Skip to main content

'ರಾಗಿಂಗ್' ನಿಜಕ್ಕೂ ಇದೆಯಾ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಠಿಣ!

 ರಾಗಿಂಗ್ (Ragging) ಅಂದ್ರೆ ಹಾಗಿರುತ್ತದೆ...ಹೀಗಿರುತ್ತದೆ ಅಂತೆಲ್ಲಾ ಕೇಳಿರುತ್ತೀರಿ ಬಿಡಿ. ನಿಜವಾಗಿ ಹೇಗಿರುತ್ತದೆ! ಒಳ್ಳಯದೋ ಅಥವಾ ಕೆಟ್ಟದೋ, ನೋಡೋಣ. ರಾಗಿಂಗ್ ಇವತ್ತೂ ಇದೆಯಾ; ಇದ್ದರೆ ಯಾರು ಮಾಡುತ್ತಾರೆ, ಅದರ ಪ್ರಮಾಣ ಎಷ್ಟಿದೆ! ಮತ್ತೊಂದು ದೊಡ್ಡ Question mark ಎಂದರೆ ಯಾಕೆ ಮಾಡುತ್ತಾರೆ. ಇದರಿಂದ ಲಾಭ ಯಾರಿಗೆ , ನಷ್ಟ ಯಾರಿಗೆ ಎಂದು ತಿಳಿದುಕೊಳ್ಳುವ ಕೌತುಕ ನಿಮ್ಮಲ್ಲಿದೆಯೇ? ಹಾಗಾದರೆ ಖಡಾಖಂಡಿತವಾಗಿ ಕಣ್ರೆಪ್ಪೆ ಮುಚ್ಚದೇ ಈ ಲೇಖನವನ್ನು ಓದುವಿರಿ!!!

    ಇಂಜಿನಿಯರಿಂಗ್,  ಆರ್ಟ್ಸ್  ಇತ್ಯಾದಿ ಕ್ಷೇತ್ರದಲ್ಲಿ ಅಷ್ಟೇನು ಇಲ್ಲವೆಂಬುದು ನನ್ನ ಭಾವನೆ.  ಮೆಡಿಕಲ್ ಐಐಟಿ ಕಾಲೇಜುಗಳಲ್ಲಿ ಸ್ವಲ್ಪ ಜಾಸ್ತಿ. "ನಾನು ರಾಗಿಂಗ್ ಮಾಡುವುದಿಲ್ಲ " ಎಂದು ಒಂದು ಸರ್ಟಿಫಿಕೇಟ್ಗೆ ಸಹಿ ಎಲ್ಲರೂ ಮಾಡುವುದುಂಟು.  ಹಾಗಂತ ಯಾವುದೇ ಕಾಲೇಜುಗಳಲ್ಲಿ ರಾಗಿಂಗ್ ಇಲ್ಲ ಎಂದು ಹೇಳುವಂತಿಲ್ಲ. 1%  ಆದರೂ ಇದ್ದೇ ಇರುತ್ತದೆ! ವಿವಿಧ ದೃಷ್ಟಿಕೋನಗಳಿಂದ ಇದನ್ನು ಅಳೆಯಬೇಕಾಗುತ್ತದೆ

   ನೋಡಿ ವಿದ್ಯಾರ್ಥಿಗಳ ನೋಟದಲ್ಲಿ ರಾಗಿಂಗ್ ಎಂದರೆ ಬೇರೆ , ಪೋಷಕರ ದೃಷ್ಟಿಯಲ್ಲಿ ಬೇರೆ. ಮೊದಮೊದಲು ವಿದ್ಯಾರ್ಥಿಗಳಿಗೆ ರಾಗಿಂಗ್ ಎಂದರೆ ಭಯವಾಗುವುದರಲ್ಲಿ ಸಂಶಯವಿಲ್ಲ .ನಂತರ ರೂಢಿಯಾಗಿ ಬಿಡುತ್ತದೆ .ಇಷ್ಟೇನಾ ಅಂದುಕೊಳ್ಳುವಿರಿ.ಈಗಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವುದೇ ತೊಂದರೆಗಳನ್ನು ಉಂಟುಮಾಡುವುದಿಲ್ಲ. ಮೊದಲಿತ್ತು ನಿಜ. ಒಬ್ಬ ಸೀನಿಯರ್ ಬಂದು ಜೂನಿಯರ್ ಬಳಿ ನಿನ್ನ ಹೆಸರೇನು ,ಎಲ್ಲಿ ನಿನ್ನ ಮನೆ, ಅಂತೆಲ್ಲ ವಿಚಾರಿಸದರೆ  ತಪ್ಪಲ್ಲ. ನಮ್ಮ ಸಂಪೂರ್ಣ ಬಯೋಡಾಟಾ ಕೇಳಿದರೂ ತಪ್ಪಲ್ಲ. ಹಾಗಾದರೆ ಇವೆಲ್ಲವನ್ನು ಕೇಳಿ ಏನು ಪ್ರಯೋಜನ ಬಂತು ಸ್ವಾಮಿ....

     ಯಾವುದೇ ವೃತ್ತಿಪರ ಕೋರ್ಸುಗಳಲ್ಲಿ ಮೊದಲ ವರ್ಷ ಬಹುಮುಖ್ಯ ಅಲ್ಲಿನ ಪರಿಸರಕ್ಕೆ ಹೊಂದಿಕೆಯ ಆಗುವುದು ಅತ್ಯಗತ್ಯ. ಒಂದಷ್ಟು ಜನರ ಸಪೋರ್ಟ್ ಬೇಕಾಗಿರುವ ಸಂದರ್ಭ  ಹೇಗೆ ಓದಬೇಕು ಪರೀಕ್ಷಾ ತಯಾರಿ ಹೇಗಿರಬೇಕು ವಸ್ತ್ರ ವಿನ್ಯಾಸ ಮಾತುಗಾರಿಕೆ ಮನಸ್ಥೈರ್ಯ ಇವೆಲ್ಲವನ್ನು ತುಂಬಿ ಉತ್ತಮ  ಗೆಳೆಯ ಗೆಳತಿಯ ಸ್ಥಾನದಲ್ಲಿ ಸೀನಿಯರ್ಸ್ ನಿಲ್ಲುತ್ತಾರೆ. ಈಗಿನ ಯುಗದವರೆಗೆ ದೊಡ್ಡವರಿಗೆ ಹೇಗೆ ಗೌರವ ಸೂಚಿಸಬೇಕು ಎಂಬುದೇ ಗೊತ್ತಿಲ್ಲ. ಅದಕ್ಕಾಗಿಯೇ ಸೀನಿಯರ್ಸ್ ಕಿರಿಯರನ್ನು ತಿದ್ದಿ ಬುದ್ಧಿ ಹೇಳುತ್ತಾರೆ. ಇವತ್ತಿಗೂ ಜ್ಯೂನಿಯರ್ಸ್ "good morning ಸರ್, good evening ಮೇಡಂ" ಎನ್ನುತ್ತಾ ಶುಭ ಕೋರುತ್ತೇರೆ. ಮೆಡಿಕಲ್ ಕ್ಷೇತ್ರದಲ್ಲಿ ಸರ್ವವೂ ದುಬಾರಿ!!  ವರ್ಷ ವರ್ಷವೂ ಕೇಜಿಗಟ್ಟಲೆ ಪುಸ್ತಕಗಳು, ಇತರ ಸಲಕರಣಿಗಳು ಬೇಕಾಗಿರುತ್ತದೆ. ನಮ್ಮ ಸೀನಿಯರ್ಸ್  ಇವೆಲ್ಲವನ್ನೂ ಉಚಿತವಾಗಿ ಒದಗಿಸುತ್ತಾರೆ . ಪಾಸ್ ಆಗಲು ಕಾರಣಕರ್ತರು ಅವರೆಂದರೆ ತಪ್ಪಾಗದು. ಕಿರಿಯರಿಂದ ಅವರು ಬಯಸುವುದು ಗೌರವ ಒಂದೇ. ನಮ್ಮ ಹವ್ಯಾಸಗಳ ಬಗ್ಗೆ ಅವರು ಹೇಗೋ ತಿಳಿದುಕೊಳ್ಳುತ್ತಾರೆ.ಒಂದಿಷ್ಟು ಟಾಸ್ಕ್ ಕೊಡುತ್ತಾರೆ. ಟಾಸ್ಕ್ ಪೂರ್ಣಗೊಳಿಸುವುದೇ ಒಂದು ಗಮ್ಮತ್ತು. ನನಗಂತೂ ವೇದಿಕೆಯ ಮೇಲೆ ಹಾಡೊಂದಕ್ಕೆ ಚಿತ್ರ ಬಿಡಿಸಲು ಅವಕಾಶ ಕಲ್ಪಿಸಿಕೊಟ್ಟರು .ಎಲ್ಲರೂ ನನ್ನನ್ನು ಗುರುತಿಸುವಂತೆ ಮಾಡಿದರು. ಹೀಗೆ ಹಲವಾರು ವೇದಿಕೆಗಳನ್ನು ನಮಗಾಗಿ ಸಿದ್ಧಗೊಳಿಸುತ್ತಾರೆ.

  ಒಬ್ಬೊಬ್ಬ ಶಿಕ್ಷಕರೂ ಒಂದೊಂದು ರೀತಿ! ಅವರ ಮಾತಿನ ವೈಖರಿ, ಪಾಠ ಮಾಡುವ ವಿಧಾನ ಶಿಕ್ಷಿಸುವ ಬಗೆ ಎಲ್ಲವೂ ವಿಭಿನ್ನ .ಇಂತಹ ಸೂಕ್ಷ್ಮ ವಿಚಾರಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಮುಂದೆ ವೈದ್ಯನಾದ ವೇಳೆಯೂ ನಮ್ಮೊಂದಿಗೆ ಸಂಪರ್ಕದಲ್ಲಿದ್ದು ಕೈ ಹಿಡಿಯುವವರೂ ಅವರೇ! ಈ ವಿಷಯಗಳನ್ನು ಪೋಷಕರಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಇಂತಹ ರೀತಿಯ ಚಿಕ್ಕಪುಟ್ಟ ಸಂಗತಿಗಳನ್ನು ಅವರ ಗಮನಕ್ಕೆ ತರದಿದ್ದರೇ ಸೂಕ್ತ. ಅವರು ಗಾಭರಿಗೊಳಗಾದಾರು.ಇವೆಲ್ಲವನ್ನೂ ರಾಗಿಂಗ್ ಎನ್ನಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅಂತಹಾ ಮೂರ್ಖನೂ ನಾನಲ್ಲ.

     ಹೌದು ಎಲ್ಲರೂ ಐಡಿಯಲ್ ಸೀನಿಯರ್ ಅಲ್ಲ ಎಂಬುದು ಅಷ್ಟೇ ಸತ್ಯ .ಕೆಲವರ ಮನಸ್ಥಿತಿಯೇ ಹಾಳು. ಅಂತಹವರಿಂದ ತೊಂದರೆಗೊಳಗಾದರೆ ಮೊಟ್ಟಮೊದಲು ಶಿಕ್ಷಕರಿಗೆ ದೂರು ನೀಡಿ. ನಂತರವಷ್ಟೇ ಪೋಷಕರಿಗೆ ತಿಳಿಸಿ. ಮತ್ತಷ್ಟೂ ತೀವ್ರವಾಗಿದ್ದರೆ ಠಾಣೆಯಲ್ಲೇ ಕಂಪ್ಲೆಂಟ್ ನೀಡುವ ಅವಕಾಶ ನಿಮಗಿದೆ. ಈ ಮೂಲಕ ನಿಮ್ಮಲ್ಲಿ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸುತ್ತೇನೆ .ಒಂದು ವೇಳೆ ನೀವು ಕಪ್ಲೆಂಟ್ ಕೊಟ್ಟೇಬಿಟ್ಟರೆ ,ಸೀನಿಯರ್ ವಿದ್ಯಾರ್ಥಿಯ ಭವಿಷ್ಯ ಕತ್ತಲಾಗುವುದು ಖಂಡಿತ. ಈ ಜಗತ್ತಿನಲ್ಲಿರುವ ಯಾವುದೇ ಯುನಿವರ್ಸಿಟಿ ಆತನಿಗೆ ಡಾಕ್ಟರ್ ಪದವಿಯನ್ನು ಕೊಡಲು ಸಾಧ್ಯವೇ ಇಲ್ಲ. ಸತ್ಯಕ್ಕೂ ನೀವು ರಾಗಿಂಗ್ ಗೆ ಒಳಗಾಗಿದ್ದೀರಾ ಎಂದು ಹತ್ತು ಬಾರಿಯಾದರೂ ಯೋಚಿಸಿ. ಆ ಬಳಿಕವಷ್ಟೇ ಮುಂದುವರೆಯಿರಿ. ಸೀನಿಯರ್, ಜೂನಿಯರ್ ಹತ್ತಿರವಾಗಲು ಇರುವ ಸಂಬಂಧದ ಸೇತುವೆಯನ್ನು 'ರಾಗಿಂಗ್ 'ಎಂದು ನಾಮಕರಣ ಮಾಡುವುದು ಆಕ್ಷೇಪಾರ್ಹ ಸಂಗತಿ. ಪ್ರಥಮ ವರ್ಷದ ಹಲವು ಅನುಭವಗಳಿಗೆ ಇದೀಗ ಪೂರ್ಣವಿರಾಮ ನೀಡುವ ವರ್ತಮಾನ.
  
    

Comments

Post a Comment

Popular posts from this blog

ನಾವೆಲ್ಲರೂ ಸಮಾನರು. 【ಮಾನವರಲ್ಲಿ ಮೂರು ವಿಧ.....ಗಂಡು, ಹೆಣ್ಣು, ಹಾಗೂ ಮಂಗಳಮುಖಿಯರು】

                 ನಾವೆಲ್ಲರೂ ಸಮಾನರು     (ಮಾನವರಲ್ಲಿ ಮೂರು ವಿಧ             -ಹೆಣ್ಣು            -ಗಂಡು            -ಮಂಗಳಮುಖಿ)               ನಾವೆಲ್ಲರೂ ಒಂದೇ , ಸಮಾನರು ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ತಮ್ಮತಮ್ಮದೇ ಆದ ಸ್ಥಾನವಿದೆ, ಮೌಲ್ಯವಿದೆ. "ಎಲ್ಲಾ ಚರ ಹಾಗೂ ಅಚರ ಜೀವಿಗಳಲ್ಲಿರುವ ಆ ಜೀವಕ್ಕೆ , ಆತ್ಮಕ್ಕೆ ಕಾರಣವಾದ 'ಚೈತನ್ಯ' - ಪರಮಾತ್ಮ" -  ಈ ವಾಕ್ಯವು ಒಂದು ರೀತಿಯಲ್ಲಿ ಆಧ್ಯಾತ್ಮಿಕತವಾದದಂತೆಯೇ ತೋರುತ್ತದೆ. ಆದರೆ ಕೊನೇ ಪಕ್ಷ ಮಾನವರಾದ ನಾವೆಲ್ಲರೂ ಸಮಾನರು ಎಂಬುವುದನ್ನಾದರೂ ಒಪ್ಪಿಕೊಳ್ಳಲೇಬೇಕಲ್ಲವೇ?            ಭಾರತದ ಇತಿಹಾಸವನ್ನು ನೋಡುತ್ತಾ ವೇದಗಳ ಕಾಲಕ್ಕೆ ತೆರಳಿದರೆ ಅಂದು ಸ್ತ್ರೀಯರಿಗೂ ಪುರುಷರಿಗೂ ಮೌಲಿಕವಾದ ಸ್ಥಾನ ಇತ್ತು ಎನ್ನಲಾಗುತ್ತಿದೆ. ತದನಂತರ ಪುರುಷಪ್ರಧಾನ  ಸಮಾಜ ನಿರ್ಮಾಣವಾಯಿತು, ಅದು ಇಂದಿಗ...

