Skip to main content

ಅವ್ಯುಕ್ತ ಕನ್ನಡ


   
ಹೊಸ ಬ್ಲಾಗ್ ಒಂದನ್ನು ಹುಟ್ಟು ಹಾಕುವ ಯೋಚನೆ ನನ್ನದಾಗಿತ್ತು. ಒಂದೆರಡು ಬ್ಲಾಗ್ನಲ್ಲಿ ಕೆಲವು ಲೇಖನಗಳನ್ನು ಬರೆದಿದ್ದದ್ದು ಬಿಟ್ಟರೆ, ಮತ್ತಾವ ಯೋಚನೆಗಳೂ ಆ ಬ್ಲಾಗ್ ಮೇಲಿರಲಿಲ್ಲ , ಅರ್ಥಾತ್  ಬ್ಲಾಗ್ ಎಂದರೆ ಏನು ಎಂಬ ತಿಳುವಳಿಕೆಯನ್ನು ಹೊಂದಿದವನಾಗಿರಲಿಲ್ಲ. ಅದನ್ನು ಹೇಗೆ ನಿರ್ವಹಿಸುತ್ತಾರೆ? ಅಥವಾ ಎಷ್ಟು ವೆಚ್ಚ ತಗುಲುತ್ತದೆ? ಇಂಥಹ ಪ್ರಶ್ನೆಗಳು ನನಗ್ಯಾಕೆ? ಅಂತ ಅಂದುಕೊಂಡಿದ್ದೆ.
     ಏಕೋ?ಏನೋ?  ಬೇರೆ ಬ್ಲಾಗ್ ಮಾಡೋಣ ಅನಿಸಿತು. ನನ್ನ ಗೆಳೆಯನೊಬ್ಬ ಈ ವಿಷಯದಲ್ಲಿ ಎತ್ತಿದ ಕೈ! ಅವನ ಬಳಿ ಕೇಳಿದೆ " ಹೊಸ ಬ್ಲಾಗ್ ಮಾಡುವ ಪ್ಲಾನ್ ಉಂಟು " . ಆತ "ಹೋ...ಗುಡ್ " ಎಂದು ಉತ್ತರಿಸಿದ.  ಉಚಿತ ಹಾಗೂ ಅನುಚಿತ ಬ್ಲಾಗ್ ಗಳ ಉಪಯೋಗಳು ಮತ್ತು ತೊಂದರೆಗಳನ್ನು ಹೇಳಿದ. ಎಲ್ಲಾ ವಿಷಯವನ್ನು ಅಳೆದು ತೂಗಿದಾಗ ಗೂಗಲ್ ಬ್ಲಾಗರ್ ಉತ್ತಮ ಎಂದನಿಸಿತು. ಕೆಲವು ಬ್ಲಾಗ್ ಗಳಿಗೆ, ವಾರ್ಷಿಕ ವೆಚ್ಚ ಬರಿಸಿ ಕೈಸುಟ್ಟುಕೊಳ್ಳಲು ಹಿಂಜರಿಕೆ! 



       ಒಂದಷ್ಟು ಗೆಳೆಯರ ಬಳಗ ಸೇರಿ ಒಂದು ಉತ್ತಮ ಬ್ಲಾಗ್ ನಿರ್ಮಿಸುವುದು ನನ್ನ ಕನಸಾಗಿತ್ತು. ಒಂದು ಒಳ್ಳೆಯ ತಂಡ ಕಟ್ಟುವುದೂ ಕೂಡಾ ಸವಾಲಾಗಿತ್ತು. ಒಂದೊಳ್ಳೆ ಹೆಸರೂ ಇಡಬೇಕಾಗಿತ್ತು. ಪಿ.ಯು ಸಹಪಾಠಿಯೋರ್ವ ನಮ್ಮ ಭಾರತೀಯ ಸೈನ್ಯ ಹಾಗೂ ಅರಣ್ಯದ ವಿಶೇಷ ಜ್ಞಾನವನ್ನು ತನ್ನದಾಗಿಸಿಕೊಂಡವನಾಗಿದ್ದ. "ಹೆಸರೆಂತ ಇಡುದು" ಎಂದು ಸಂದೇಶ ರವಾನಿಸಿದೆ. ಕ್ಷಣ ಕಾಲವೂ ಕಾಯದೇ " ಅವ್ಯುಕ್ತ" ಎಂದು ಉತ್ತರಿಸಿದ. ನಿಜವಾಗಿ ಹೇಳಬೇಕೆಂದರೆ ಅದರರ್ಥ ಏನೆಂದು ಗೊತ್ತಿರಲಿಲ್ಲ. 'ಕ್ರಿಸ್ಟಲ್ ಕ್ಲೀಯರ್ '  ಎಂಬುದಾಗಿ ಗೂಗಲ್ ತೋರಿಸಿತು. ಅಹಾ ! ಅರ್ಥಪೂರ್ಣವಾಗಿದೆ, ಇದನ್ನೇ ಅಂತಿಮಗೊಳಿಸುವ ನಿರ್ಧಾರವನ್ನು ನಮ್ಮ ತಂಡ ಮಾಡಿತು. ತಿಳಿದಿರಲಿ ನಮ್ಮ ಉದ್ದೇಶ ತರತರದ ಗಮನಾರ್ಹ ವಿಷಯಗಳನ್ನು ಓದುಗರಿಗೆ ಉಣಬಡಿಸುವುದು! ನಮ್ಮಲ್ಲಿರುವವರೆಲ್ಲರೂ ಬೇರೆ ಬೇರೆ ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿದ ವಿದ್ಯಾರ್ಥಿಗಳು. ಅವ್ಯುಕ್ತ ಎನ್ನುವ ಹೆಸರು ನಮ್ಮ ಹುರುಪನ್ನು ಇಮ್ಮಡಿಗೊಳಿಸಿದೆ.  ಸ್ಪಟಿಕಸ್ಪಷ್ಟ ( ಅವ್ಯುಕ್ತ) ಲೇಖನಗಳಿಗೆ ಜೀವ ತುಂಬುವ ಆಶಾವಾದದೊಂದಿಗೆ ರಚಿಸಿದ್ದೇವೆ
      AVYUKTHA KANNADA ಹಾಗೂ
       AVYUKTHA ENGLISH...........
   
