಫ್ ರಿಲೇಟಿವಿಟಿ, ಫ್ಲೆಮಿಂಗ್ಸ್ ಲಾ ಇತ್ಯಾದಿ. ಪ್ರೌಢ ಶಿಕ್ಷಣದಿಂದ ಹಿಡಿದು ಒಂದಷ್ಟು ಪಿಯು ವಿದ್ಯಾರ್ಥಿಗಳು ಇವುಗಳನ್ನ ಕಂಠಪಾಠ ಮಾಡುತ್ತಾ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಅಕಸ್ಮಾತ್ ಅವನಿಗೆ ದಿನಾಂಕ ನಿಗದಿಪಡಿಸದೇ ಅನಿರೀಕ್ಷಿತವಾಗಿ ನಾಲ್ಕು ಪ್ರಶ್ನೆಯನ್ನು ಮುಂದಿಟ್ಟರೆ ಆತ ಉತ್ತರಿಸುವನೇ? ನಾನು ಕೇಳುದು, ಇವನು ಓದಿ ಏನಾದರೂ ಪ್ರಯೋಜನ ಉಂಟಾ ಅಂತ! ನನ್ನನ್ನು ನಂಬಿ. ಇಂದು ಅನೇಕರು ಓದಿಗೆ ಈ ಮಾರ್ಗವನ್ನೇ ಆರಿಸಿದ್ದಾರೆ.  ಕಿ.ಮೀ/ಗಂಟೆ  ಯನ್ನು   ಮೀ/ಸೆಕೆಂಡಿಗೆ ಬದಲಿಸಲು ಫಾರ್ಮುಲಾ ಗೊತ್ತಿಲ್ಲದೇ  ಸಾಧ್ಯವಿಲ್ಲ ಎಂಬ ಮನಸ್ಥಿತಿಯವರಿದ್ದಾರೆ. ಕಾಮನ್ ಸೆನ್ಸ್ ಇದ್ದರೆ ಸಾಕು ಬದಲಿಸಲು. ನೋಡಿ, ಫಾರ್ಮುಲ ಕಲಿಯಬೇಕು ನಿಜ. ಅದರೊಂದಿಗೆ ಅದು ಹೇಗೆ ಉದ್ಭವಿಸಿತು ಎಂದು ನೋಟವನ್ನು ಹಾಯಿಸಬೇಕು. ಆಗ ಫಾರ್ಮುಲಾ ಮರೆತು ಹೋದರೂ ಅದನ್ನು ನೀವೇ ಕಂಡುಕೊಳ್ಳಬಲ್ಲಿರಿ.       ಹಾಗಾದರೆ ಹೇಗೆ ಓದಬೇಕು? ಈ ಮೇಲಿನ ಕೆಲವು ನಿಯಮಗಳನ್ನು ರಾತ್ರಿ 12 ಗಂಟೆಗೆ ಬಡಿದೆಬ್ಬಿಸಿ ಕೇಳಿದರೂ ಅದಕ್ಕೆ ಕಾರಣ ಸಹಿತ ಉತ್ತರ ನೀಡುವಂತಿರಬೇಕು! ಸಿಂಪಲ್ಲಾಗಿ ಹೇಳಬೇಕೆಂದರೆ, ಬೇಸಿಕ್ ಕಲಿಯತಕ್ಕದ್ದು.  ಓಮನ ನಿಯಮ(oh...