ಮೊದಲು ಬೇಸಿಕ್ ಕಲಿಯಿರಿ......Part 4

           ಒಂದು ಸಿಂಪಲ್ ಪ್ರಶ್ನೆಯೊಂದಿಗೆ ಈ ಲೇಖನವನ್ನು ಆರಂಭಿಸೋಣ ಅನಿಸುತ್ತಿದೆ. ಕಣ್ಣಿದ್ದೂ ಕುರುಡನಾಗಬಹುದೇ???  Optic nerve ಇಲ್ಲವೇ ಮೆದುಳು ಎಲ್ಲವೂ ಸರಿಯಾಗಿ ಇದೆ ಅಂದುಕೊಳ್ಳೋಣ.ಹಾಗಾದರೆ  ಕಿವಿ( Ear) ಇಲ್ಲದೇ ಕುರುಡನಾಗುವ ಎಲ್ಲಾ ಅವಕಾಶಗಳಿವೆ! ದಿಗ್ಭ್ರಮೆಯಲ್ಲಿದ್ದೀರಾ? ತುಂಬಾ ಯೋಚಿಸಬೇಡಿ.... ಕಿವಿ ಇಲ್ಲದಿದ್ದರೆ ಆತ ಹೇಗೆ ಕನ್ನಡ್ಕ ಹಾಕ್ತಾನೆ ಹೇಳಿ. ಇದನ್ನೇ ನಾವು ಹಾಸ್ಯಾಸ್ಪದವಾಗಿ ಕಣ್ಣಿದ್ದೂ ಕುರುಡ ಎನ್ನುವುದು. ತಿಳಿಯಿತೇ ಕಿವಿ ಎಷ್ಟು ಮುಖ್ಯ ಅಂತ? ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಾಗಿಲ್ಲ ನಿಮ್ಮ ಕಿವಿಗಳು!!!       ಕಿವಿಯನ್ನು ಹೇಗೆ ವಿಂಗಡನೆ ಮಾಡುದು? ಕೆಲಸಗಳೇನು? ಏನನೆಲ್ಲಾ ಒಳಗೊಂಡಿದೆ? ಇದಕ್ಕುತ್ತರ ನಿಮ್ಮ ಟೆಕ್ಸ್ಟ್ ಬುಕ್ಕಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಬೇಕಾದ್ರೆ ಹತ್ತು ಸಲ ಓದಿ, ಒಂದಿಷ್ಟು ಅಂಶಗಳ ವಿಶ್ಲೇಷಣೆ ಬಡವಾಗಿದೆ! ಕೊಟ್ಟ ವಿಷಯಗಳಿಗೆ ಕಾರಣ (Reason) ಕೊರತೆ ಇದೆ. ಈ ಕೆಳಗಿನ ಭಾಗದಲ್ಲಿ ನಿಮಗೆ ಎಲ್ಲಿ ಡೌಟ್ ಬರುತ್ತದೋ, ಎಲ್ಲಿ ದ್ವಂದ್ವವಿದಯೋ, ಅಲ್ಲೇ ಗಮನ ಹರಿಸಲಾಗುವುದು. Basic ಜಾಡು ಹಿಡುದು ಹುಡುಕುವ ತವಕದಲ್ಲಿದ್ದೇವೆ....      ಕಿವಿಯನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ. 1) Inner Ear 2) Middle Ear 3) Outer Ear  ...

ಮೊದಲು ಬೇಸಿಕ್ ಕಲಿಯಿರಿ....Part 1

       ನಮ್ಮ ಬಹಳಷ್ಟು ವಿಜ್ಞಾನ ಪಠ್ಯ ಪುಸ್ತಕದಲ್ಲಿ ದೊಡ್ಡ ದೊಡ್ಡ ನಿಯಮಗಳಿವೆ. ನ್ಯೂಟನ್ ನಿಯಮ, ಐನ್ಸ್ಟೀನ್ಸ್  ಥಿಯರಿ ಆಫ್ ರಿಲೇಟಿವಿಟಿ, ಫ್ಲೆಮಿಂಗ್ಸ್ ಲಾ ಇತ್ಯಾದಿ. ಪ್ರೌಢ ಶಿಕ್ಷಣದಿಂದ ಹಿಡಿದು ಒಂದಷ್ಟು ಪಿಯು ವಿದ್ಯಾರ್ಥಿಗಳು ಇವುಗಳನ್ನ ಕಂಠಪಾಠ ಮಾಡುತ್ತಾ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಅಕಸ್ಮಾತ್ ಅವನಿಗೆ ದಿನಾಂಕ ನಿಗದಿಪಡಿಸದೇ ಅನಿರೀಕ್ಷಿತವಾಗಿ ನಾಲ್ಕು ಪ್ರಶ್ನೆಯನ್ನು ಮುಂದಿಟ್ಟರೆ ಆತ ಉತ್ತರಿಸುವನೇ? ನಾನು ಕೇಳುದು, ಇವನು ಓದಿ ಏನಾದರೂ ಪ್ರಯೋಜನ ಉಂಟಾ ಅಂತ! ನನ್ನನ್ನು ನಂಬಿ. ಇಂದು ಅನೇಕರು ಓದಿಗೆ ಈ ಮಾರ್ಗವನ್ನೇ ಆರಿಸಿದ್ದಾರೆ.  ಕಿ.ಮೀ/ಗಂಟೆ  ಯನ್ನು   ಮೀ/ಸೆಕೆಂಡಿಗೆ ಬದಲಿಸಲು ಫಾರ್ಮುಲಾ ಗೊತ್ತಿಲ್ಲದೇ  ಸಾಧ್ಯವಿಲ್ಲ ಎಂಬ ಮನಸ್ಥಿತಿಯವರಿದ್ದಾರೆ. ಕಾಮನ್ ಸೆನ್ಸ್ ಇದ್ದರೆ ಸಾಕು ಬದಲಿಸಲು. ನೋಡಿ, ಫಾರ್ಮುಲ ಕಲಿಯಬೇಕು ನಿಜ. ಅದರೊಂದಿಗೆ ಅದು ಹೇಗೆ ಉದ್ಭವಿಸಿತು ಎಂದು ನೋಟವನ್ನು ಹಾಯಿಸಬೇಕು. ಆಗ ಫಾರ್ಮುಲಾ ಮರೆತು ಹೋದರೂ ಅದನ್ನು ನೀವೇ ಕಂಡುಕೊಳ್ಳಬಲ್ಲಿರಿ.       ಹಾಗಾದರೆ ಹೇಗೆ ಓದಬೇಕು? ಈ ಮೇಲಿನ ಕೆಲವು ನಿಯಮಗಳನ್ನು ರಾತ್ರಿ 12 ಗಂಟೆಗೆ ಬಡಿದೆಬ್ಬಿಸಿ ಕೇಳಿದರೂ ಅದಕ್ಕೆ ಕಾರಣ ಸಹಿತ ಉತ್ತರ ನೀಡುವಂತಿರಬೇಕು! ಸಿಂಪಲ್ಲಾಗಿ ಹೇಳಬೇಕೆಂದರೆ, ಬೇಸಿಕ್ ಕಲಿಯತಕ್ಕದ್ದು.  ಓಮನ ನಿಯಮ(oh...