  

Comments

Popular posts from this blog

ಹೇಗಿರುತ್ತೆ ಗೊತ್ತಾ 1st Year MBBS? ನಿಮ್ಮ ಕುತೂಹಲಕ್ಕೊಂದು ಪೂರ್ಣ ವಿರಾಮ!!!

ಎಮ್.ಬಿ.ಬಿ.ಎಸ್ ಅಂದ್ರೆ ನಿಮಗೆ ನೆನಪು ಬರುವುದು ಉಪ್ಪಿದಾದ ಇಲ್ಲಾಂದ್ರೆ ಮುನ್ನಾಬಾಯ್. ನನ್ನ ಪ್ರಕಾರ ಅವೆಲ್ಲವೂ ಸಿನೆಮಾ ಹಾಲ್ನಲ್ಲಿ   ನೋಡಲು ಚಂದ. ಅಲ್ಲಿಯ ಚಿತ್ರಣವೇ ಬೇರೆ...ನೈಜತೆಯೇ ಬೇರೆ. ಈ ಡಿಜಿಟಲ್ ಹೊತ್ತಗೆಯ  ಹಾಳೆಯೊಳು ನನ್ನದೊಂದು ಸಿಹಿಕಹಿ ಅನುಭವಗಳ ಸಂಗ್ರಹ ನಿಮ್ಮ ಮುಂದೆ.....     ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ  ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉ...

ನಾವೆಲ್ಲರೂ ಸಮಾನರು. 【ಮಾನವರಲ್ಲಿ ಮೂರು ವಿಧ.....ಗಂಡು, ಹೆಣ್ಣು, ಹಾಗೂ ಮಂಗಳಮುಖಿಯರು】

                 ನಾವೆಲ್ಲರೂ ಸಮಾನರು     (ಮಾನವರಲ್ಲಿ ಮೂರು ವಿಧ             -ಹೆಣ್ಣು            -ಗಂಡು            -ಮಂಗಳಮುಖಿ)               ನಾವೆಲ್ಲರೂ ಒಂದೇ , ಸಮಾನರು ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ತಮ್ಮತಮ್ಮದೇ ಆದ ಸ್ಥಾನವಿದೆ, ಮೌಲ್ಯವಿದೆ. "ಎಲ್ಲಾ ಚರ ಹಾಗೂ ಅಚರ ಜೀವಿಗಳಲ್ಲಿರುವ ಆ ಜೀವಕ್ಕೆ , ಆತ್ಮಕ್ಕೆ ಕಾರಣವಾದ 'ಚೈತನ್ಯ' - ಪರಮಾತ್ಮ" -  ಈ ವಾಕ್ಯವು ಒಂದು ರೀತಿಯಲ್ಲಿ ಆಧ್ಯಾತ್ಮಿಕತವಾದದಂತೆಯೇ ತೋರುತ್ತದೆ. ಆದರೆ ಕೊನೇ ಪಕ್ಷ ಮಾನವರಾದ ನಾವೆಲ್ಲರೂ ಸಮಾನರು ಎಂಬುವುದನ್ನಾದರೂ ಒಪ್ಪಿಕೊಳ್ಳಲೇಬೇಕಲ್ಲವೇ?            ಭಾರತದ ಇತಿಹಾಸವನ್ನು ನೋಡುತ್ತಾ ವೇದಗಳ ಕಾಲಕ್ಕೆ ತೆರಳಿದರೆ ಅಂದು ಸ್ತ್ರೀಯರಿಗೂ ಪುರುಷರಿಗೂ ಮೌಲಿಕವಾದ ಸ್ಥಾನ ಇತ್ತು ಎನ್ನಲಾಗುತ್ತಿದೆ. ತದನಂತರ ಪುರುಷಪ್ರಧಾನ  ಸಮಾಜ ನಿರ್ಮಾಣವಾಯಿತು, ಅದು ಇಂದಿಗ...

'ರಾಗಿಂಗ್' ನಿಜಕ್ಕೂ ಇದೆಯಾ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಠಿಣ!

  ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!     ಇಂಜಿನಿಯರಿಂಗ್,  ಆರ್ಟ್ಸ್  ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ.  ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು.  ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1%  ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ    ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವ...