Skip to main content

ಟೀಚರ್ ಕಿವಿ ಯಾತಕ್ಕೆ ಹಿಂಡುತ್ತಿದ್ದರೆಂದು ತಿಳಿದರೆ ಅಚ್ಛರಿ ಪಡುವಿರಿ!

    ನೀವು ಚಿಕ್ಕವರಾಗಿದ್ದಾಗ ಚಿಕ್ಕಪುಟ್ಟ ತಪ್ಪನ್ನು ಮಾಡಿರುತ್ತೀರಿ. ಹೆದರುತ್ತಲೇ ಚೇಷ್ಠೆ ನಡೆದೇಬಿಟ್ಟುರುತ್ತದೆ. ಇನ್ನೂ ಹಲವು ಬಾರಿ ಮಾಸ್ಟರ್ ಹೇಳಿದ ಮನೆಕೆಲಸ( Home work) ಮಾಡದೇ ತರಗತಿಗೆ ಹಾಜರಾಗಿರುತ್ತೀರಿ. ಎಲ್ಲಾ ಸಂಧರ್ಭಗಳಲ್ಲೂ Common ಅಂದ್ರೆ, ಶಿಕ್ಷೆಗೆ ಒಳಪಡುವುದು. ಅದರಲ್ಲೂ ಟೀಚರ್ ಬಂದು ಕಿವಿ ಹಿಂಡುವುದು!!! ಕಿವಿ ಹಿಂಡುವಿಕೆಯಲ್ಲಿ ವೈಜ್ಞಾನಿಕ ಕಾರಣವೊಂದು ಅಡಗಿದೆ.....

     

    Vagus nerve ಎಂಬ ನರವು ಕಿವಿಯ ಚರ್ಮದ ಒಳಭಾದಲ್ಲಿ ಹರಿಯುತ್ತದೆ(Auricular branch of vagus nerve ಚಿತ್ತದಲ್ಲಿ ಕಾಣುತ್ತಿದೆ). ಈ ನರ ಹೃದಯ ಹಾಗೂ ಜೀರ್ಣಾಂಗ ವ್ಯವಸ್ಥೆ(Digestive system)ಗೂ ವ್ಯಾಪಿಸಿದೆ. ಇದರ ಕೆಲಸ ಏನು ಗೊತ್ತೇ? ಹೃದಯ ಬಡಿತವನ್ನು ಕಡಿಮೆ ಮಾಡಿ Stress ನ್ನು ಕ್ಷಮನ ಮಾಡುವುದು. ಜೀರ್ಣಾಂಗ ವ್ಯವಸ್ಥೆಯನ್ನು ಹುರಿದುಂಬಿಸಿ, ಆದಷ್ಟು ಬೇಗ ಆಹಾರ ಪಚ್ಛನವಾಗುವಂತೆ ನೋಡಿಕೊಳ್ಳುತ್ತದೆ. ಅಂದರೆ ಅನ್ನನಾಳ(Oesophagus), ಜಠರ(Stomach), ಸಣ್ಣ ಮತ್ತು ದೊಡ್ಡ ಕರುಳು( small and large intestine) ಇತ್ಯಾದಿ ನಾಳಗಳ propulsive movement(miximg movement)ನ್ನು ಹೆಚ್ಚು ಮಾಡುತ್ತದೆ. ಮತ್ತು ರಸಗಳು( enzyme secretions) ಹೆಚ್ಚಾಗುವುದು.

    ಕಿವಿ ಹಿಂಡಿದಾಗ ಈ ನರ ಸಿಕ್ಕಾಪಟ್ಟೆ Active ಆಗುತ್ತದೆ. ಹೃದಯ ಬಡಿತ ಕಡಿಮೆಯಾಗಿ ಮನ ಶಾಂತಿ ಸಿಗುತ್ತದೆ. ಜೀರ್ಣಕ್ರಿಯೆ ವರ್ಧಿಸುತ್ತದೆ. ನೆನಪಿರಲಿ vagus ಎಂಬುದು Parasympathetic systemಗೆ ಒಳಪಡುತ್ತದೆ. Parasympathetic system ಆಕ್ಟಿವ್ ಆದಾಗ ದೇಹ Stressನಿಂದ ಹೊರಬರುತ್ತದೆ. ಯೋಗವೂ ಕೂಡಾ ಇದೇ systemನ್ನು ಉತ್ತೇಜಿಸುವುದು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಶಿಕ್ಷಕರು ಕಿವಿಹಿಂಡುವ ಮೂಲಕ ಗೊತ್ತಿದ್ದೋ, ಗೊತ್ತಿಲ್ಲದೇ ಆ ವಿದ್ಯಾರ್ಥಿ ಪಠ್ಯವನ್ನು ಗ್ರಹಿಸಲುಬೇಕಾದ  ಪರಿಸರವನ್ನು ಸೃಷ್ಠಿಸುತ್ತಾರೆ. ಅದಕ್ಕೇ ಹೇಳುವುದು 'ಗುರು: ದೇವೋ ಭವ'.......

Comments

Post a Comment

Popular posts from this blog

ಮೊದಲು ಬೇಸಿಕ್ ಕಲಿಯಿರಿ......Part 4

           ಒಂದು ಸಿಂಪಲ್ ಪ್ರಶ್ನೆಯೊಂದಿಗೆ ಈ ಲೇಖನವನ್ನು ಆರಂಭಿಸೋಣ ಅನಿಸುತ್ತಿದೆ. ಕಣ್ಣಿದ್ದೂ ಕುರುಡನಾಗಬಹುದೇ???  Optic nerve ಇಲ್ಲವೇ ಮೆದುಳು ಎಲ್ಲವೂ ಸರಿಯಾಗಿ ಇದೆ ಅಂದುಕೊಳ್ಳೋಣ.ಹಾಗಾದರೆ  ಕಿವಿ( Ear) ಇಲ್ಲದೇ ಕುರುಡನಾಗುವ ಎಲ್ಲಾ ಅವಕಾಶಗಳಿವೆ! ದಿಗ್ಭ್ರಮೆಯಲ್ಲಿದ್ದೀರಾ? ತುಂಬಾ ಯೋಚಿಸಬೇಡಿ.... ಕಿವಿ ಇಲ್ಲದಿದ್ದರೆ ಆತ ಹೇಗೆ ಕನ್ನಡ್ಕ ಹಾಕ್ತಾನೆ ಹೇಳಿ. ಇದನ್ನೇ ನಾವು ಹಾಸ್ಯಾಸ್ಪದವಾಗಿ ಕಣ್ಣಿದ್ದೂ ಕುರುಡ ಎನ್ನುವುದು. ತಿಳಿಯಿತೇ ಕಿವಿ ಎಷ್ಟು ಮುಖ್ಯ ಅಂತ? ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಾಗಿಲ್ಲ ನಿಮ್ಮ ಕಿವಿಗಳು!!!       ಕಿವಿಯನ್ನು ಹೇಗೆ ವಿಂಗಡನೆ ಮಾಡುದು? ಕೆಲಸಗಳೇನು? ಏನನೆಲ್ಲಾ ಒಳಗೊಂಡಿದೆ? ಇದಕ್ಕುತ್ತರ ನಿಮ್ಮ ಟೆಕ್ಸ್ಟ್ ಬುಕ್ಕಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಬೇಕಾದ್ರೆ ಹತ್ತು ಸಲ ಓದಿ, ಒಂದಿಷ್ಟು ಅಂಶಗಳ ವಿಶ್ಲೇಷಣೆ ಬಡವಾಗಿದೆ! ಕೊಟ್ಟ ವಿಷಯಗಳಿಗೆ ಕಾರಣ (Reason) ಕೊರತೆ ಇದೆ. ಈ ಕೆಳಗಿನ ಭಾಗದಲ್ಲಿ ನಿಮಗೆ ಎಲ್ಲಿ ಡೌಟ್ ಬರುತ್ತದೋ, ಎಲ್ಲಿ ದ್ವಂದ್ವವಿದಯೋ, ಅಲ್ಲೇ ಗಮನ ಹರಿಸಲಾಗುವುದು. Basic ಜಾಡು ಹಿಡುದು ಹುಡುಕುವ ತವಕದಲ್ಲಿದ್ದೇವೆ....      ಕಿವಿಯನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ. 1) Inner Ear 2) Middle Ear 3) Outer Ear  ...

ನಾವೆಲ್ಲರೂ ಸಮಾನರು. 【ಮಾನವರಲ್ಲಿ ಮೂರು ವಿಧ.....ಗಂಡು, ಹೆಣ್ಣು, ಹಾಗೂ ಮಂಗಳಮುಖಿಯರು】

                 ನಾವೆಲ್ಲರೂ ಸಮಾನರು     (ಮಾನವರಲ್ಲಿ ಮೂರು ವಿಧ             -ಹೆಣ್ಣು            -ಗಂಡು            -ಮಂಗಳಮುಖಿ)               ನಾವೆಲ್ಲರೂ ಒಂದೇ , ಸಮಾನರು ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ತಮ್ಮತಮ್ಮದೇ ಆದ ಸ್ಥಾನವಿದೆ, ಮೌಲ್ಯವಿದೆ. "ಎಲ್ಲಾ ಚರ ಹಾಗೂ ಅಚರ ಜೀವಿಗಳಲ್ಲಿರುವ ಆ ಜೀವಕ್ಕೆ , ಆತ್ಮಕ್ಕೆ ಕಾರಣವಾದ 'ಚೈತನ್ಯ' - ಪರಮಾತ್ಮ" -  ಈ ವಾಕ್ಯವು ಒಂದು ರೀತಿಯಲ್ಲಿ ಆಧ್ಯಾತ್ಮಿಕತವಾದದಂತೆಯೇ ತೋರುತ್ತದೆ. ಆದರೆ ಕೊನೇ ಪಕ್ಷ ಮಾನವರಾದ ನಾವೆಲ್ಲರೂ ಸಮಾನರು ಎಂಬುವುದನ್ನಾದರೂ ಒಪ್ಪಿಕೊಳ್ಳಲೇಬೇಕಲ್ಲವೇ?            ಭಾರತದ ಇತಿಹಾಸವನ್ನು ನೋಡುತ್ತಾ ವೇದಗಳ ಕಾಲಕ್ಕೆ ತೆರಳಿದರೆ ಅಂದು ಸ್ತ್ರೀಯರಿಗೂ ಪುರುಷರಿಗೂ ಮೌಲಿಕವಾದ ಸ್ಥಾನ ಇತ್ತು ಎನ್ನಲಾಗುತ್ತಿದೆ. ತದನಂತರ ಪುರುಷಪ್ರಧಾನ  ಸಮಾಜ ನಿರ್ಮಾಣವಾಯಿತು, ಅದು ಇಂದಿಗ...

ಮೊದಲು ಬೇಸಿಕ್ ಕಲಿಯಿರಿ .... Part 2

      ಈ ಲೇಖನದ ಮೂಲಕ ಒಂದಷ್ಟು ಕುತೂಹಲಕಾರಿ ಸಂಗತಿಗಳನ್ನು ತಿಳಿಯಲಿದ್ದೇವೆ. ರಾಯಲ್ ಎನ್ಫೀಲ್ಡ್ ಬೈಕಲ್ಲಿ  ಸಂಚರಿಸುತ್ತೀರಿ ಎನ್ನೋಣ. ಹಿಂದೆಯಿಂದ ಅವಸರದಲ್ಲಿದ್ದ ಲಾರಿಯೊಂದು ಬಂತು. ನೀವು ಎದುರಗಡೆ ಇರುವ ಕನ್ನಡಿಯಲ್ಲಿ ವೀಕ್ಷಿಸುತ್ತೀರಿ ಅಲ್ಲವೇ? ಹೋಗಲಿ ಎಂದಾದದರೂ ಅಲ್ಲಿ ಬಿಂಬ (image) ಸೃಷ್ಟಿಯಾಯಿತು ಅಂತ ಚಿಂತಿಸಿದ್ದೀರಾ? ಇದೀಗ ನಮ್ಮ ಚಿತ್ತ ಅದೇ ವಿಷಯದತ್ತ.....              ಒಂದು  point ತೆಗೆದುಕೊಳ್ಳುತ್ತೇನೆ. ಅದಕ್ಕೆ A ಎಂದು ನಾಮಕರಣ ಮಾಡುತ್ತೇನೆ. ನನ್ನ ಉದ್ದೇಶ ಈ ಬಿಂದು(point)ವಿನ  ಬಿಂಬವನ್ನು(image) ಬಿಳಿಯ ಹಾಳೆಯ ಮೇಲೆ ತೋರಿಸಬೇಕು. ಒಂದು ಪೀನ ಮಸೂರ(Biconvex lens)  ಬಳಸಿದ್ರೆ ಸಾಕು. ವೈಜ್ಞಾನಿಕವಾಗಿ image ಅಂದ್ರೆ ಏನು? ಹೇಗೆ ಉಂಟಾಗುತ್ತದೆ? ಇವೆಲ್ಲಾ ಬಹಳಾ ಕುತೂಹಲ ಮೂಡಿಸುವ , ಹುಚ್ಚು ಹಿಡುಸುವ ಪ್ರಶ್ನೆಗಳು!  ಆ point A ಹಲವಾರು ಬೆಳಕಿನ ಕಿರಣಗಳನ್ನು (rays of light)ಎಲ್ಲಾ ದಿಕ್ಕುಗಳಲ್ಲಿ  ಹೊರಹಾಕುತ್ತಿರುತ್ತದೆ( reflect ಮಾಡುತ್ತವೆ). ಯಾವುದೇ 2 ಕಿರಣಗಳು ಯಾವುದೋ ಒಂದು ಜಾಗದಲ್ಲಿ ಮತ್ತೆ ಸೇರುತ್ತದೋ, ಆ ಜಾಗದಲ್ಲಿ image ರೂಪುಗೊಂಡಿರುತ್ತದೆ. ವಸ್ತುವಿನ ಬಿಂದುವಿನಿಂದ ಚದುರಿದ(radiating)ಕಿರಣಗಳು ಮತ್ತೆ ಒಂದಾಗುವ ಬಿಂದುವೇ ಅದರ image. ಈಗ ನೀವು ...